More

    ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ – ಶಿಕ್ಷಕ ಮಿತ್ರ ಆಪ್ ಮೂಲಕ ಅರ್ಜಿ ಸಲ್ಲಿಕೆ

    ಬೆಂಗಳೂರು : ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ. ಶಿಕ್ಷಕ ಮಿತ್ರ ಆಪ್ ಮೂಲಕ ಶಿಕ್ಷಕರು ಅರ್ಜಿ ಸಲ್ಲಿಸುತ್ತಿದ್ದಾರೆ.

    ಶಿಕ್ಷಕ ಮಿತ್ರ ಆಪ್ ಮೂಲಕ ಸ್ವೀಕೃತವಾಗಿರುವ ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಪರಿಶೀಲನೆ ಆಗಲಿದೆ. ಬಳಿಕ ಉಪನಿರ್ದೇಶಕರ ಹಂತದಲ್ಲಿ ಪರಿಶೀಲನೆ ನಡೆಯಲಿದ್ದು, ಜೇಷ್ಠತೆಯ ಆಧಾರದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆದು ಅಂತಿಮವಾಗಿ ಸ್ಥಳ ನಿಯುಕ್ತಿಗೊಳ್ಳಲಿದೆ. ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ.

    ಇದನ್ನೂ ಓದಿ: ರಸ್ತೆಗಳಲ್ಲಿ ವಸ್ತುಗಳ ಮಾರಾಟಕ್ಕೆ ಮಕ್ಕಳ ಬಳಕೆ; ಹೈಕೋರ್ಟ್ ಹೇಳಿದ್ದೇನು?

    ಸುಲಭ ವಿಧಾನದ ಮೂಲಕ ಶಿಕ್ಷಕರು ವರ್ಗಾವಣೆ ಅರ್ಜಿ ಸಲ್ಲಿಸುತ್ತಿದ್ದಾರೆ. ಬುಧವಾರ ಸಂಜೆ ವೇಳೆಗೆ ಪರಸ್ಪರ ವರ್ಗಾವಣೆ ವಿಭಾಗದಲ್ಲಿ ಘಟಕದ ಒಳಗೆ 2,915 ಮತ್ತು ಘಟಕದ ಹೊರಗೆ 391 ಅರ್ಜಿ ಸ್ವೀಕೃತವಾಗಿದೆ. ಕೋರಿಕೆ ವರ್ಗಾವಣೆ ವಿಭಾಗದಲ್ಲಿ ಘಟಕದ ಒಳಗೆ 175 ಅರ್ಜಿ ಸ್ವೀಕೃತವಾಗಿದೆ. ಅಂದಾಜು ಎರಡು ತಿಂಗಳು ಈ ಪ್ರಕ್ರಿಯೆ ನಡೆಯಲಿದೆ.

    ಬೃಹತ್ ಪ್ರಮಾಣದ ನಕಲಿ ನೋಟು – ನಾಲ್ವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts