More

    ಶ್ರೀ ಶರವು ಕ್ಷೇತ್ರ ರುದ್ರ ಯಾಗ ಭದ್ರಕ ಮಂಡಲ ಪೂಜೆ

    ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಶರಭೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಪುಣ್ಯಕಾರ್ಯದ ಅಂಗವಾಗಿ ಶ್ರೀ ಶರಭೇಶ್ವರ ದೇವರಿಗೆ ಶನಿವಾರ ರುದ್ರ ಯಾಗ ಹಾಗೂ ಭದ್ರಕ ಮಂಡಲ ಪೂಜೆ ಮತ್ತು ಪ್ರಧಾನವಾದ ತತ್ವ ಕಲಶ ಹಾಗೂ ತತ್ವ ಹೋಮ ಜರಗಿತು.


    ಶ್ರೀ ಶರಭೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರಿಗೆ ವಿಶೇಷ ನೈವೇದ್ಯ ಸಮರ್ಪಣೆಗೊಂಡು ಮಧ್ಯಾಹ್ನ ಮಹಾಪೂಜೆ ಜರಗಿ ಪಲ್ಲಪೂಜೆಯೊಂದಿಗೆ ಶ್ರೀ ದೇವರ ಅನ್ನಪ್ರಸಾದ ವಿತರಿಸಲಾಯಿತು. ಸಂಜೆ ಬ್ರಹ್ಮಕಲಶಾಧಿವಾಸ ಆಧಿವಾಸ ಹೋಮಗಳು ಕುಂಭೇಶ ಶರ್ಕರಿ ಪೂಜೆ, ದುರ್ಗಾ ಪೂಜೆ ಜರಗಿತು.


    ಇಂದು ಶ್ರೀ ೀಶರಭೇಶ್ವರ ದೇವರಿಗೆ ಪ್ರಧಾನ ಬ್ರಹ್ಮ ಕಲಶಾಭಿಷೇಕ
    ಭಾನುವಾರ ಬೆಳಗ್ಗೆ 8:43ರ ಸುಮಹೂರ್ತದ ಮಿಥುನ ಲಗ್ನದಲ್ಲಿ ಶ್ರೀ ಶರಭೇಶ್ವರ ದೇವರಿಗೆ ಪ್ರಧಾನ ಬ್ರಹ್ಮ ಕಲಶ ಅಭಿಷೇಕ ಜರಗಲಿದೆ. ಪ್ರಸನ್ನ ಪೂಜೆ, ವಿಶೇಷ ನೈವೇದ್ಯ ಸಮರ್ಪಣೆ, ಮಹಾಪೂಜೆ, ಪಲ್ಲಪೂಜೆಯಾಗಿ ಮಧ್ಯಾಹ್ನ ಮಹಾ ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ ರಂಗ ಪೂಜೆ, ಶ್ರೀ ದೇವರ ಬಲಿ ಉತ್ಸವ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಡಾ.ಸುದೇಶ್ ಶಾಸ್ತ್ರಿ, ಡಾ.ರಾಹುಲ್ ಶಾಸ್ತ್ರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts