More

    ಶಿಕಕ ರಾಷ್ಟ್ರದ ನಿರ್ಮಾತೃ

    ಹುನಗುಂದ: ಶಿಕ್ಷಕರು ನಾಲ್ಕು ಗೋಡೆಗಳ ಮಧ್ಯೆ ನೀಡುವ ಉತ್ತಮ ಶಿಕ್ಷಣದಿಂದ ವಿದ್ಯಾರ್ಥಿ ರಾಷ್ಟ್ರ ನಿರ್ಮಾಣ ಶಕ್ತಿ ಪಡೆಯುತ್ತಾನೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶರಣಪ್ಪ ಕಾರಕಲ್ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹುನಗುಂದ ತಾಲೂಕು ಘಟಕ ಸೋಮವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮತ್ತು ನೂತನವಾಗಿ ನೇಮಕಗೊಂಡ ಶಿಕ್ಷಕರ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ನಾವು ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡಿದ್ದು ನಮ್ಮ ಪೂರ್ವಜನ್ಮದ ಪುಣ್ಯ. ಶಿಕ್ಷಕ ರಾಷ್ಟ್ರದ ನಿರ್ಮಾತೃ, ಪಾವಿತ್ರೃವಾದ ಈ ವೃತ್ತಿಯನ್ನು ತಪಸ್ಸನ್ನಾಗಿ ಮಾಡಿಕೊಂಡು ಮಕ್ಕಳ ಜತೆಗೆ ದೇಶದ ಭವಿಷ್ಯ ರೂಪಿಸುವುದು ನಮ್ಮ ಕರ್ತವ್ಯ ಎಂದರು.
    ವಿಮ ಕಾಲೇಜು ಕನ್ನಡ ಉಪನ್ಯಾಸಕ ಎಸ್.ಎಸ್. ಮುಡಪಲದಿನ್ನಿ ಉಪನ್ಯಾಸ ನೀಡಿ, ಸಮಯ ಮತ್ತು ವೃತ್ತಿಗೆ ಬದ್ಧರಾಗಿ ಅದರ ಸುತ್ತಲಿನ ಆಯಾಮಗಳ ಬಗ್ಗೆ ಸಂಪೂರ್ಣ ಅಧ್ಯಯನಶೀಲರಾಗಬೇಕು. ತತ್ವ ಸಿದ್ಧಾಂತ, ವಚನ, ಸಂಸ್ಕಾರ, ಏರಿಳಿತ, ಮೌಲ್ಯಧಾರಿತ ವಿಚಾರಗಳು ಸೇರಿ ಎಲ್ಲ ಪ್ರಸಂಗಗಳು ಬೋಧನೆಯಲ್ಲಿ ಇರಬೇಕು ಎಂದರು.

    ನೂತನ ಶಿಕ್ಷಕರಿಗೆ ಪುಷ್ಪ ನೀಡಿ ಗೌರವಿಸಿ ಸ್ವಾಗತಿಸಲಾಯಿತು. ಪಪ್ರಶಾಶಿ ಸಂಘದ ತಾಲೂಕ ಅಧ್ಯಕ್ಷ ಅಂದಾನಯ್ಯ ವಸದ ಅಧ್ಯಕ್ಷತೆ ವಹಿಸಿದ್ದರು.
    ರಂಗನಾಥ ಮಾಸರಡ್ಡಿ, ಸಂಗಮೇಶ ಪಾಟೀಲ, ಲಕ್ಷ್ಮಣ ಮೀಸಿ, ಗೋಪಾಲ ಮೇಟಿ, ಶಿವಯೋಗಿ ಕುಂಬಾರ, ಸುಜಾತ ಹಂಚನಾಳ, ಜಕೀರಹುಸೇನ್ ಗಡೇದ, ಅಬ್ದುಲ್ ವಾಲಿಕಾರ, ಕೆ.ಎಚ್. ಓಲೇಕಾರ ಇದ್ದರು.

    ಶಿಕ್ಷಕ ಶ್ರೀಕಾಂತ ಆಡೀನ್ ಸ್ವಾಗತಿಸಿದರು. ಅನುಪಮಾ ಪಾಡಮುಖಿ ನಿರೂಪಿಸಿದರು. ಸುಜಾತಾ ಹಂಚನಾಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts