More

    ದೇಶ ಒಗ್ಗೂಡಿಸಲು ಶ್ರಮಿಸಿದ ಶಂಕರಾಚಾರ್ಯರು

    ಎನ್.ಆರ್.ಪುರ: ಶಂಕರಾಚಾರ್ಯರು ಆನಂದ ಲಹರಿ, ಶಿವಾನಂದ ಲಹರಿ, ಭಜಗೋವಿಂದಂ ಸೇರಿದಂತೆ 200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ಎಂದು ಹರಿಹರ ನಾಮಸ್ಮರಣೆ ತಂಡದ ಮುಖ್ಯ ವಿಶ್ಲೇಣೆಕಾರ ಮಕ್ಕಿಮನೆ ಚಂದ್ರಮೋಹನ್ ತಿಳಿಸಿದರು.
    ಹಾತೂರು ಗ್ರಾಮದ ವೈ.ಟಿ.ಶ್ರೀನಾಥ್ ಅವರ ಮನೆಯಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾ ತಾಲೂಕು ಘಟಕ ಹಾಗೂ ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಆಶ್ರಯದಲ್ಲಿ ಗಾಡಿಕೆರೆ ಸತ್ಯನಾರಾಯಣ ಅವರ ಪರಿಕಲ್ಪನೆಯಡಿ ಹರಿಹರ ನಾಮ ಸ್ಮರಣ ತಂಡದಿಂದ ನಡೆದ ಶಂಕರಾಚಾರ್ಯ ವಿರಚಿತ ಜಾಗೃತ ಪಂಚಕ ಹಾಗೂ ಮೋಹ ಮುದ್ಗರದ ಗಾಯನ ಹಾಗೂ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಶಂಕರಾಚಾರ್ಯರು ಕೃತಿಗಳನ್ನು ಅರ್ಥಗರ್ಭಿತವಾಗಿ, ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಸುಂದರವಾಗಿ ಬರೆದಿದ್ದಾರೆ. ಶಂಕರಾಚಾರ್ಯರು ಗುರು ಗೋವಿಂದ ಭಗವತ್ಪಾದರ ಬಳಿ ಸನ್ಯಾಸತ್ವ ಸ್ವೀಕರಿಸಿ,ಅನೇಕ ವಿದ್ಯೆಗಳನ್ನು ಕಲಿತ ನಂತರ ಲೋಕಪರ್ಯಟನೆಗೆ ಹೋಗುತ್ತಾರೆ. ದೇಶದ ಉದ್ದಗಲಕ್ಕೂ ಸಂಚರಿಸಿ ಜನರ ಭಿನ್ನ ನಿಲುವುಗಳನ್ನು ತಿಳಿದು ಒಂದು ಏಕ ಮುಖ ಸಿದ್ದಾಂತದ ಅಡಿ ಸಮಾಜ ಒಗ್ಗೂಡಿಸುವ ಸಂಕಲ್ಪದೊಂದಿಗೆ ಅದ್ವೈತ ಸಿದ್ದಾಂತ ಪ್ರತಿಪಾದಿಸಿ ದೇಶದ ನಾಲ್ಕು ದಿಕ್ಕಿನಲ್ಲಿ 4 ಆಮ್ನಾಯ ಪೀಠ ರಚಿಸುವ ಮೂಲಕ ದೇಶ ಒಗ್ಗೂಡಿಸುವ ಕೆಲಸ ಮಾಡಿದ್ದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts