More

    ದಿಕ್ಕು ತಪ್ಪಿಸುವ ಸಿನಿಮಾಗಳು ಅಪಾಯಕಾರಿ

    ಶಿವಮೊಗ್ಗ: ಜನರ ಮನ್ಸನ್ನು ಕಲುಷಿತಗೊಳಿಸಿ ಮಲೀನಗೊಳಿಸುವಂತೆ ಚಲನಚಿತ್ರಗಳು ಇಂದು ತೆರೆಮೇಲೆ ಕಾಣಿಸಿಕೊಳ್ಳುತ್ತಿರುವುದು ಕಳವಳದ ಸಂಗತಿಯಾಗಿದೆ. ಮಾರುಕಟ್ಟೆಯಲ್ಲಿ ಗೆದ್ದ ಮಾತ್ರಕ್ಕೆ ಸಿನಿಮಾದ ಗುಣಮಟ್ಟವೂ ಚೆನ್ನಾಗಿದೆ ಎನ್ನುವಂತಿಲ್ಲ. ದಿಕ್ಕು ತಪ್ಪಿಸುವ ಸಿನಿಮಾಗಳ ಬದಲು ಯುವಶಕ್ತಿಯಲ್ಲಿ ಸದಭಿರುಚಿ ತುಂಬುವ ಸಿನಿಮಾಗಳು ಇಂದಿನ ಅವಶ್ಯಕತೆಯಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್.ಲಿಂಗದೇವರು ಹೇಳಿದರು
    ಪುನೀತ್ ರಾಜ್‌ಕುಮಾರ್ ಸಂಸ್ಮರಣೆಯಲ್ಲಿ ಏರ್ಪಡಿಸಿದ್ದ ದಸರಾ ಚಲನಚಿತ್ರೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಸಿನಿಮಾದ ಉದ್ದೇಶ ಏನು ಎಂಬ ಪ್ರಶ್ನೆಗೆ ಅನೇಕ ಬಗೆಯ ಉತ್ತರಗಳು ಬರುತ್ತವೆ. ಕೆಲವರಿಗೆ ಸಿನಿಮಾ ಎಂದರೆ ಮನರಂಜನೆ, ಮತ್ತೆ ಕೆಲವರಿಗೆ ಹಣ ಗಳಿಕೆ. ಹಲವರ ಪಾಲಿಗೆ ಕಲೆ. ಹೀಗೆ ಅನೇಕ ಅಭಿಪ್ರಾಯಗಳಿವೆ ಎಂದರು.
    ಇಂದು ಅಂಗೈಯಲ್ಲೇ ಎಲ್ಲ ತಾಂತ್ರಿಕತೆಗಳು ಇರುವುದರಿಂದ ಉತ್ತಮ ಗುಣಮಟ್ಟದ ಚಲನಚಿತ್ರವನ್ನು ಮೊಬೈಲ್‌ನಿಂದಲೇ ಚಿತ್ರೀಕರಣ ಮಾಡಬಹುದಾಗಿದೆ. ಸಮಾಜವನ್ನು ಸಾಯಿಸಲು ನೀರಿಗೆ ವಿಷ ಹಾಕಬೇಕೆಂದಿಲ್ಲ. ಜನರ ಮನಸ್ಸನ್ನು ಕೆಡಿಸಿದರೂ ಸಾಕು. ಹೀಗಾಗಿ ಸಿನಿಮಾ ನಿರ್ಮಾಣದಲ್ಲಿ ಎಚ್ಚರಿಕೆ ಅವಶ್ಯ ಎಂದು ಅಭಿಪ್ರಾಯಪಟ್ಟರು.
    ನಟಿಯರಾದ ಮೇಘಶ್ರೀ, ಅಂಕಿತಾ ಅಮರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ದಸರಾ ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಮಂಜುಳಾ ಶಿವಣ್ಣ, ಬೆಳ್ಳಿ ಮಂಡಲ ಸಂಚಾಲಕ ವೈದ್ಯ, ಲಕ್ಷ್ಮೀ ಚಿತ್ರಮಂದಿರ ಮಾಲೀಕ ಅಶೋಕ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts