More

    ಸ್ಮಾರ್ಟ್‌ಸಿಟಿ ಎಂಡಿಯಿಂದಲೇ ನಷ್ಟ ವಸೂಲಿಗೆ ಆಗ್ರಹ

    ಶಿವಮೊಗ್ಗ: ನೆಹರು ಕ್ರೀಡಾಂಗಣದ ಎದುರಿನ ಹಾಕಿ ಮೈದಾನದಲ್ಲಿ ಕಾರ್ಯ ವಿಧಾನ ಮತ್ತು ನಿಯಮಗಳನ್ನು ಪಾಲಿಸದೇ ಸಂಸ್ಥೆಗೆ ಉಂಟು ಮಾಡಿರುವ ಆರ್ಥಿಕ ನಷ್ಟವನ್ನು ಸ್ಮಾರ್ಟ್‌ಸಿಟಿ ಎಂಡಿ ಚಿದಾನಂದ ವಟಾರೆ ಅವರಿಂದ ವಸೂಲಿ ಮಾಡಬೇಕೆಂದು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಹಾಕಿ ಕ್ರೀಡಾಂಗಣಕ್ಕೆ ಕಾರ್ಯವಿಧಾನ, ನಿಯಮ ಪಾಲಿಸದೆ ರದ್ದಾದ ಕಾಮಗಾರಿಯಿಂದ ಸ್ಮಾರ್ಟ್‌ಸಿಟಿಗೆ 13,80,325 ರೂ. ನಷ್ಟವಾಗಿದೆ. ಇದರಲ್ಲಿ ಟಾಟಾ ಕನ್ಸಲ್ಟೆನ್ಸಿಗೆ 13,16,329 ರೂ. ಮತ್ತು ಟೆಂಟರ್ ಕರೆದಿರುವ ವೆಚ್ಚ 63,996 ರೂ. ನೀಡಲಾಗಿದೆ. ಇದಕ್ಕೆ ಸ್ಮಾರ್ಟ್‌ಸಿಟಿ ಎಂಡಿ ವಟಾರೆ ಅವರೇ ಜವಾಬ್ದಾರರು ಎಂದು ದೂರಿದರು.
    ಸ್ಮಾರ್ಟ್‌ಸಿಟಿ ನಿರ್ವಹಣೆ ಕ್ರಮಬದ್ಧವಾಗಿರದ ಕಾರಣ ಕಾಮಗಾರಿ ರದ್ದಾಗಿದೆ. ಹಾಗಾಗಿ ಈ ಯೋಜನೆ ತೆಗೆದುಕೊಳ್ಳುವ ಮೊದಲು ಕ್ರಮಬದ್ಧವಾಗಿ ಕಾರ್ಯನಿರ್ವಹಿಸದೆ ಕಾಮಗಾರಿ ರದ್ದಾಗಿ ಸ್ಮಾರ್ಟ್‌ಸಿಟಿಗೆ 13.8 ಲಕ್ಷ ರೂ. ನಷ್ಟವುಂಟಾಗಿದೆ. ಹಾಗಾಗಿ ಈ ಹಣವನ್ನು ವಟಾರೆ ಅವರಿಂದ ವಸೂಲಾತಿಗೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
    ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಪ್ರಮುಖರಾದ ಸತೀಶ್‌ಕುಮಾರ್ ಶೆಟ್ಟಿ, ಸೀತಾರಾಂ, ಚನ್ನವೀರಪ್ಪ ಗಾಮನಗಟ್ಟಿ, ಮನೋಹರ್‌ಗೌಡ, ಜನಮೇಜಿರಾವ್, ವೆಂಕಟನಾರಾಯಣ್ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts