More

    ಕರೊನಾದಿಂದ ಶುರುವಾದ ಡಿಜಿಟಲ್ ಜಗತ್ತಿನಿಂದ ರಿಸ್ಕ್ ಹೆಚ್ಚಳ

    ಶಿವಮೊಗ್ಗ: ಕರೊನಾ ಜನರಿಗೆ ಡಿಜಿಟಲ್ ಜಗತ್ತನ್ನು ತೆರೆದಿಟ್ಟರೂ ಡಿಜಿಟಲ್ ರಿಸ್ಕ್(ಸಮಸ್ಯೆ)ನ್ನು ಮುಂದಿಟ್ಟಿತು. ಸಾಮಾಜಿಕ ಬದುಕು ದೂರವಾಗಿದ್ದರಿಂದ ಭಯ, ಆರೋಪಗಳ ಕಾಣದ ಉದ್ವೇಗಗಳು ಹೆಚ್ಚಾದವು ಎಂದು ಅಮೇರಿಕಾದ ಹೂಸ್ಟನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ವಿಘ್ನೇಶ್ ಎನ್ ಭಟ್ ಹೇಳಿದರು.
    ಭಾರತೀಯ ಸಮಾಜದ ಪುನರ್ ರಚನೆ: ಸಮಾಜಶಾಸ್ತ್ರಕ್ಕಿರುವ ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತು ಕುವೆಂಪು ವಿವಿ, ಕರ್ನಾಟಕ ಸಮಾಜಶಾಸ್ತ್ರ ಸಂಘ ಮತ್ತು ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ 14ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
    ಕರೊನಾ ಸಂಕಷ್ಟ ಜಾಗತಿಕ ಪಿಡುಗು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿತು. ಕರೊನಾವನ್ನು ಚೀನಾ ವೈರಸ್ ಎನ್ನಲಾಯಿತು. ಧರ್ಮವೊಂದನ್ನು ಕರೊನಾ ಹರಡುವಿಕೆಗೆ ಕಾರಣವೆಂದು ಆರೋಪಿಸಲಾಯಿತು. ಕ್ರೂಢಿಕೃತವಾಗಿ ಬದುಕುವ ಮಾದರಿಗಳು ದೂರವಾದದ್ದು, ಡಿಜಿಟಲ್ ಜಗತ್ತಿನ ಸುಳ್ಳು ಸುದ್ದಿ, ಕಳಂಕ-ಆರೋಪಣೆ, ಡಿಜಿಟಲ್ ಅಪಸವ್ಯಗಳು ಬೆಳೆಯಲು ಕಾರಣವಾಯಿತು. ಆದರೂ ಸಮಾಜಶಾಸ್ತ್ರಜ್ಞರು ಜನರೊಂದಿಗೆ ನೇರವಾಗಿ ಬೆರೆತು ನೋಡಿದಲ್ಲಿ ಸಂಶೋಧನಾತ್ಮಕ ಒಳನೋಟಗಳು ಅಪಾರವಾಗಿ ದೊರೆತು ಸಮಸ್ಯೆಗಳಿಗೆ ಪರಿಹಾರ ಸಿಗಬಲ್ಲದು ಎಂದು ಹೇಳಿದರು.
    ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ. ಗುರುಲಿಂಗಯ್ಯ ಪ್ರಾಸ್ತಾವಿಕ ಮಾತನಾಡಿದರು. ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಇಂದಿರಾ, ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎ.ರಾಮೇಗೌಡ, ಡಾ. ಶೇಖರ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಈ. ಚಂದ್ರಶೇಖರ್ ಹಾಜರಿದ್ದರು.
    ಎರಡು ದಿನಗಳ ಸಮ್ಮೇಳನದಲ್ಲಿ 15 ಉಪವಿಷಯಗಳನ್ನು ರಚಿಸಿದ್ದು, ರಾಜ್ಯ ಮತ್ತು ಹೊರರಾಜ್ಯದ ವಿವಿಧ ವಿವಿಗಳ 400ಕ್ಕೂ ಅಧಿಕ ಅಧ್ಯಾಪಕರು, ಸಂಶೋಧಕರು ತಮ್ಮ ಲೇಖನಗಳನ್ನು ಮಂಡಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts