More

    2025ಕ್ಕೆ ಲಕ್ಷ ಹಳ್ಳಿ ತಲುಪುವ ಗುರಿ: ಕಜಂಪಾಡಿ ಸುಬ್ರಹ್ಮಣ್ಯಭಟ್

    ಶಿವಮೊಗ್ಗ: ಆರ್‌ಎಸ್‌ಎಸ್(ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಶತಮಾನೋತ್ಸವದ ಹೊಸ್ತಿಲಲ್ಲಿದೆ. 2025ಕ್ಕೆ ಶತಮಾನೋತ್ಸವ ಜರುಗಲಿದ್ದು ಅಷ್ಟರೊಳಗೆ ಒಂದು ಲಕ್ಷಕ್ಕೂ ಅಧಿಕ ಹಳ್ಳಿಗಳಿಗೆ ಸಂಘವನ್ನು ತಲುಪುವಂತೆ ಮಾಡಬೇಕಿದೆ ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯಭಟ್ ಕರೆ ನೀಡಿದರು.
    ವಿನೋಬನಗರದ ಫ್ರೀಡಂಪಾರ್ಕ್‌ನಲ್ಲಿ ವಿಜಯದಶಮಿ ಅಂಗವಾಗಿ ಬುಧವಾರ ಪಥ ಸಂಚಲನಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆರು ಲಕ್ಷ ಹಳ್ಳಿಗಳ ಪೈಕಿ ಇದುವರೆಗೆ ಒಂದು ಲಕ್ಷ ಹಳ್ಳಿಗಳನ್ನೂಸಂಘದ ಚಟುವಟಿಕೆ ತಲುಪಿಲ್ಲ. ಈ ನಿಟ್ಟಿನಲ್ಲಿ ಸಂಘ ಕಾರ್ಯವನ್ನು ಇನ್ನಷ್ಟು ವಿಸ್ತರಿಸಬೇಕು. ಅದಕ್ಕಾಗಿ ನಿತ್ಯ ನಿರಂತರವಾಗಿ ಶಾಖೆಗಳನ್ನು ನಡೆಸಬೇಕು. ಇದರಿಂದ ಮಾತ್ರ ಸಂಘದ ವಿಸ್ತಾರದ ಉದ್ದೇಶ ಈಡೇರಲಿದೆ ಎಂದು ಹೇಳಿದರು.
    2025ಕ್ಕೆ ಸಂಘಕ್ಕೆ 100 ವರ್ಷ ತುಂಬಲಿದೆ. ಇದಕ್ಕೆ ಪೂರ್ವಭಾವಿಯಾಗಿ ಡಿ.11ರಂದು ಮಂಡಲ ಸಾಂಘಿಕ್ ನಡೆಸಬೇಕಿದೆ. ವಿಸ್ತಾರದ ದೃಷ್ಟಿಯಿಂದ ಸಮಾಜಕ್ಕೆ ಸಂಘದ ಪರಿಚಯ ಮಾಡಿಕೊಡಲು ಮಂಡಲ ಸಾಂಘಿಕಕ್ಕೆ ಶಕ್ತಿ ನೀಡಬೇಕು. ಇದಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಲು ಸ್ವಯಂ ಸೇವಕರು ಸಂಕಲ್ಪ ಮಾಡಬೇಕೆಂದರು.
    ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಜಿಲ್ಲಾ ಸಂಘಚಾಲಕ ಬಿ.ಎ.ರಂಗನಾಥ್ ಉಪಸ್ಥಿತರಿದ್ದರು. ರಾಜೇಂದ್ರ ನಗರ, ವೆಂಕಟೇಶ ನಗರದಲ್ಲಿ ಗಣವೇಷದಾರಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts