More

    ಮಲ, ಮೂತ್ರ ವಿಸರ್ಜನೆ ನಿಯಂತ್ರಿಸಿದರೆ ಅಪಾಯ: ಡಾ. ಯು.ಕೆ.ಕೃಷ್ಣ ಎಚ್ಚರಿಕೆ

    ಶಿವಮೊಗ್ಗ: ದೇಹದಿಂದ ಹೊರ ಹಾಕಲ್ಪಡಲು ನಡೆಯುವ ಸಹಜ ನೈಸರ್ಗಿಕ ಪ್ರಕ್ರಿಯೆ(ಮಲ, ಮೂತ್ರ ವಿಸರ್ಜನೆ, ಸೀನುವಿಕೆ, ಆಕಳಿಕೆ, ಹಸಿವು, ಬಾಯಾರಿಕೆ)ಯನ್ನು ಬಲವಂತವಾಗಿ ನಿಯಂತ್ರಿಸಿದರೆ ದೇಹದಲ್ಲಿ ಹಾನಿಕಾರಕ ಅಂಶಗಳು ಹೆಚ್ಚಾಗಿ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತವೆ.
    ಹೀಗೆಂದು ಎಚ್ಚರಿಕೆ ನೀಡಿದವರು ಎಂದು ಟೋಕಿಯೋದ ನಿಪ್ರೋನ್ ಆಯುರ್ವೇದ ಸ್ಕೂಲ್‌ನ ನಿರ್ದೇಶಕ, ಅಂತಾರಾಷ್ಟ್ರೀಯ ಆಯುರ್ವೇದ ತಜ್ಞ ಡಾ. ಯು.ಕೆ.ಕೃಷ್ಣ.
    ತಾಲೂಕಿನ ನಿದಿಗೆಯ ಟಿಎಂಎಇಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಶನಿವಾರ ವಿಶೇಷ ಉಪನ್ಯಾಸ ನೀಡಿದ ಅವರು, ಮೂತ್ರ ವಿಸರ್ಜನೆಯ ಸ್ವಯಂಪ್ರೇರಿತ ನಿರ್ಬಂಧವು ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ ಎಂದರು.
    ಅದರಣೀಯ ವೇಗವನ್ನು ತಡೆಗಟ್ಟುವುದರಿಂದ ವಾತ, ಪಿತ್ತ, ಕಫ ಹೆಚ್ಚಳವಾಗಿ ದೇಹದ ಆರೋಗ್ಯ ಸಂರಕ್ಷಣಾ ಕವಚ ಶಿಥಿಲವಾಗುತ್ತದೆ. ಕ್ಯಾನ್ಸರ್, ನರ ಸಂಬಂಧಿತ ತೊಂದೆರೆ ಕಾಣಿಸಿಕೊಳ್ಳುತ್ತದೆ. ದೀರ್ಘಾವಧಿಯ ಆರೋಗ್ಯ ಪೂರ್ಣ ಜೀವನಕ್ಕಾಗಿ ಅದರಣೀಯ ವೇಗವನ್ನು ಸರಳ ಹಾಗೂ ಸುಲಭವಾಗಿ ಸಂಚರಿಸಲು ಬಿಡಿ ಎಂದು ಕಿವಿಮಾತು ಹೇಳಿದರು.
    ಮೆದುಳು ತಂಪಾಗಲು ಆಕಳಿಕೆ ನೆರವು:
    ಆಕಳಿಕೆ ಒಂದು ನಿರಿಚ್ಛಾ ಪ್ರತಿಕ್ರಿಯೆಯಾಗಿದೆ. ಇದು ಸಾಮಾನ್ಯವಾಗಿ ಆಯಾಸ, ಒತ್ತಡ, ಮಂಪರು, ಬೇಸರ ಹಾಗೂ ಹಸಿವಿಗೆ ಸಂಬಂಧಿಸಿದ್ದಾಗಿದೆ. ಆಕಳಿಕೆಯನ್ನು ಹೆಚ್ಚಾಗಿ ಸೋಮಾರಿತನ ಹಾಗೂ ನಿದ್ದೆಯೊಂದಿಗೆ ಸಂಯೋಜಿಸಲಾಗಿದೆ. ಆಕಳಿಕೆಯು ರಕ್ತದಲ್ಲಿ ಆಮ್ಲಜನಕವು ಸರಿಯಾಗಿ ಸರಬರಾಜಾಗಲು ಮತ್ತು ಮೆದುಳು ತಂಪಾಗಲು ನೆರವಾಗುವುದು ಎಂದು ಡಾ. ಯು.ಕೆ.ಕೃಷ್ಣ ಹೇಳಿದರು.
    ಟಿಎಂಎಇಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆಡಳಿತಾಧಿಕಾರಿ ಜಿ.ಎ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಜಪಾನಿನ ಶೈಕ್ಷಣಿಕ ಸಂಸ್ಥೆಯಲ್ಲಿ 25 ವರ್ಷಗಳಿಂದ ಆಯುರ್ವೇದ ತಜ್ಞರಾಗಿರುವ ಡಾ. ಯು.ಕೆ.ಕೃಷ್ಣ ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅತ್ಯಂತ ಸರಳ ಬದುಕನ್ನು ರೂಡಿಸಿಕೊಂಡಿರುವ ಅವರು ಹೊಸ ತಲೆಮಾರಿನ ಆಯುರ್ವೇದ ವೈದ್ಯ ವಿದ್ಯಾರ್ಥಿಗಳು, ವೈದ್ಯರು ಹಾಗೂ ತಜ್ಞರಿಗೆ ಮಾದರಿಯಾಗಿದ್ದಾರೆ ಎಂದರು.
    ಉಪ ಪ್ರಾಚಾರ್ಯ ಡಾ. ವಿನಯ್, ಸದಾನಂದ ಜೋಷಿ, ಎಂ.ಎಲ್.ಅಶೋಕ್, ಡಾ. ಚಿತ್ರಲೇಖಾ, ಡಾ. ಅರುಣ, ಡಾ. ರಂಜಿನಿ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts