More

    ಮಂಗೋಲಿಯಾದಲ್ಲಿ 12 ದಿನಗಳಿಂದ ವೃತ್ತಾಕಾರದಲ್ಲಿ ಸುತ್ತುತ್ತಿರುವ ಕುರಿಗಳು; ಕೊನೆಯಾಗಲಿದೆಯಾ ಜಗತ್ತು?!


    ನವದೆಹಲಿ: ಇತ್ತೀಚೆಗೆ ಪೋಲೆಂಡ್​ ಮೇಲೆ ರಷ್ಯಾ ಕ್ಷಿಪಣಿ ಮಳೆ ಸುರಿಸಿ ಕೆಲವು ದಿನಗಳ ಕಾಲ ಮೂರನೆ ವಿಶ್ವ ಯುದ್ಧ ಪ್ರಾರಂಭವಾಯಿತಾ ಎನ್ನುವ ಸಂಶಯಕ್ಕೆ ದೂಡಿತ್ತು. ಅದಷ್ಟೇ ಅಲ್ಲದೇ ಈಗ ಬಫೆಲೋ ನಗರಕ್ಕೆ ಐತಿಹಾಸಿಕ ಎನ್ನಿಸುವಷ್ಟು ಹಿಮಬಿರುಗಾಳಿ ಅಪ್ಪಳಿಸಲಿದೆ. ಈಗ ಮಂಗೋಲಿಯಾದಲ್ಲಿ ಕುರಿಗಳು ವೃತ್ತಾಕಾರದಲ್ಲಿ ಸುಮಾರು ಹನ್ನೆರಡು ದಿನಗಳಿಂದ ನಿರಂತರವಾಗಿ ಸುತ್ತು ಹಾಕುತ್ತಿವೆ. ಇದರಿಂದ ಜನರು ಜಗತ್ತೇ ಅಂತ್ಯವಾಗಲಿದೆಯೆ ಎಂದು ಗಾಬರಿಗೊಂಡಿದ್ದಾರೆ.

    ಚೀನಾದ ಪೀಪಲ್ಸ್ ಡೈಲಿ ಪತ್ರಿಕೆ ಪ್ರಕಾರ ಈ ವಿದ್ಯಮಾನ ಸದ್ಯಕ್ಕೆ ಒಂದು ರಹಸ್ಯವೇ ಆಗಿದೆ. ಇದು ಕುರಿಗಳನ್ನು ಕರೆಯುವ ಕೆಲವು ರೀತಿಯ ರಾಕ್ಷಸ ಆಗಿರಬಹುದು. ಆದರೆ ಇದು ಅಷ್ಟೊಂದು ಭಯಾನಕವಾಗಿಲ್ಲ. ಒಂದು ಕುರಿ ಮತ್ತೊಂದು ಕುರಿಯನ್ನು ಹಿಂಬಾಲಿಸಲು ಪ್ರಾರಂಭಿಸಿತು, ಇತರ ಕುರಿಗಳು ಮುಂದಿದ್ದ ಕುರಿಗಳನ್ನು ಅನುಸರಿಸಲು ಪ್ರಾರಂಭಿಸಿದವು. ಮತ್ತು ಮೊದಲಿದ್ದ ಕುರಿಗಳು ಕೊನೆಯ ಕುರಿಗಳನ್ನು ಅನುಸರಿಸಲು ಪ್ರಾರಂಭಿಸಿದವು. ಅವು ಎಲ್ಲಿಗೆ ಹೋಗುತ್ತಿವೆ ಎಂದು ಅವಕ್ಕೆ ತಿಳಿದಿಲ್ಲ. ಆದರೂ ಅವು ಸುತ್ತುಹಾಕುತ್ತಿವೆ. ವಿಚಿತ್ರ ಎಂದರೆ 10ಕ್ಕು ಹೆಚ್ಚು ದಿನಗಳಿಂದ ಅವು ಈ ರೀತಿ ಕಷ್ಟಪಡುತ್ತಿವೆ!

    ಆದರೆ ವಾಸ್ತವ ಸತ್ಯ ತುಂಬಾ ಸರಳ. ಇದು ಆಡುಗಳಲ್ಲಿ ಕಾಣಿಸಿಕೊಳ್ಳುವ ಒಂದು ಸಾಂಕ್ರಾಮಿಕ ರೋಗ ಆಗಿರಬಹುದು. ಇದು ಕುರಿ-ಆಡುಗಳ ಮೆದುಳಿನ ಕ್ಷಮತೆಯನ್ನು ಕ್ಷೀಣಿಸುತ್ತಿರುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts