More

    ಶಿವಮೊಗ್ಗದಲ್ಲಿ ಶಾಕಲ ಋಕ್ಸಂಹಿತಾ ಯಾಗ

    ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಬಿಎಚ್ ರಸ್ತೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಫೆ.21ರಿಂದ 28ರವರೆಗೆ ಶಾಕಲ ಋಕ್ಸಂಹಿತಾ ಯಾಗ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 6 ರಿಂದ ವಿಷ್ಣು ಸಹಸ್ರನಾಮ ಪಠಣ, 6.45ರಿಂದ ಧಾರ್ಮಿಕ ವಿಚಾರಗಳ ಕುರಿತು ಉಪನ್ಯಾಸ ನಡೆಯಲಿದೆ.

    ವೇದಗಳ ಸಂರಕ್ಷಣೆ ಹಾಗೂ ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಬ್ರಾಹ್ಮಣ ಮಹಾಸಭಾದಿಂದ ಮನೆ ಮನೆಗಳಲ್ಲಿ ವೇದ ಪಾರಾಯಣ ಎಂಬ ಶೀರ್ಷಿಕೆಯಡಿ ಕಳೆದೊಂದು ವರ್ಷದಿಂದ 123 ಮನೆಗಳಲ್ಲಿ ಋಗ್ವೇದ ಸಂಹಿತಾ ಪಾರಾಯಣ ನಡೆಸಲಾಗಿತ್ತು. ಈ ಪಾರಾಯಣದ ಸಂಗತಾ ಯಜ್ಞವಾಗಿ ಶಾಕಲ ಋಕ್ಸಂಹಿತಾ ಯಾಗ ನಡೆಸಲಾಗುತ್ತಿದೆ ಎಂದು ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ ಭಾಗವತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಫೆ.21ರ ಬೆಳಗ್ಗೆ 7ಕ್ಕೆ ಗಣೇಶ ಪೂಜೆ, ಸಂಕಲ್ಪದೊಂದಿಗೆ ಯಾಗ ಆರಂಭವಾಗಲಿದೆ. ಪ್ರತಿದಿನ ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ ನೆರವೇರಲಿದೆ. 28ರಂದು ನಡೆಯುವ ಪೂರ್ಣಾಹುತಿಯಲ್ಲಿ ಕೂಡಲಿ ಶೃಂಗೇರಿ ಸಂಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಸ್ವಾಮೀಜಿ ಹಾಗೂ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಸಮಾಜ ಸೇವಕರನ್ನು ಸನ್ಮಾನಿಸಲಾಗುವುದು. ಕೂಡಲಿಯ ಉಭಯ ಶ್ರೀಗಳು ಸನ್ಮಾನಿತರನ್ನು ಆಶೀರ್ವದಿಸಲಿದ್ದಾರೆ. ಫೆ.23ರ ಸಂಜೆ 6ಕ್ಕೆ ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಭಕ್ತರಿಗೆ ಅನುಗ್ರಹ ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.
    25ರಂದು ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸುವ ಎಡತೊರೆ ಯೋಗಾನಂದೇಶ್ವರ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮನೆಗಳಲ್ಲಿ ವೇದ ಪಾರಾಯಣ ನಡೆಸಲು ಸಹಕರಿಸಿದ ಕುಟುಂಬದವರನ್ನು ಶ್ರೀಗಳು ಆಶೀರ್ವದಿಸಲಿದ್ದಾರೆ ಎಂದರು.
    ಬ್ರಾಹ್ಮಣ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ವೆಂಕಟೇಶ ಮೂರ್ತಿ, ಪ್ರಮುಖರಾದ ಡಾ. ನಾಗಮಣಿ, ಶಂಕರನಾರಾಯಣ, ಸೂರ್ಯನಾರಾಯಣ ರಾವ್, ಕೇಶವಮೂರ್ತಿ, ಸರಳಾ ಇತರರಿದ್ದರು.
    ಪ್ರತಿದಿನ ಸಂಜೆ 6.45ರಿಂದ ಉಪನ್ಯಾಸ: ಫೆ.21- ವೇದಗಳಲ್ಲಿ ಪಂಚಾಕ್ಷರಿ ಮಂತ್ರ ಚಿಂತನೆ-ಡಾ.ವಾಸುದೇವ ಹೊಸಹಳ್ಳಿ.
    22- ಧರ್ಮಶಾಸ್ತ್ರಗಳಲ್ಲಿ ವರ್ಣಾಶ್ರಮಗಳು-ವಿದ್ವಾನ್ ಮಹೀಪತಿ ಎಸ್.ಜೋಯ್ಸ.
    24-ಮೋಕ್ಷ ಸಾಧನೆಗೆ ಹತ್ತು ಸೋಪಾನಗಳು-ಶ್ರೀ ಹಂದಲಸು ವಾಸುದೇವ ಭಟ್.
    25-ವೇದ ಪುರಾಣಗಳಲ್ಲಿ ಭಕ್ತಿ-ಶ್ರೀ ಕುಷ್ಟಗಿ ವಾಸುದೇವ ಮೂರ್ತಿ.
    26-ವೇದಗಳ ಮಹತ್ವ-ಶ್ರೀ ಅಚ್ಚುತ ಅವಧಾನಿ.
    27-ವೇದಗಳಲ್ಲಿನ ಉದಾರ ಪ್ರಾರ್ಥನೆಗಳು-ಶ್ರೀ ಅಚ್ಚುತ ಅವಧಾನಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts