More

    ಮಾಜಿ ಲೋಕಸಭಾ ಸ್ಪೀಕರ್​ ನಿಧನರಾದರೆಂದು ಸಂತಾಪ ಸೂಚಿಸಿ ಎಡವಟ್ಟು ಮಾಡಿಕೊಂಡ ಶಶಿ ತರೂರ್​

    ನವದೆಹಲಿ: ಮಾಜಿ ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್​ ನಿಧನರಾದರು ಎಂಬ ಸುಳ್ಳು ಸುದ್ದಿಯನ್ನು ನಂಬಿದ ಕಾಂಗ್ರೆಸ್​ ಸಂಸದ ಶಶಿ ತರೂರ್, ಸುಮಿತ್ರಾ ಮಹಾಜನ್​ ಕುಟುಂಬಕ್ಕೆ ಸಾಂತ್ವಾನದ ಟ್ವೀಟ್​ ಮಾಡುವ ಮೂಲಕ ಪ್ರಮಾದವೊಂದನ್ನು ಎಸಗಿ, ಬಳಿಕ ತಪ್ಪಿನ ಅರಿವಾಗಿ, ಟ್ವೀಟ್​ ಡಿಲೀಟ್​ ಮಾಡುವುದರೊಂದಿಗೆ ಕ್ಷಮೆಯಾಚಿಸಿದ ಘಟನೆ ಗುರುವಾರ (ಏಪ್ರಿಲ್​ 22) ನಡೆದಿದೆ. ​

    ಮಾಜಿ ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್​ ನಿಧನರಾದರು ಇದೀಗ ತಾನೇ ಕೇಳಲ್ಪಟ್ಟೆ. ಮಾಸ್ಕೋದಲ್ಲಿ ನಡೆದ ಬ್ರಿಕ್ಸ್​ ಶೃಂಗದಲ್ಲಿ ಸಂಸದೀಯ ನಿಯೋಗವನ್ನು ಮುನ್ನಡೆಸಲು ಸುಮಿತ್ರಾ ಮಹಾಜನ್​ ಮತ್ತು ದಿವಂಗತ ಸುಷ್ಮಾ ಸ್ವರಾಜ್​ ಅವರು ನನ್ನನ್ನು ಕೇಳಿದಾಗ ಅವರೊಂದಿಗೆ ನಡೆದ ಹಲವು ಧನಾತ್ಮಕ ಸಂವಹನ ಬಗ್ಗೆ ನನಗೆ ನೆನಪಿದೆ. ಅವರನ್ನು ಕಳೆದುಕೊಂಡ ಕುಟುಂಬದಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆಂದು ಗುರುವಾರ ರಾತ್ರಿ 11.16ಕ್ಕೆ ಕೇರಳದ ತಿರುವನಂತಪುರಂ ಸಂಸದರಾಗಿರುವ ತರೂರ್​ ಟ್ವೀಟ್​ ಮಾಡಿದ್ದರು.

    ಮಾಜಿ ಲೋಕಸಭಾ ಸ್ಪೀಕರ್​ ನಿಧನರಾದರೆಂದು ಸಂತಾಪ ಸೂಚಿಸಿ ಎಡವಟ್ಟು ಮಾಡಿಕೊಂಡ ಶಶಿ ತರೂರ್​

    ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಸುಮಿತ್ರಾ ಮಹಾಜನ್​ಗೆ ಏನು ಸಮಸ್ಯೆ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂಬ ಮಾತುಗಳು ಕೇಳಿಬಂತೋ, ಇದು ತರೂರ್​ ಗಮನಕ್ಕೆ ಬಂದು ಟ್ವೀಟ್​ ಡಿಲೀಟ್​ ಮಾಡಿ ಕ್ಷಮೆಯಾಚಿಸಿದ್ದಾರೆ.

    ಸುಮಿತ್ರಾ ಮಹಾಜನ್ ಅವರ ನಿಧನದ ಬಗ್ಗೆ ತಿಳಿಸುವ ವಿಶ್ವಾಸಾರ್ಹ ಮೂಲವೆಂದು ಭಾವಿಸಿದ ಸಂದೇಶವನ್ನು ಸ್ವೀಕರಿಸಿದೆ. ಅವರು ಚೆನ್ನಾಗಿದ್ದಾರೆಂದು ತಿಳಿದು ನಿರಾಳವಾಗಿದೆ. ಟ್ವೀಟ್​ ಅನ್ನು ಹಿಂತೆಗೆದುಕೊಳ್ಳಲು ಸಂತೋಷವಾಗಿದೆ. ಯಾರಾದರೂ ಇಂತಹ ಸುದ್ದಿಗಳನ್ನು ಮಾಡುತ್ತಾರೆಯೇ ಎಂದು ತರೂರ್​ ದಿಗಿಲುಗೊಂಡರು.

    ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್​​ ವಿಜಯವರ್ಗಿಯ ಸಹ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿ, ಮಹಾಜನ್​ ಅವರು ಖಂಡಿತವಾಗಿ ಆರೋಗ್ಯವಾಗಿದ್ದಾರೆಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತರೂರ್​, ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಕೈಲಾಶ್​ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

    ಅಂದಹಾಗೆ 78 ವರ್ಷದ ಸುಮಿತ್ರಾ ಮಹಾಜನ್​, ಮಧ್ಯಪ್ರದೇಶದ ಇಂದೋರ್​ ಕ್ಷೇತ್ರವನ್ನು 1989 ರಿಂದ 2019ರವರೆಗೆ ಪ್ರತಿನಿಧಿಸಿದರು. ಹೆಚ್ಚು ಕಾಲ ಸೇವೆ ಸಲ್ಲಿಸಿದ ಮಹಿಳಾ ಸಂಸತ್ ಸದಸ್ಯೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, 2014 ರಿಂದ 2019 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. (ಏಜೆನ್ಸೀಸ್​)

    ಪಶ್ಚಿಮ ಬಂಗಾಳ: ಚುನಾವಣಾ ಸಮಾವೇಶ, ರೋಡ್​ ಶೋ ರದ್ದು ಮಾಡಿದ ಎಲೆಕ್ಷನ್ ಕಮಿಷನ್

    ಪಶ್ಚಿಮ ಬಂಗಾಳ ಚುನಾವಣಾ ಪ್ರವಾಸವನ್ನು ರದ್ದು ಮಾಡಿದ ಪ್ರಧಾನಿ ಮೋದಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts