More

    ಬಿಗ್​ಬಾಸ್ ಮನೆಯಿಂದ ಶಮಂತ್ ಬ್ರೋ ಗೌಡ ಔಟ್​? ಕೈ ಕೊಟ್ಟೇಬಿಡ್ತಾ ಲಕ್?

    ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಚೆನ್ನಾಗಿ ಮೂಡಿ ಬರುತ್ತಿದೆ. ಫೈನಲ್ಸ್ ಹತ್ತಿರ ಬರುತ್ತಿರುವುದರಿಂದ ಒಬ್ಬೊಬ್ಬರಾಗಿ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬರಲಾರಂಭಿಸಿದ್ದಾರೆ. ಈ ವಾರ ಮನೆಯಿಂದ ಹೊರ ಬರಲು ಐವರು ನಾಮಿನೇಟ್ ಆಗಿದ್ದು, ಅದರಲ್ಲಿ ಶಮಂತ್ ಬ್ರೋ ಗೌಡ್ ಔಟ್ ಆಗಿದ್ದಾರೆ ಎನ್ನುವ ಚರ್ಚೆಯೊಂದು ಶುರುವಾಗಿದೆ.

    ಈ ಕಾರ್ಯಕ್ರಮ ಪ್ರಸಾರವಾಗುತ್ತಿರುವ ವಾಹಿನಿಯ ಬಿಜಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಬಿಗ್​ಬಾಸ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಕರೊನಾ ಕಾರಣಕ್ಕೆ ಬಿಗ್​ಬಾಸ್ ನಿಲ್ಲುತ್ತಿರುವ ವಿಚಾರವೂ ಅವರ ಪೋಸ್ಟ್​ನಿಂದಲೇ ತಿಳಿದುಬಂದಿತ್ತು. ಇದೀಗ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ಅದರಿಂದಾಗಿ ಶಮಂತ್ ಗೌಡ್ ಮನೆಯಿಂದ ಹೊರಬಂದಿದ್ದಾರೆಯೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

    ಮನೆಯ ಮಂದಿ ಶನಿವಾರದ ವಾರದ ಕಥೆ ಕಿಚ್ಚನ ಜೊತೆಗೆ ತಯಾರಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಸ್ಪರ್ಧಿಗಳೆಲ್ಲರು ಮನೆಯ ಗೇಟ್ ಬಳಿ ಇರುವ ಕ್ಯಾಮರಾಕ್ಕೆ ಪೋಸ್ ಕೊಟ್ಟಿರುವ ಫೋಟೋ ಅದಾಗಿದೆ. ಅದರಲ್ಲಿ ಮನೆಯ ಎಂಟೂ ಮಂದಿ ಇದ್ದಾರಾದರೆ ಶಮಂತ್ ಇಲ್ಲ.

    ಮನೆಯಿಂದ ಶಮಂತ್​ನನ್ನು ಬೀಳ್ಕೊಟ್ಟ ನಂತರ ತೆಗೆದುಕೊಂಡಿರುವ ಫೋಟೋ ಇದಾಗಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಥವಾ ಶಮಂತ್ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿರುವ ಸಮಯದಲ್ಲಿ ಆತನನ್ನು ಬಿಟ್ಟು ಈ ಫೋಟೋ ತೆಗೆದುಕೊಂಡಿರುಬಹುದು ಎನ್ನುವ ಬಗ್ಗೆಯೂ ಚರ್ಚೆಯಿದೆ. ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇರುವುದರಿಂದ ಶನಿವಾರದ ಸಂಚಿಕೆಯಲ್ಲಿ ಒಬ್ಬರನ್ನು ಹಾಗೂ ಭಾನುವಾರ ಇನ್ನೊಬ್ಬರನ್ನು ಮನೆಯಿಂದ ಹೊರಗೆ ಕರೆಯಬಹುದು ಎನ್ನುವ ಮಾತುಗಳೂ ಇವೆ. (ಏಜೆನ್ಸೀಸ್)

    ಐಸಿಎಸ್​ಇ 10ನೇ ತರಗತಿ ಮತ್ತು ಐಎಸ್​ಸಿ 12ನೇ ತರಗತಿ ರಿಸಲ್ಟ್ ಪ್ರಕಟ

    ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಾಲ್ವರು ಮಕ್ಕಳು ಸೇರಿ ಒಂಬತ್ತು ಮಂದಿ ಮೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts