More

    ಮೇಯರ್ ಸ್ಥಾನಕ್ಕೆ 28ರಂದು ಚುನಾವಣೆ

    ಶಿವಮೊಗ್ಗ: ನಗರ ಪಾಲಿಕೆ ಮೇಯರ್ ಮೀಸಲಾತಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಸರ್ಕಾರ ಮತ್ತೊಮ್ಮೆ ಮೀಸಲಾತಿ ಪ್ರಕಟಿಸಿದೆ. ಮೇಯರ್ ಸ್ಥಾನವನ್ನು ಎಸ್ಸಿಗೆ ಹಾಗೂ ಉಪಮೇಯರ್ ಸ್ಥಾನವನ್ನು ಬಿಸಿಎಂಎ ಮಹಿಳೆಗೆ ಮೀಸಲಿರಿಸಲಾಗಿದೆ. ಅ.28ರಂದು ಚುನಾವಣೆಯನ್ನು ನಿಗದಿಪಡಿಸಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧಿಸೂಚನೆ ಹೊರಡಿಸಿದ್ದಾರೆ.
    ಮೇಯರ್ ಸ್ಥಾನವನ್ನು ಎಸ್ಟಿಗೆ ಮೀಸಲಿರಿಸಬೇಕೆಂಬ ನಗರ ಪಾಲಿಕೆ ಸದಸ್ಯ ನಾಗರಾಜ್ ಮನವಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ತೀರ್ಪು ಪ್ರಕಟವಾಗುವ ಮೊದಲೇ ಮೀಸಲಾತಿ ನಿಗದಿ ಮಾಡಿ ಚುನಾವಣಾ ವೇಳಾ ಪಟ್ಟಿಯನ್ನೂ ಪ್ರಕಟಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
    ನಾಲ್ಕನೇ ಅವಧಿಗೆ ಮೇಯರ್, ಉಪಮೇಯರ್ ಮೀಸಲಾತಿ ವಿಚಾರ ಇದುವರೆಗೆ ಸಾಕಷ್ಟು ತಿರುವುಗಳನ್ನು ಪಡೆದಿದೆ. ಮಾರ್ಚ್‌ನಲ್ಲೇ ಮೇಯರ್, ಉಪಮೇಯರ್ ಅವಧಿ ಮುಕ್ತಾಯವಾಗಿತ್ತು. ಆ.24ರಂದು ಮೀಸಲು ಘೋಷಣೆ ಮಾಡಿದ್ದ ಸರ್ಕಾರ ಮೇಯರ್ ಸ್ಥಾನವನ್ನು ಬಿಸಿಎಂಎ ಅಭ್ಯರ್ಥಿಗೆ ಹಾಗೂ ಉಪಮೇಯರ್ ಸ್ಥಾನವನ್ನು ಸಾಮಾನ್ಯ ಅಭ್ಯರ್ಥಿಗೆ ಮೀಸಲಿರಿಸಿತ್ತು.
    ಚುನಾವಣಾಧಿಕಾರಿಯೂ ಆಗಿದ್ದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಸೆ.13ಕ್ಕೆ ಚುನಾವಣೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದರು. ಬಳಿಕ ನ್ಯಾಯಾಲಯ ಚುನಾವಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿ, ಮೀಸಲಾತಿ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು.
    ಇಷ್ಟೆಲ್ಲಾ ಬೆಳವಣಿಗೆ ಬಳಿಕ ಸರ್ಕಾರ ಮೇಯರ್ ಸ್ಥಾನವನ್ನು ಎಸ್ಸಿಗೆ ಹಾಗೂ ಉಪಮೇಯರ್ ಸ್ಥಾನವನ್ನು ಬಿಸಿಎಂಎ ಮಹಿಳೆಗೆ ಮೀಸಲಿರಿಸಿ ಅಧಿಸೂಚನೆ ಪ್ರಕಟಿಸಿತ್ತು. ಬಳಿಕ ನ್ಯಾಯಾಲಯ ಸರ್ಕಾರದ ಮೀಸಲಾತಿ ಅಧಿಸೂಚನೆಗೆ ತಡೆಯಾಜ್ಞೆ ನೀಡಿತ್ತು. ಇದೀಗ ತಡೆಯಾಜ್ಞೆ ತೆರವುಗೊಂಡಿರುವುದರಿಂದ ಸರ್ಕಾರ ಹಿಂದಿನ ಮೀಸಲಾತಿಯಂತೆಯೇ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಮುಂದಾಗಿದೆ.
    ಯಾರಿಗೆ ಅವಕಾಶ?
    ಬಿಜೆಪಿಗೆ ಸಂಪೂರ್ಣ ಬಹುಮತ ಇರುವ ನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಎಸ್ಸಿಗೆ ಮೀಸಲಾಗಿರುವುದರಿಂದ ಶಾಂತಿ ನಗರ ವಾರ್ಡ್‌ನ ಧೀರರಾಜ್ ಹೊನ್ನವಿಲೆ ಹಾಗೂ ಗುಡ್ಡೇಕಲ್ ವಾರ್ಡ್‌ನ ಶಿವಕುಮಾರ್ ಈ ಸ್ಥಾನಕ್ಕೆ ಅರ್ಹರಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಹಿರಿಯ ಸದಸ್ಯೆ ಲಕ್ಷ್ಮೀ ಶಂಕರನಾಯ್ಕ, ಕಲ್ಪನಾ ರಮೇಶ್, ಆರತಿ ಪ್ರಕಾಶ್, ಭಾನುಮತಿ ವಿನೋದ್‌ಶೇಟ್ ಸೇರಿದಂತೆ 6 ಸದಸ್ಯೆಯರು ಅರ್ಹರಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts