More

    ಮಲೆನಾಡಲ್ಲಿ ಅಪರಾಧ ತಡೆಗೆ ಎಂಸಿಸಿಟಿಎನ್ನೆಸ್ಸ್ ಅಸ್ತ್ರ

    ಶಿವಮೊಗ್ಗ: ಮಲೆನಾಡಲ್ಲಿ ದಿನದಿಂದ ದಿನಕ್ಕೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ದರೋಡೆ, ಕಳ್ಳತನ, ಕೊಲೆ, ಸುಲಿಗೆಗಳು ಜನರನ್ನು ಭಯ ಭೀತಗೊಳಿಸುತ್ತಿವೆ. ಹಾಗಾಗಿ ಶತಾಯಗತಾಯ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ತಂತ್ರಜ್ಞಾನದ ಮೊರೆ ಹೋಗಿರುವ ಪೊಲೀಸ್ ಇಲಾಖೆ ಎಂಸಿಸಿಟಿಎನ್‌ಎಸ್ (ಮೊಬೈಲ್-ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರಾೃಕಿಂಗ್ ನೆಟ್‌ವರ್ಕ್ ಸಿಸ್ಟಂ) ಅಪ್ಲಿಕೇಷನ್‌ನ್ನು ಅಭಿವೃದ್ಧಿಪಡಿಸಿದೆ.
    ಕಳೆದ ಮೂರ್ನಾಲ್ಕು ದಿನದಲ್ಲೇ ಜಿಲ್ಲೆಯಲ್ಲಿ ಎರಡು ಕೊಲೆ, ಹತ್ತಾರು ಹಲ್ಲೆ ಪಕರಣಗಳು ನಡೆದಿವೆ. ಗಾಂಜಾ ಸೇವನೆ ಸೇರಿದಂತೆ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸುವುದು ಖಾಕಿ ಪಡೆಗೆ ತಲೆನೋವು ತಂದಿಟ್ಟಿದೆ. ಅದಕ್ಕಾಗಿ ಅನುಮಾನಾಸ್ಪದ ವ್ಯಕ್ತಿಗಳ ಕ್ರಿಮಿನಲ್ ಚಟುವಟಿಕೆ ಪತ್ತೆಗೆ ಪೊಲೀಸ್ ಇಲಾಖೆ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದು ಅಪ್ಲಿಕೇಷನ್‌ನ್ನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೊಬೈಲ್ ಫೋನ್‌ಗಳಲ್ಲಿ ಈಗಾಗಲೇ ಅಳವಡಿಸಿದೆ.
    ವಿಶೇಷವಾಗಿ ರಾತ್ರಿಗಸ್ತು ಕರ್ತವ್ಯವನ್ನು ನಿರ್ವಸಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಿದ್ದು, ಅವರು ಫಿಂಗರ್ ಪ್ರಿಂಟ್ ಸ್ಕಾ ್ಯನರ್ ಗಳನ್ನು ತಮ್ಮ ಮೊಬೈಲ್ಗೆ ಅಳವಡಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಬೆಳರಳನ್ನು ಸ್ಕ್ಯಾನ್ ಮಾಡಿ ಅವರು ಅಪರಾಧಿಕ ಹಿನ್ನೆಲೆ ಇರುವುದು ಕಂಡುಬಂದಲ್ಲಿ ಠಾಣೆಗೆ ಕರೆತಂದು ಅವರ ಹಿನ್ನೆಲೆಯನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
    ಅಪರಾಧಿಗಳು ತಪ್ಪಿಸಿಕೊಳ್ಳುವುದು ಅಸಾಧ್ಯ:
    ಹಲವು ವೇಳೆ ಅಪರಾಧ ಚಟುವಟಿಕೆ ಹಿನ್ನೆಲೆಗಳನ್ನು ಹೊಂದಿರುವವರು ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದ ವೇಳೆ ತಮ್ಮ ಅಪರಾಧಿಕ ಹಿನ್ನೆಲೆಯ ಪೂರ್ವಾಪರ ಮರೆಮಾಚಿ ತಪ್ಪಿಸಿಕೊಳ್ಳುತ್ತಾರೆ. ಯಾವುದೋ ಊರು, ಹೆಸರು, ನೆಪ ಹೇಳುತ್ತಿದ್ದರು. ಪೊಲೀಸರಿಗೂ ಅನುಮಾನಾಸ್ಪದ ವ್ಯಕ್ತಿಗಳ ಕ್ರಿಮಿನಲ್ ಚಟುವಟಿಕೆ ವಿವರ ತಿಳಿದುಕೊಳ್ಳುವುದು ಕಷ್ಟಕರವಾಗಿತ್ತು. ಇದೀಗ ಹೊಸ ತಂತ್ರಜ್ಞಾನದಿಂದ ಕ್ಷಣಮಾತ್ರದಲ್ಲಿಯೇ ಅವರಿರುವ ಸ್ಥಳದಲ್ಲಿಯೇ ಸಂಪೂರ್ಣ ಚಿತ್ರಣ ಪೊಲೀಸರಿಗೆ ಲಭ್ಯವಾಗಲಿದೆ. ಇದರಿಂದ ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಗೂ ಅಪರಾಧಿಗಳ ಪತ್ತೆಗೆ ಸಹಕಾರಿಯಾಗಲಿದೆ.
    ಪ್ರತಿ ಠಾಣೆಯ ಇಬ್ಬರರ ಮೊಬೈಲ್‌ಗೆ ಆ್ಯಪ್:
    ವಿನೂತನ ಆ್ಯಪ್‌ನ್ನು ಜಿಲ್ಲಾ ಪೊಲೀಸರಿಗೆ ರಾಜ್ಯ ಗೃಹ ಇಲಾಖೆ ನೀಡಿದ್ದು ಜಿಲ್ಲೆಯ ಪ್ರತಿ ಪೊಲೀಸ್ ಸ್ಟೇಷನ್‌ಗೆ ತಲಾ ಇಬ್ಬರ ಮೊಬೈಲ್ ಆ್ಯಪ್ ಅಳವಡಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಆ್ಯಪ್ ಮೂಲಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
    ಏನಿದು ಮೊಬೈಲ್ ಟ್ರಾೃಕಿಂಗ್?:
    ಪೊಲೀಸ್ ಇಲಾಖೆಯು ಮೊಬೈಲ್ ಫೋನ್ ಆಧಾರಿತ ವಿನೂತನವಾದ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ ಸಿಸ್ಟಂನ್ನು ಅಭಿವೃದ್ಧಿಪಡಿಸಿದ್ದು ಅನುಮಾನಾಸ್ಪದ ವ್ಯಕ್ತಿಗಳ ಬೆರಳುಗಳನ್ನು ಫಿಂಗರ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ಸ್ಕ್ಯಾನ್ ಮಾಡಿದಾಗ ಆ ವ್ಯಕ್ತಿಗಳು ಈ ಹಿಂದೆ ಯಾವುದಾದರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಪರಾಧಿಕ ಹಿನ್ನೆಲೆಯ ಸಮಗ್ರ ವಿವರಗಳು ಕ್ಷಣಮಾತ್ರದಲ್ಲಿಯೇ ಸಿಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts