More

    ಶೆಟ್ಟೆಪ್ಪನವರ ಸೇವೆ ಸ್ಮರಣೀಯ

    ಬಾದಾಮಿ: ವೀರಪುಲಿಕೇಶಿ ವಿದ್ಯಾ ಸಂಸ್ಥೆ ಮತ್ತು ಸಹಕಾರಿ ಬ್ಯಾಂಕ್ ಸಂಸ್ಥಾಪಕ ಸಾಹುಕಾರ ದಿ. ಕೆ.ಎಂ. ಪಟ್ಟಣಶೆಟ್ಟಿ, ಅಭಿವೃದ್ಧಿ ದೂರದೃಷ್ಟಿಯಂತೆ ಮುನ್ನಡೆಸಿದ ದಿ. ಜಿ.ಎಸ್. ಮಮದಾಪುರ ಅವರ ಕೊಡುಗೆ ಎಂದಿಗೂ ಸ್ಮರಣೀಯ. ನನ್ನ ರಾಜಕೀಯ ಜೀವನದಲ್ಲಿ ಈ ಮಟ್ಟಕ್ಕೆ ಬರಲು ಜಿ.ಎಸ್. ಮಮದಾಪುರ(ಶೆಟ್ಟೆಪ್ಪನವರ) ಸ್ಫೂರ್ತಿ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

    ಇಲ್ಲಿನ ವೀರಪುಲಿಕೇಶಿ ವಿದ್ಯಾ ಸಂಸ್ಥೆಯಲ್ಲಿ ಲಿ. ಗುರುಪಾದಪ್ಪ ಸಿದ್ರಾಮಪ್ಪ ಮಮದಾಪುರ ಅವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

    ಶೆಟ್ಟೆಪ್ಪ ಅವರು ಜಾತ್ಯತೀತವಾಗಿ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ಧಿಗ್ಗಜರಾಗಿದ್ದರು. ರಾಜಕೀಯವಾಗಿ ಅವರಿಗೆ ಸ್ಥಾನಮಾನ ಆಗಬೇಕಿತ್ತು. ಮಮದಾಪುರ ಕುಟುಂಬದ ಕೇಂದ್ರ ಬಿಂದುವಾಗಿದ್ದರು. ಈ ಮನೆತನವೇ ಸಾಮಾಜಿಕ ಸೇವೆ ಮಾಡುತ್ತ ಬಂದಿದೆ ಎಂದ ಅವರು, ರಡ್ಡಿ ಕಾಂಗ್ರೆಸ್ ಮತ್ತು ಜನತಾದಳದ ಮೂಲಕ ಮತ್ತೆ ಬಾದಾಮಿಯ ವಿವಿಧ ಭಾಗದ ಮುಖಂಡರನ್ನು ಒಗ್ಗೂಡಿಸಿದ ಆಡಳಿತಕ್ಕೆ ಜಿ.ಎಸ್. ಮಮದಾಪುರ ಅವರಿಂದ ಅಸ್ತಿತ್ವ ಬಂದಿದೆ. ಅಭಿವೃದ್ಧಿ ಚಿಂತನೆ, ಶೈಕ್ಷಣಿಕ ಮತ್ತು ಸಹಕಾರಿ ಸಾಮಾಜಿಕ ಸೇವಾಭಾವದಿಂದ ಶೆಟ್ಟೆಪ್ಪನವರ ವ್ಯಕ್ತಿತ್ವ ಆಕರ್ಷಣೀಯವಾಗಿತ್ತು ಎಂದರು.

    ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹಾನಗಲ್ ಕುಮಾರ ಶ್ರೀಗಳ ಆಶೀರ್ವಾದದಿಂದ ಕಲ್ಲಪ್ಪನವರು ಮತ್ತು ಗುರುಪಾದಪ್ಪನವರಿಂದ ಈ ಭಾಗಕ್ಕೆ ಅನನ್ಯ ಮತ್ತು ಸ್ಮರಣೀಯ ಸೇವೆ ಸಾಧ್ಯವಾಗಿದೆ. ಕಣ್ಣಿಗೆ ಕಾಣದ ಜ್ಞಾನ ಪವಿತ್ರವಾದದ್ದು ಶಿಕ್ಷಣ. ಹಿರಿಯರು ಸಂಸ್ಥೆ ಕಟ್ಟಿ ಜ್ಞಾನದ ಹಸಿವು ನೀಗಿಸಿದ್ದಾರೆ ಎಂದು ತಿಳಿಸಿದರು.

    ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿದರು.

    ಸಂಸ್ಥೆ ಕಾರ್ಯಾಧ್ಯಕ್ಷ ಎ.ಸಿ. ಪಟ್ಟಣದ, ರಾಜ್ಯ ಕಾಸ್ಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಉಳವಪ್ಪ ದಾಸನೂರ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಸ್ವಾಗತಿಸಿದರು. ಸಂಸ್ಥೆ ಗೌರವಾಧ್ಯಕ್ಷ ಅಶೋಕ ಕಲ್ಯಾಣಶೆಟ್ಟಿ ವಂದಿಸಿದರು.

    ಎಸ್.ಬಿ. ಕಲಹಾಳ, ನಿವೃತ್ತ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪತ್ರಿಬಸನಗೌಡ್ರ, ಎ್.ಆರ್. ಪಾಟೀಲ, ಎಸ್.ಬಿ. ಕಲಹಾಳ, ಜೆ.ಎಸ್. ಮಮದಾಪುರ, ಡಾ. ಆರ್.ಸಿ. ಭಂಡಾರಿ, ಸಂಸ್ಥೆ ಸುನೀಲ ಕಾರುಡಗಿಮಠ, ಸಿ.ಎಸ್. ಕಾಚೆಟ್ಟಿ, ರಾಮನಗೌಡ ಗೌಡಪ್ಪಗೌಡರ(ಮಂಗಳೂರ), ಎನ್.ಎಸ್. ಬೊಮ್ಮನಗೌಡರ, ಶ್ರೀಧರ ಪತ್ತೇಪೂರ, ಬಿ.ಪಿ. ಹಳ್ಳೂರ, ಶರಣಗೌಡ ಪಾಟೀಲ(ನಸಬಿ), ಸಿದ್ದಣ್ಣ ಶಿವನಗುತ್ತಿ, ಅಶೋಕ ಜವಳಿ, ಡಾ. ಅವಿನಾಶ ಮಮದಾಪುರ, ಜಿ.ಎಸ್. ಮಮದಾಪುರ ಅಭಿಮಾನಿ ಬಳಗದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts