More

    ಗೋಪಾಳದಲ್ಲಿ ಸಾರ್ವಜನಿಕರಿಂದಲೇ ರಾತ್ರಿ ಗಸ್ತು

    ಶಿವಮೊಗ್ಗ: ನಗರದ ಗೋಪಾಳ ಸುತ್ತಮುತ್ತ ದಿನೇದಿನೆ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಜನರೇ ಬೀದಿಗಿಳಿದಿದ್ದು ರಾತ್ರಿ ಗಸ್ತಿಗೆ ಮುಂದಾಗಿದ್ದಾರೆ.
    ಗೃಹ ಸಚಿವರ ತವರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಚಟುವಟಿಕೆ ಹೆಚ್ಚುತ್ತಿದೆ. ಅದನ್ನು ತಡೆಯಲು ಜನರು ಪೊಲೀಸರನ್ನು ನೆಚ್ಚಿಕೊಳ್ಳದೇ ತಾವೇ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ನಗರದ ಗೋಪಾಳಗೌಡ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ ಸೇರಿ ಸುತ್ತಲಿನ ಬಡಾವಣೆಗಳಲ್ಲಿ ಅಪರಾಧ ಕೃತ್ಯ ಎಸಗುತ್ತಿರುವವರನ್ನು ಹಿಡಿಯಲು ಹಾಗೂ ಅಪರಾಧ ಚಟುವಟಿಕೆಗೆ ತಡೆಯೊಡ್ಡಲು ಸ್ಥಳೀಯರು ರಾತ್ರಿ ಗಸ್ತು ನಡೆಸುತ್ತಿದ್ದಾರೆ.
    ಅವಳಿ ಬಡಾವಣೆಗಳಲ್ಲಿ ನೌಕರರು, ನಿವೃತ್ತ ನೌಕರರು, ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ವಾಸಿಸುತ್ತಿದ್ದು ಬೀಗ ಹಾಕಿರುವ ಮನೆಗಳ ಬಾಗಿಲು ಮುರಿದು ದೋಚುವ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಸ್ಥಳೀಯರು ಆತಂಕದಿಂದ ಬದುಕುವಂತಾಗಿದೆ. ಬಡಾವಣೆಯ ಉದ್ಯಾನಗಳು, ಖಾಲಿ ನಿವೇಶನಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಗಾಂಜಾ, ಮದ್ಯ ಸೇವನೆಯ ತಾಣಗಳಾಗಿ ಪರಿವರ್ತನೆಗೊಂಡಿವೆ.
    ಇದೀಗ ಗೋಪಾಲಗೌಡ ಬಡಾವಣೆ ನಿವಾಸಿಗಳು ಪೊಲೀಸರು ಕ್ರಮ ಕೈಗೊಳ್ಳುವುದನ್ನು ಕಾಯದೆ ಜನನಿಬಿಡ ಸ್ಥಳದಲ್ಲಿ ನಾಲ್ಕೈದು ಜನರ ಗುಂಪು ಮಾಡಿಕೊಂಡು ಗಸ್ತು ತಿರುಗುತ್ತಿದ್ದಾರೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಬಡಾವಣೆಯ ಎಲ್ಲ ರಸ್ತೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಗಮನಿಸುತ್ತಿದ್ದಾರೆ.
    ಇತ್ತೀಚೆಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ನಿವೃತ್ತ ಕೆಪಿಸಿ ಉದ್ಯೋಗಿಯೊಬ್ಬರ ಸರವನ್ನು ಹಾಡಹಗಲೇ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯರು ಎಸ್ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರಿಗೆ ಮನವಿ ಕೂಡ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts