More

    ದೇಶದ ಅಭಿವೃದ್ಧಿಗೆ ಇಂಧನ ಸಂಪನ್ಮೂಲಗಳ ತಾರ್ಕಿಕ ಸದ್ಬಳಕೆ ಮುಖ್ಯ

    ಶಿವಮೊಗ್ಗ: ಪ್ರಸ್ತುತ ಕಾಲಮಾನಕ್ಕೆ ಅನುಗುಣವಾಗಿ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಪ್ರಾಮುಖ್ಯತೆಯನ್ನು ಸಮಾಜಕ್ಕೆ ತಿಳಿಸುವಲ್ಲಿ ಇಂಜಿನಿಯರ್‌ಗಳು ಪ್ರಮುಖ ಪಾತ್ರ ಮಹತ್ವದ್ದಾಗಿದೆ ಎಂದು ಎನ್‌ಐಟಿಕೆ ಸುರತ್ಕಲ್ ಪ್ರಾಧ್ಯಾಪಕ ಡಾ. ಪಾರ್ಥಿಬನ್ ಹೇಳಿದರು.
    ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸೋಮವಾರ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗದಿಂದ ಅಪ್ಲಿಕೇಶನ್ ಆಫ್ ಪವರ್ ಎಲೆಕ್ಟ್ರಾನಿಕ್ಸ್ ಸ್ಮಾರ್ಟ್ ಗ್ರಿಡ್, ರಿನ್ಯೂಬ್ಬಲ್ ಎನರ್ಜಿ ರಿಸೋರ್ಸಸ್ ಆ್ಯಂಡ್ ಇಂಡಸ್ಟ್ರಿಯಲ್ ಡ್ರೈವ್ ವಿಷಯದ ಕುರಿತು ನಾಲ್ಕು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಹಾಗೂ ಇಂಧನ ಸಂಪನ್ಮೂಲಗಳ ತಾರ್ಕಿಕ ಸದ್ಬಳಕೆ ಬಹಳ ಪ್ರಮುಖವಾದದ್ದು. ಆ ನಿಟ್ಟಿನಲ್ಲಿ ಘಟಿಸುವ ಸಂಶೋಧನೆಗಳು ತನ್ನದೇ ಆದ ಪ್ರಸ್ತುತತೆಯನ್ನು ಹೊಂದಿದೆ ಎಂದರು.
    ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ಆರ್.ನಾಗರಾಜ್ ಮಾತನಾಡಿ, ಅಧ್ಯಾಪಕ ಅಭಿವೃದ್ಧಿ ಕಾರ್ಯಾಗಾರಗಳು ಪ್ರಾಧ್ಯಾಪಕರು ತಮ್ಮ ಜ್ಞಾನಾರ್ಜನೆ ವೃದ್ಧಿಸುವಲ್ಲಿ ಮತ್ತು ಪ್ರಸ್ತುತ ಸ್ಥಿತಿಗತಿಗಳ ತಂತ್ರಜ್ಞಾನಗಳ ಆಮೂಲಾಗ್ರ ಮಾಹಿತಿ ಸಂಪಾದಿಸಲು ಸಹಕಾರಿ ಆಗಲಿದೆ ಎಂದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವಿ.ಚೈತನ್ಯಕುಮಾರ್, ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳು ಮತ್ತು ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಮಾಡಲು ಅವಕಾಶವಿರುವ ಮಜಲುಗಳ ಬಗ್ಗೆ ತಮ್ಮ ಕಾರ್ಯಕ್ಷೇತ್ರವನ್ನು ವೃದ್ಧಿಸಿಕೊಂಡು ಆ ನಿಟ್ಟಿನಲ್ಲಿ ಅಸಾಧಾರಣ ಪ್ರಯತ್ನಗಳನ್ನು ಮಾಡಬೇಕಿದೆ ಎಂದರು.
    ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಓಂ ಪ್ರಕಾಶ್ ಯಾದವ್, ಪ್ರಾಧ್ಯಾಪಕಿ ಸ್ವಾತಿ ಸೇರಿದಂತೆ ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಐವತ್ತಕ್ಕೂ ಅಧಿಕ ಬೋಧಕ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts