More

    ಸಂತೇಕಡೂರಲ್ಲಿ ಅದ್ದೂರಿ ಮದುವೆಗೆ ಬ್ರೇಕ್ !

    ಶಿವಮೊಗ್ಗ: ತಾಲೂಕಿನ ಸಂತೇಕಡೂರಿನಲ್ಲಿ ಕರೊನಾತಂಕದ ನಡುವೆಯೂ ಭಾನುವಾರ ಅದ್ದೂರಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದನ್ನು ತಾಲೂಕು ಆಡಳಿತ ತಡೆದಿದ್ದು ಸರಳವಾಗಿ ಆಚರಿಸುವಂತೆ ನೋಡಿಕೊಂಡಿದೆ.
    ಸಂತೇಕಡೂರಿನಲ್ಲಿ ನಿಖಿಲ್ ಮತ್ತು ಲಲಿತಾ ಎಂಬುವರ ವಿವಾಹ ಭಾನುವಾರ ನಿಗದಿಯಾಗಿತ್ತು. ಈ ಮದುವೆಗೆ ಸಂತೇಕಡೂರು ಗ್ರಾಪಂನಿಂದಲೇ ಕರೊನಾ ನಿಯಮಾವಳಿಗಳ ಪ್ರಕಾರ ಮದುವೆ ನಡೆಸಲು ಕುಟುಂಬಸ್ಥರು ಅನುಮತಿ ಪಡೆದಿದ್ದರು. 40ಕ್ಕಿಂತ ಅಧಿಕ ಜನ ಮದುವೆಯಲ್ಲಿ ಭಾಗಿಯಾಗಬಾರದು ಹಾಗೂ ಅದ್ದೂರಿ ಮದುವೆ ನಡೆಸಬಾರದೆಂದು ನಿರ್ದೇಶಿಸಲಾಗಿತ್ತು.
    ಆದರೂ ಶನಿವಾರವೇ ದೊಡ್ಡ ಪೆಂಡಾಲ್ ಹಾಗೂ ಎಲ್‌ಇಡಿ ಸ್ಕ್ರೀನ್‌ಗಳನ್ನೂ ಹಾಕಿಸಿ ಸಾವಿರ ಜನರನ್ನು ಸೇರಿಸುವ ಸಲುವಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪಿಡಿಒ ಬೆಟ್ಟೇಗೌಡ ಅವರು ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಕುಟುಂಬಸ್ಥರು ತಯಾರಿ ಮಾಡಿಕೊಂಡಿದ್ದರು.
    ಈ ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ತಹಸೀಲ್ದಾರ್ ಡಾ. ಎನ್.ಜೆ.ನಾಗರಾಜ್, ಕಂದಾಯ ಅಧಿಕಾರಿ ಅರುಣ್‌ಕುಮಾರ್, ತುಂಗಾನಗರ ಠಾಣೆ ಪಿಎಸ್‌ಐ ತಿರುಮಲೇಶ್ ಅದ್ದೂರಿ ಮದುವೆಗೆ ಬ್ರೇಕ್ ಹಾಕಿದರು. ಶಾಮಿಯಾನ, ಎಲ್‌ಇಡಿ ಟಿವಿಗಳನ್ನು ತೆರವುಗೊಳಿಸಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಆಗುವಂತೆ ನೋಡಿಕೊಂಡರು.
    ಈ ನಡುವೆ ನಾಲ್ಕು ದಿನಗಳ ಹಿಂದೆ ಇದೇ ಸಂತೇಕಡೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮದುವೆಗೆ 400ಕ್ಕೂ ಅಧಿಕ ಜನ ಸೇರಿದ್ದರು. ಆಗ ಅಧಿಕಾರಿಗಳು ಯಾಕೆ ಬಂದು ತಡೆಯಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts