More

    ಆರೋಗ್ಯ ಶಿಬಿರ ಗ್ರಾಮೀಣರಿಗೆ ಅನುಕೂಲ

    ಶಿಗ್ಗಾಂವಿ: ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಶಿಬಿರಗಳಿಂದ ತುಂಬ ಸಹಕಾರಿಯಾಗಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷೃ ತೋರದೆ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದು ಗ್ರಾಮ ಆರೋಗ್ಯ ತಾಲೂಕು ಸಂಯೋಜಕ ಶಿವಾನಂದ ಗದಿಗೇರವರ ಹೇಳಿದರು.
    ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ಜಿಲ್ಲಾ ವಿಶೇಷಚೇತನರ ಪುನರ್ವಸತಿ ಕೇಂದ್ರ, ಕೋಣನಕೇರಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂಗವಿಕಲರಿಗೆ ಉಚಿತ ಆರೋಗ್ಯ ಶಿಬಿರ ಮತ್ತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಜಿಲ್ಲಾ ವಿಶೇಷ ಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಅಂಕಿತಾ ಮಾತನಾಡಿ, ಗ್ರಾಪಂಗಳಿಗೆ ಬಿಡುಗಡೆ ಆಗುವ 15ನೇ ಹಣಕಾಸಿನ ಯೋಜನೆಯಡಿ ವಿಶೇಷಚೇತನರ ಅಭಿವೃದ್ಧಿಗಾಗಿ ಶೇ. 5ರಷ್ಟು ಅನುದಾನ ಮೀಸಲಿಡಲಾಗಿದೆ. ಅಧಿಕಾರಿಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿರುವ ಎಲ್ಲ ವಿಶೇಷಚೇತನರನ್ನು ಗುರುತಿಸಿ ಆವರ ನೆರವಿಗೆ ಮುಂದಾಗಬೇಕು ಎಂದರು.
    ಗ್ರಾಪಂ ಅಧ್ಯಕ್ಷೆ ಬಸೊಭೀ ಗೌವಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಎಂಆರ್‌ಡಬ್ಲುೃ ತಾಲೂಕು ಸಂಯೋಜಕ ಸಿದ್ದಪ್ಪ ಮೂಸಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಚೆನ್ನಬಸಪ್ಪ ಮಾಸನಕಟ್ಟಿ, ಫಕೀರೇಶ ಬಾರ್ಕಿ, ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts