More

    ಶಿವಮೊಗ್ಗದ ಹಿರಿಮೆ ಹೆಚ್ಚಿಸಲು ಕೈಗಾರಿಕೋದ್ಯಮಿಗಳ ಪಣ

    ಶಿವಮೊಗ್ಗ: ಶಿವಮೊಗ್ಗ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಜತೆಗೆ ಇದೀಗ ವ್ಯಾಪಾರ-ವಹಿವಾಟಿನಲ್ಲೂ ಇಡೀ ದೇಶದಲ್ಲೇ ಗಮನ ಸೆಳೆಯುತ್ತಿದೆ. ಆದರೆ ಸಣ್ಣಪುಟ್ಟ ಗಲಾಟೆಗಳೂ ಕೋಮು ವಿವಾದ ಪಡೆದುಕೊಳ್ಳುತ್ತಿರುವುದು ಶಿವಮೊಗ್ಗದ ಬ್ರಾೃಂಡ್‌ಗೆ ಚ್ಯುತಿ ಬರುತ್ತಿದೆ. ಅದನ್ನು ತಪ್ಪಿಸುವುದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿ. ಅದಕ್ಕೆ ಬೇಕಾದಂತಹ ಎಲ್ಲ ಸಹಕಾರವನ್ನೂ ನಾವು ನೀಡಲು ಸಿದ್ಧರಿದ್ದೇವೆ.
    ಇದು ಶಿವಮೊಗ್ಗದ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಪರಿಣಿತರ ಒಕ್ಕೊರಲ ಅಭಯ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷ ಎನ್.ಗೋಪಿನಾಥ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಹಿರಿಮೆ ಹೆಚ್ಚಿಸೋಣಾ ಸಂವಾದದಲ್ಲಿ ಕೋಮುಗಲಭೆ ನೆಪದಲ್ಲಿ ಕಳೆದ ಹಲವು ತಿಂಗಳಿಂದ ಉಂಟಾಗುತ್ತಿರುವ ಸಮಸ್ಯೆ, ಸಂಕಟ ಮತ್ತು ನೋವನ್ನು ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು.
    ಶಿವಮೊಗ್ಗದಲ್ಲಿ ಎಲ್ಲೇ ಗಲಾಟೆ ನಡೆದರೂ ಮೊದಲು ಗಾಂಧಿಬಜಾರ್ ಬಂದ್ ಮಾಡಿಸಲಾಗುತ್ತದೆ. ಕರೊನಾ ಬಳಿಕ ಕೈಗಾರಿಕೆಗಳು ಇದೀಗ ಚೇತರಿಸಿಕೊಳ್ಳುತ್ತಿವೆ. ಪ್ರತಿನಿತ್ಯ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದು ಪದೇ ಪದೇ ಬಂದ್ ಮಾಡಿಸುವುದರಿಂದ ವ್ಯಾಪಾರ-ವಹಿವಾಟಿಗೂ ತೊಂದರೆ ಆಗುತ್ತಿದೆ. ಇದೀಗ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದ್ದರೂ ಗಲಭೆಗಳಿಂದ ಶಿವಮೊಗ್ಗದಲ್ಲಿ ಬಂಡವಾಳ ಹೂಡಿಕೆದಾರರು ಉದ್ಯಮ ಸ್ಥಾಪಿಸಲು ಮುಂದೆ ಬರುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಇರುವ ಉದ್ಯಮಗಳೂ ಇಲ್ಲಿಂದ ಸ್ಥಳಾಂತರಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಮಾಚೇನಹಳ್ಳಿ ಕೈಗಾರಿಕ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್‌ಮೂರ್ತಿ, ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ, ಆಟೋ ಕಾಂಪ್ಲೆಕ್ಸ್ ಅಧ್ಯಕ್ಷ ಎ.ಎಂ.ಸುರೇಶ್, ಸಾಗರ ಇಂಡಸ್ಟ್ರೀಯಲ್ ಅಧ್ಯಕ್ಷ ಉಮೇಶ್ ಶಾಸ್ತ್ರಿ, ಹಾರ್ಡ್‌ವೇರ್ ಸಂಘದ ಅಧ್ಯಕ್ಷ ಉದಯಕುಮಾರ್, ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಶಿವರಾಜ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ತಲ್ಕಿನ್ ಅಹ್ಮದ್, ವಾಸವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ದೇವರಚಂದ್, ಡಾ. ಭರತ್, ರಾಜೇಂದ್ರ ಪ್ರಸಾದ್, ಬಿ.ಆರ್.ಸಂತೋಷ್, ಲಕ್ಷ್ಮೀದೇವಿ ಗೋಪಿನಾಥ, ಮೋಹನ್, ಮಹಮ್ಮದ್ ಹುಸೇನ್ ಮಾತನಾಡಿದರು.
    ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್, ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಸಂಘದ ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಉಪಾಧ್ಯಕ್ಷ ಪಿ.ಗೋಪಿನಾಥ್, ವಸಂತ್ ಹೋಬಳಿದಾರ್, ಜಿ.ವಿಜಯ್‌ಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts