More

    ಶಿಕ್ಷಣದೊಂದಿಗೆ ಮಕ್ಕಳ ಪ್ರತಿಭೆ ಪೋಷಿಸಿ ಶಾಸಕ ಕೆ.ಎಸ್.ಈಶ್ವರಪ್ಪ ಸಲಹೆ

    ಶಿವಮೊಗ್ಗ: ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವ ಜತೆಗೆ ಅವರಿಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಸೂಕ್ತ ತರಬೇತಿ ನೀಡಿ ಕಲೆಯನ್ನು ಪೋಷಿಸಬೇಕಾದ್ದು ಪಾಲಕರ ಹಾಗೂ ಸಮಾಜದ ಕರ್ತವ್ಯ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ನಗರದಲ್ಲಿ ಶುಕ್ರವಾರ ಸಹಚೇತನ ನಾಟ್ಯಾಲಯದಿಂದ ಆಯೋಜಿಸಿದ್ದ ಮೂರು ದಿನಗಳ ನಾಟ್ಯಾರಾಧನಾ ರಾಷ್ಟ್ರೀಯ ನೃತ್ಯ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭರತನಾಟ್ಯ ನಮ್ಮ ದೇಶದ ಹೆಮ್ಮೆಯ ಪ್ರತೀಕ. ಇಂತಹ ಮಹತ್ವದ ಕಲೆಯನ್ನು ಸಾವಿರಾರು ಮಂದಿಗೆ ತಲುಪಿಸಿರುವ ಸಹಚೇತನ ನಾಟ್ಯಾಲಯ ಶಿವಮೊಗ್ಗದ ಆಸ್ತಿಯಿದ್ದಂತೆ ಎಂದರು.
    ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಯಾವುದೇ ಸಮಾಜ ಸಮರದ್ಧವಾಗಿದೆ ಎಂಬುದನ್ನು ಅಂದಾಜು ಮಾಡುವಾಗ ಅಲ್ಲಿನ ಆರ್ಥಿಕ ಪರಿಸ್ಥಿತಿಯನ್ನಷ್ಟೇ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಲ್ಲಿರುವ ಸಾಂಸ್ಕೃತಿಕ ಸಿರಿವಂತಿಕೆ, ಧಾರ್ಮಿಕ ಪ್ರಜ್ಞೆಯನ್ನೂ ಗಮನಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ಶಿವಮೊಗ್ಗ ಸಾಂಸ್ಕೃತಿಕ ಲೋಕದ ಕಿರೀಟವಿದ್ದಂತೆ ಸಹಚೇತನ ನಾಟ್ಯಾಲಯ ಈ ಕಿರೀಟದ ಗರಿ. ಶಿವಮೊಗ್ಗ ಜಿಲ್ಲೆ ಅನೇಕ ಸಾಂಸ್ಕೃತಿಕ ಕೇಂದ್ರಗಳನ್ನು ಹೊಂದಿದೆ. ಹೆಗ್ಗೋಡಿನ ನೀನಾಸಂ ರಂಗಭೂಮಿ ವಿಷಯದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿದೆ. ಶಿವಮೊಗ್ಗ ರಂಗಾಯಣದಿಂದಲೂ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
    ನಾಟ್ಯದ ಮೂಲಕ ಇಂದಿನ ಪೀಳಿಗೆಗೆ ಕೇವಲ ಕಲೆಗಳನ್ನು ಪರಿಚಯಿಸುವುದು ಮಾತ್ರವಲ್ಲದೇ ಅವರ ವ್ಯಕ್ತಿತ್ವ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ರಾಷ್ಟ್ರೀಯ ನೃತ್ಯ ಕಲಾವಿದರು ಮಾತ್ರವಲ್ಲದೇ ನಾಟ್ಯಾಲಯದ 131 ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಇಲ್ಲಿ ವೇದಿಕೆ ಒದಗಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಯು.ಉಮೇಶ್, ನೃತ್ಯಗುರು ಸಹನಾ ಚೇತನ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts