More

    ರಂಗ-ಶಂಕರರ ಜತೆಗೆ ಶೀತಲ್; ಶಂಕರ್ ನಾಗ್​ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ

    ಬೆಂಗಳೂರು: ‘ವಿಂಡೋ ಸೀಟ್’ ಎಂಬ ಚಿತ್ರವನ್ನು ಶೀತಲ್ ಶೆಟ್ಟಿ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ನಿರ್ದೇಶನದ ಜತೆಗೆ ಅವರು, ಸದ್ದಿಲ್ಲದೆ ಒಂದು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದೇ ‘ಸ್ಟೋರಿ ಆಫ್ ರಂಗ-ಶಂಕರ’. ಈ ಚಿತ್ರದಲ್ಲಿ ಅವರು ಗುರು ಜಗ್ಗೇಶ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    ಹೆಸರು ಕೇಳುತ್ತಿದ್ದಂತೆಯೇ, ಶಂಕರ್ ನಾಗ್ ಅವರ ಕನಸಿನ ರಂಗಮಂದಿರವಾದ ‘ರಂಗ ಶಂಕರ’ ನೆನಪಿಗೆ ಬರಬಹುದು. ಶಂಕರ್ ನಾಗ್ ಅವರಿಗೂ, ರಂಗ ಶಂಕರಕ್ಕೂ ಮತ್ತು ಈ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ ಎಂದರೆ ಯಾವುದೇ ಸಂಬಂಧವಿಲ್ಲ ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ. ರಂಗ ಮತ್ತು ಶಂಕರ ಎಂಬ ಇಬ್ಬರು ಯುವಕರ ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥೆಯಾದ್ದರಿಂದ, ಚಿತ್ರಕ್ಕೆ ‘ಸ್ಟೋರಿ ಆಫ್ ರಂಗ-ಶಂಕರ’ ಎಂಬ ಹೆಸರಿಡಲಾಗಿದೆ.

    ಇದನ್ನೂ ಓದಿ: ಮಹೇಶ್ ಬಾಬು ಆಯ್ತು; ಈಗ ಸಲ್ಮಾನ್ ಸರದಿ

    ‘ಒಂದು ಆಕ್ಸಿಡೆಂಟ್​ನಿಂದ ಈ ಚಿತ್ರ ಶುರುವಾಗುತ್ತದೆ ಮತ್ತು ಒಂದು ಆಕ್ಸಿಡೆಂಟ್​ನಿಂದ ಈ ಚಿತ್ರ ಮುಗಿಯುತ್ತದೆ. ಈ ಎರಡು ಅಪಘಾತಗಳ ನಡುವೆ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಇಲ್ಲಿ ರಂಗ ಮತ್ತು ಶಂಕರ ಎಂಬ ಎರಡು ಪ್ರಮುಖ ಪಾತ್ರಗಳಿವೆ. ರಂಗನ ಪಾತ್ರವನ್ನು ರಜನೀಶ್ ಮಾಡಿದರೆ, ಶಂಕರನ ಪಾತ್ರವನ್ನು ಗುರು ಜಗ್ಗೇಶ್ ಮಾಡಿದ್ದಾರೆ. ಇನ್ನು ಶೀತಲ್ ಅವರು ಗುರುಗೆ ನಾಯಕಿಯಾಗಿ ಅಭಿನಯಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಶಾನ್.

    ದಿವಂಗತ ನಿರ್ದೇಶಕ ಎ.ಆರ್. ಬಾಬು ಅವರ ಮಗನಾದ ಎ.ಆರ್. ಶಾನ್, ಇದಕ್ಕೂ ಮುನ್ನ ‘ಬಾಸು ಅದೇ ಹಳೇ ಕಥೆ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕಳೆದ ವರ್ಷವೇ ಈ ಚಿತ್ರ ಪ್ರಾರಂಭವಾಗಿದ್ದು, ಈಗ ಬಹುತೇಕ ಮಗಿದಿದೆ. ಇತ್ತೀಚೆಗೆ ಚಿತ್ರದ ಒಂದು ಪೋಸ್ಟರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರದ ಮೊದಲ ಕಾಪಿ ಬರಲಿದೆಯಂತೆ. ಇನ್ನು ಲಾಕ್​ಡೌನ್ ಮುಗಿದು, ಎಲ್ಲಾ ಒಂದು ಲೆವೆಲ್​ಗೆ ಬಂದ ನಂತರ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ ಶಾನ್. ಲಾಯ್್ಡ ಎಸ್ ಫರ್ನಾಂಡಿಸ್ ನಿರ್ವಿುಸಿರುವ ಈ ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ಸಂಯೋಜಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts