More

    ಪಾಕಿಸ್ತಾನದ ಹಿಂದು ನಿರಾಶ್ರಿತರಿಗೆ ಕ್ರಿಕೆಟಿಗ ಶಿಖರ್ ಧವನ್ ನೆರವು

    ನವದೆಹಲಿ: ಕರೊನಾ ಹಾವಳಿಯಿಂದಾಗಿ ಕಳೆದ 3 ತಿಂಗಳಿನಿಂದ ಮನೆಯಲ್ಲೇ ಲಾಕ್ ಆಗಿದ್ದ ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್ ಶನಿವಾರ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ಪಾಕಿಸ್ತಾನದ ಹಿಂದು ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ ಧವನ್, ಕರೊನಾ ಹಾವಳಿಯಿಂದ ಅವರು ಎದುರಿಸಿದ್ದ ಸಂಕಷ್ಟಗಳ ನಿವಾರಣೆಗಾಗಿ ನೆರವು ನೀಡಿದ್ದಾರೆ.

    ಈಗಾಗಲೆ ಹಲವಾರು ಹಾಲಿ-ಮಾಜಿ ಕ್ರಿಕೆಟಿಗರ ಪಿಎಂ-ಕೇರ್ಸ್‌ಗೆ ದೇಣಿಗೆಗಳನ್ನು ನೀಡಿದ್ದಾರೆ. ಆದರೆ ಶಿಖರ್ ಧವನ್ ನೇರವಾಗಿಯೇ ಹೋಗಿ ಆದರ್ಶ ನಗರದಲ್ಲಿರುವ ಪಾಕ್ ಹಿಂದು ನಿರಾಶ್ರಿತರಿಗೆ ನೆರವಾಗಿದ್ದಾರೆ. ಮಾಡ್ಯುಲರ್ ಟಾಯ್ಲೆಟ್‌ಗಳನ್ನು ನೀಡಿರುವ ಧವನ್ ಅವರೊಂದಿಗೆ ಅಮೂಲ್ಯ ಸಮಯವನ್ನೂ ಕಳೆದು ಮನೋಸ್ಥೈರ್ಯ ತುಂಬಿದ್ದಾರೆ. ಶಿಬಿರದಲ್ಲಿದ್ದ ಕೆಲ ಮಕ್ಕಳಿಗೆ ಕ್ರಿಕೆಟ್ ಕಿಟ್ ಕೂಡ ವಿತರಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಅಗತ್ಯವಿರುವಾಗಲೆಲ್ಲ ಬಂದು ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಈ ನಿರಾಶ್ರಿತರ ಶಿಬಿರ ಇಲ್ಲಿ ಇದೆ.

    ಇದನ್ನೂ ಓದಿ: VIDEO| ಜಿಮ್‌ನಲ್ಲಿ ವಿರಾಟ್ ಕೊಹ್ಲಿ ನೆಚ್ಚಿನ ವ್ಯಾಯಾಮ ಯಾವುದು ಗೊತ್ತೇ?

    ಲಾಕ್‌ಡೌನ್ ಬಳಿಕ ಮರಳಿ ಕಣಕ್ಕಿಳಿಯುವ ಹಂಬಲವನ್ನೂ 34 ವರ್ಷದ ಧವನ್ ಇದೇ ವೇಳೆ ವ್ಯಕ್ತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಭಾರತ ತಂಡದ ವರ್ಷಾರಂಭದ ನ್ಯೂಜಿಲೆಂಡ್ ಪ್ರವಾಸವನ್ನು ಅವರು ತಪ್ಪಿಸಿಕೊಂಡಿದ್ದರು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಲ್ಲಿ ಮರಳಿ ಕಣಕ್ಕಿಳಿಯಬೇಕಾಗಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈ ಸರಣಿ ಮುಂದೂಡಲ್ಪಟ್ಟಿತ್ತು. ಅಂಕಿ-ಅಂಶಗಳ ಪ್ರಕಾರ ಅವರು ಈ ವರ್ಷ 3 ಟಿ20 ಮತ್ತು 3 ಏಕದಿನ ಪಂದ್ಯವನ್ನಷ್ಟೇ ಆಡಿದ್ದಾರೆ.

    ಚೀನಾ ಬ್ಯಾಡ್ಮಿಂಟನ್ ದಿಗ್ಗಜ ಲಿನ್ ಡ್ಯಾನ್ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts