More

    ಪ್ರಾಣಿ ಪ್ರಿಯರಿಗೆ ಮುದ ನೀಡಿದ ರಾಜ್ಯಮಟ್ಟದ ಶ್ವಾನ ಪ್ರದರ್ಶನ

    ಶಿವಮೊಗ್ಗ: ನಗರದ ಫ್ರೀಡಂಪಾರ್ಕ್‌ನಲ್ಲಿ ಭಾನುವಾರ ಪ್ರಾಣಿ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅದರಲ್ಲೂ ಶ್ವಾನ ಸಾಕುವವರಿಗಂತೂ ಎಲ್ಲಿಲ್ಲದ ಸಂಭ್ರಮ. ಮಕ್ಕಳಿಂದ ವಯಸ್ಕರವರೆಗೂ ನೆಚ್ಚಿನ ನಾಯಿಗಳನ್ನು ಮುದ್ದಾಡಿ ಖುಷಿ ಪಟ್ಟರು.
    ಸ್ಮಾರ್ಟ್‌ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಶ್ವಾನ ಪ್ರದರ್ಶನ ವಾರಾಂತ್ಯದ ರಸದೌತಣ ಒದಗಿಸಿತು. ಒಂದೆರಡಲ್ಲ ಹತ್ತಾರು ಬಗೆಯ ಶ್ವಾನಗಳನ್ನು ಜನರು ಕಣ್ತುಂಬಿಕೊಂಡಿದ್ದಲ್ಲದೆ, ಎತ್ತಿ ಮುದ್ದಾಡಿದರು. ನೆಚ್ಚಿನ ನಾಯಿಗಳ ಜತೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
    ವಿದೇಶಿ ತಳಿಗಳಾದ ಕಂಗಲ್, ಅಲ್ಲಾಬಾಯಿ ಸೇರಿ 250ಕ್ಕೂ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಶಿವಮೊಗ್ಗ, ಬೆಂಗಳೂರು, ಮೈಸೂರು, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿ ರಾಜ್ಯದ ಹಲವು ಜಿಲ್ಲೆ ಹಾಗೂ ಮಹಾರಾಷ್ಟ್ರ, ತಮಿಳುನಾಡು, ಕೇರಳದಿಂದಲೂ ನಾಯಿಗಳನ್ನು ಸ್ಪರ್ಧೆಗೆ ಕರೆತಂದಿದ್ದು ವಿಶೇಷವಾಗಿತ್ತು.
    ಪ್ರದರ್ಶನ ವೀಕ್ಷಿಸಲು ಶಿವಮೊಗ್ಗ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಪ್ರಾಣಿ ಪ್ರಿಯರು ಬಂದಿದ್ದು ವಿಶೇಷವಾಗಿತ್ತು. ಒಂದು ದಿನ ಸ್ಪರ್ಧೆಯಲ್ಲಿ 250ಕ್ಕೂ ಅಧಿಕ ನಾಯಿಗಳು ಪಾಲ್ಗೊಂಡಿದ್ದವು. ವಾರಾಂತ್ಯ ಆಗಿದ್ದರಿಂದ ನೂರಾರು ಜನರು ಕುಟುಂಬ ಸಮೇತರಾಗಿ ಬಂದು ಪ್ರದರ್ಶನ ವೀಕ್ಷಿಸಿದರು. ಪ್ರದರ್ಶನದ ಬಳಿಕ ಮಾಲೀಕರು ತಮ್ಮ ಪ್ರೀತಿಯ ಶ್ವಾನದೊಂದಿಗೆ ಫ್ಯಾಷನ್ ಶೋ ಹಾಗೂ ರ‌್ಯಾಂಪ್ ವಾಕ್ ಕೂಡ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts