More

    ಮಾನವ ಸಂಪನ್ಮೂಲ ದೇಶದ ಶಕ್ತಿಯಾಗಲಿ: ಬೆಕ್ಕಿನ ಕಲ್ಮಠ ಶ್ರೀ

    ಶಿವಮೊಗ್ಗ: ಚೀನಾ ತನ್ನ ದೇಶದ ಜನಸಂಖ್ಯೆ ಹೆಚ್ಚಳವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿತು. ನಾವು ಜನಸಂಖ್ಯೆ ಶಾಪವೆಂದು ಪರಿಗಣಿಸಿದ್ದೇವೆ. ಆದರೆ ಇದನ್ನೇ ಶಕ್ತಿಯಾಗಿ ಮಾರ್ಪಡಿಸಿಕೊಂಡರೆ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
    ಜನಾಶೀರ್ವಾದ ಯಾತ್ರೆ ಅಂಗವಾಗಿ ಬೆಕ್ಕಿನ ಕಲ್ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಜಪಾನ್ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದೆ. ಇವುಗಳನ್ನು ಉತ್ಪಾದಕ ಕ್ಷೇತ್ರಗಳೆಂದು ಪರಿಗಣಿಸಿದೆ. ಆದರೆ ನಮ್ಮಲ್ಲಿ ಮಾತ್ರ ಇವೆರಡೂ ಅನುತ್ಪಾದಕ ಕ್ಷೇತ್ರಗಳಾಗಿರುವುದು ದುರಂತ ಎಂದರು.
    ಮೊದಲು ದೇಶಕ್ಕೆ ಒಳಿತಾಗಬೇಕು. ನಮ್ಮ ಬದುಕು ರೂಪಿಸಿಕೊಳ್ಳಲು ನೆರೆಹೊರೆಯವರ ಸಹಕಾರವೂ ಅಗತ್ಯ. ಹೀಗಾಗಿ ನೆರೆಹೊರೆಯವರೂ ಚೆನ್ನಾಗಿರಬೇಕು. ಮಠಗಳು ಸಮಾಜಕ್ಕೆ ಸದಾ ಒಳಿತನ್ನೇ ಬಯಸುತ್ತವೆ. ಹೀಗಾಗಿ ಮಠದ ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಕೋರಿದರು.
    ಕರ್ನಾಟಕದಿಂದ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ರಾಜ್ಯಕ್ಕೆ ಉತ್ತಮ ಯೋಜನೆಗಳನ್ನು ಕೊಡುಗೆಯಾಗಿ ನೀಡಲಿ. ರಾಜ್ಯದ ಗಡಿ ಸಮಸ್ಯೆಗಳು ಪರಿಹಾರವಾಗಲಿ, ಮೇಕೆದಾಟು ಯೋಜನೆ ಕಾರ್ಯಗತವಾಗಲಿ ಎಂದು ಆಶಿಸಿದರು.
    ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts