More

    ಸಮುದ್ರದ ಆಳಕ್ಕಿಳಿದ ಮೊದಲ ಮಹಿಳೆ

    ಬಾಹ್ಯಾಕಾಶದಲ್ಲಿ ನಡೆದ ಮೊದಲ ಅಮೆರಿಕನ್ ಮಹಿಳೆ ಎಂದು 37 ವರ್ಷಗಳ ಹಿಂದೆಯೇ ಪ್ರಸಿದ್ಧರಾದ ನಾಸಾದ ಮಾಜಿ ಗಗನಯಾತ್ರಿ ಕ್ಯಾಥರಿನ್ ಹೊಸ ಸಾಧನೆ ಮಾಡಿದ್ದಾರೆ.

    68 ವರ್ಷದ ಕ್ಯಾಥರಿನ್ ಸಮುದ್ರಮಟ್ಟದಿಂದ 36,070 ಅಡಿ ಆಳಕ್ಕೆ ಜಿಗಿಯುವ ಮೂಲಕ ವಿಶ್ವದ ಅತ್ಯಂತ ಆಳದ ಕಡಲಿನ ಬಿಂದುವಿಗೆ ತಲುಪಿದ ಮೊದಲ ಮಹಿಳೆ ಎಂಬ ದಾಖಲೆ ಸೃಷ್ಟಿಸಿದ್ದಾರೆ.

    ಪೆಸಿಫಿಕ್ ಮಹಾಸಾಗರದ ಮಾರಿಯಾನ ಟ್ರೆಂಚ್ ಎಂಬ ಪಾತಾಳ ಕಣಿವೆಯಲ್ಲಿನ ಅತ್ಯಂತ ಆಳದ ಬಿಂದುವಿಗೆ ‘ಚಾಲೆಂಜರ್ ಡೀಪ್’ ಎಂದು ಕರೆಯಲಾಗುತ್ತದೆ. ಇದರ ಆಳ 10,994 ಮೀಟರ್​ಗಳು. ಮಹಾಸಾಗರದ ಸರಾಸರಿ ಆಳಕ್ಕಿಂತ ಮೂರು ಪಟ್ಟು ಹೆಚ್ಚು ಆಳದ ಈ ಪ್ರದೇಶಕ್ಕೆ ಅವರು ‘ಲಿಮಿಟಿಂಗ್ ಫ್ಯಾಕ್ಟರ್’ ಎಂಬ ವಿಶೇಷ ವಾಹನದಲ್ಲಿ ತಲುಪಿದ್ದಾರೆ. ಈ ಸಂದರ್ಭದಲ್ಲಿ ಅವರೊಡನೆ ಸಹ ಪೈಲಟ್ ವಿಕ್ಟರ್ ವೆಸ್ಕೋವೊ ಇದ್ದರು.

    ಆರ್ಡರ್​ ಮಾಡಿದ್ದು ಸ್ಕಿನ್​ ಲೋಷನ್, ಬಂದಿದ್ದು ಭಾರಿ ಬೆಲೆಯ ಹೆಡ್​ಫೋನ್​: ಅಮೇಜಾನ್​ಗೆ ಕೇಳಿದ್ದಕ್ಕೆ ಸಿಕ್ತು ಅಚ್ಚರಿ ಉತ್ತರ​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts