More

    ಸೋಲಿನಲ್ಲಿ ಶಾರೂಖ್ ಖಾನ್ ಜತೆಯಾದ ಸಲ್ಮಾನ್

    ಮುಂಬೈ: ಸಲ್ಮಾನ್​ ಖಾನ್​ ಅಭಿನಯದ “ರಾಧೇ’ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಪ್ರೇಕ್ಷಕರಿಂದ ಜನರಿಂದ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಸುಶಾಂತ್​ ಸಿಂಗ್​ ರಜಪೂತ್​ ಅಭಿನಯದ “ದಿಲ್​ ಬೇಚಾರಾ’ ಚಿತ್ರಕ್ಕೆ ಒಟಿಟಿಯಲ್ಲಿ ಮೊದಲ ದಿನ 95 ಮಿಲಿಯನ್​ ವೀಕ್ಷಣೆ ಸಿಕ್ಕರೆ, “ರಾಧೇ’ಗೆ ಕೇವಲ 4.2 ಮಿಲಿಯನ್​ ವೀಕ್ಷಣೆ ಸಿಕ್ಕದೆ. ಸಾಲದ್ದಕ್ಕೆ, ಸಲ್ಮಾನ್​ ಚಿತ್ರಜಿವನದಲ್ಲೇ ಅತ್ಯಂತ ಕಡಿಮೆ ರೇಟಿಂಗ್​ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟು ಸಾಕು, ಜನ ಈ ಚಿತ್ರವನ್ನು ಹೇಗೆ ಸ್ವೀಕರಿಸಿದ್ದಾರೆ ಎಂದು.

    ಇದನ್ನೂ ಓದಿ: ಜೂನಿಯರ್ ಎನ್ಟಿಆರ್ ಜನ್ಮದಿನಕ್ಕೆ RRR ಚಿತ್ರತಂಡದಿಂದ ಭರ್ಜರಿ ಗಿಫ್ಟ್

    ಈ ಚಿತ್ರದ ಮೂಲಕ ಸಲ್ಮಾನ್​ ಹ್ಯಾಟ್ರಿಕ್​ ಹೊಡೆದಿದ್ದಾರೆ. ಸತತವಾಗಿ ಸಲ್ಮಾನ್​ ಅಭಿನಯದ ಮೂರು ಚಿತ್ರಗಳು ಪ್ರೇಕ್ಷಕರಿಗೆ ನಿರಾಸೆ ಮಾಡಿದೆ. ಮೂರು ವರ್ಷಗಳ ಹಿಂದೆ ಬಿಡುಗಡೆಯಾದ “ಟೈಗರ್​ ಜಿಂದಾ ಹೇ’ ಚಿತ್ರವೇ ಕೊನೆ. ಆ ನಂತರ ಸಲ್ಮಾನ್​ ಅಭಿನಯದ ಯಾವ ಚಿತ್ರವೂ ಹಿಟ್​ ಆಗಿಲ್ಲ. “ಭಾರತ್​’ ಮತ್ತು “ದಬಾಂಗ್​ 3′ ಚಿತ್ರಗಳನ್ನು ಈ ಮೊದಲು ಫ್ಲಾಪ್​​ ಪಟ್ಟಿಗೆ ಸೇರಿಸಲಾಗಿತ್ತು. ಈಗ “ರಾಧೇ’ ಸಹ ಹೊಸ ಸೇರ್ಪಡೆಯಾಗಿದೆ.

    ಇದನ್ನೂ ಓದಿ: ವೈರಸ್​ಗೆ ಅಗೌರವ ತೋರಿದರೆ ಬಹಳಷ್ಟು ಜನರಿಗೆ ಬೇಸರವಾಗುತ್ತೆ: ಕಂಗನಾ

    ಬರೀ ಸಲ್ಮಾನ್​ ಅಷ್ಟೇ ಅಲ್ಲ, ಶಾರೂಖ್​ ಖಾನ್​ ಕಥೆ ಸಹ ಇದಕ್ಕಿಂತ ವಿಭಿನ್ನವಾಗೇನೂ ಇಲ್ಲ. ಶಾರೂಖ್​ ಅಭಿನಯದ “ಜೀರೋ’, “ರಯೀಸ್​’ ಮತ್ತು “ಫ್ಯಾನ್​​’ ಚಿತ್ರಗಳು ಬಾಕ್ಸ್​ಆಫೀಸ್​ನಲ್ಲಿ ಹೀನಾಯ ಸೋಲು ಕಾಣುವ ಮೂಲಕ ಈಗಾಗಲೇ ಅವರು ಹ್ಯಾಟ್ರಿಕ್​ ಸೋಲಿನ ರುಚಿ ನೋಡಿದ್ದಾರೆ. ಇಷ್ಟು ದಿನ ಅವರೊಬ್ಬರೇ ಇದ್ದು, ಈಗ ಅವರ ಜತೆಗೆ ಸಲ್ಮಾನ್​ ಸಹ ಸೇರಿಕೊಂಡಿದ್ದಾರೆ.

    ನಾಯಕಿಯಾಗುವಷ್ಟು ಪ್ರತಿಭೆ ತನಗಿಲ್ಲ ಎಂದು ರಾಖಿ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts