More

    ಕಚ್ಛಾ ವಸ್ತುಗಳ ಬೆಲೆ ಇಳಿಕೆಗೆ ಆಗ್ರಹಿಸಿ ಉದ್ಯಮಿಗಳ ಪ್ರತಿಭಟನೆ

    ಶಿವಮೊಗ್ಗ: ಕಳೆದೆರಡು ವರ್ಷಗಳಿಂದ ಕೈಗಾರಿಕಾ ಕಚ್ಛಾ ವಸ್ತುಗಳ ಬೆಲೆಯಲ್ಲಿ ಅನಿಯಂತ್ರಿತ ಏರಿಕೆಯಾಗಿದ್ದು ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುವ ಹಂತ ತಲುಪಿವೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಮಾಚೇನಹಳ್ಳಿಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಒಕ್ಕೂಟದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಕರೊನಾ ಸೇರಿ ವಿವಿಧ ಕಾರಣಗಳಿಂದ ಶೇ.15 ಕೈಗಾರಿಕೆಗಳು ಮುಚ್ಚಿದ್ದು ಶೇ.20 ಮುಚ್ಚುವ ಹಂತದಲ್ಲಿವೆ. ದೇಶದಲ್ಲಿ 2500ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣ ಕೈಗಾರಿಕೆಗಳು ಆರ್ಥಿಕ ಸಂಕಷ್ಟದಲ್ಲಿವೆ. ಬೃಹತ್ ಉಕ್ಕು ಉತ್ಪಾದನಾ ಘಟಕಗಳು ಲಾಭದಲ್ಲಿದ್ದರೂ ಕಚ್ಛಾ ವಸ್ತುಗಳ ಬೆಲೆ ಏರಿಸಿವೆ. ಇದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನುಂಗಲಾರದ ತುತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕೇಂದ್ರ ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಿ ಸಣ್ಣ ಕೈಗಾರಿಕೆಗಳ ಬೇಡಿಕೆ ಈಡೇರಿಸಬೇಕು. ಕಚ್ಛಾ ವಸ್ತುಗಳ ಬೆಲೆ ಇಳಿಸಿ ಕೈಗಾರಿಕೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
    ಒಕ್ಕೂಟದ ಅಧ್ಯಕ್ಷ ಎಂ.ಎ.ರಮೇಶ್ ಹೆಗಡೆ, ಉಪಾಧ್ಯಕ್ಷ ವೈ.ವಿ.ಮಧುಕರ್ ಜೋಯ್ಸ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಪದಾಧಿಕಾರಿಗಳಾದ ಜಿ.ವಿ.ಕಿರಣ್‌ಕುಮಾರ್, ವಿಶ್ವೇಶ್ವರಯ್ಯ, ಸಂತೋಷ್, ರಾಜು, ಜಿ.ವಿಜಯಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts