More

    ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !

    ಚೆನ್ನೈ: ಗುರುವಾರ(ಫೆಬ್ರವರಿ 18) ನಡೆದ ಐಪಿಎಲ್​ 2021 ರ ಆಟಗಾರರ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳಿಗಿಂತ ಹೆಚ್ಚು ಹಣವನ್ನು ಪರ್ಸ್​ನಲ್ಲಿಟ್ಟುಕೊಂಡು ಹೊರಟ ತಂಡವೆಂದರೆ ಪಂಜಾಬ್ ಕಿಂಗ್ಸ್. 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆಯಲ್ಲಿ 53.2 ಕೋಟಿ ರೂಪಾಯಿಗಳನ್ನು ವ್ಯಯ ಮಾಡುವ ಅವಕಾಶ ಹೊಂದಿದ್ದ ಈ ತಂಡ 9 ಆಟಗಾರರನ್ನು ಖರೀದಿಸಿದೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾದ ಒಬ್ಬ ವಿಶೇಷ ಆಟಗಾರನೆಂದರೆ ಶಾ​​ರುಖ್ ಖಾನ್​!

    ಬಾಲಿವುಡ್ ತಾರೆಯ ಹೆಸರನ್ನೇ ಹೊಂದಿರುವ, ತಮಿಳುನಾಡಿನ ಯುವ ಬ್ಯಾಟ್ಸ್​ಮನ್ ಶಾ​ರುಖ್ ಖಾನ್, ಸೈಯದ್ ಮುಶ್ತಾಖ್ ಅಲಿ ಟೂರ್ನಮೆಂಟಿನಲ್ಲಿ ಭಾರೀ ಹೊಡೆತಗಳಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದವರು. ಇವರನ್ನು ರೂ. 5.25 ಕೋಟಿಗೆ ಕೊಂಡುಕೊಳ್ಳುವ ಡೀಲ್ ಅಂತಿಮಗೊಂಡ ತಕ್ಷಣ ಪಂಜಾಬ್ ಕಿಂಗ್ಸ್​ ಮಾಲೀಕರಲ್ಲಿ ಒಬ್ಬರಾದ ಪ್ರೀತಿ ಜಿಂಟಾ, ಉತ್ಸಾಹದ ಉದ್ಗಾರ ಮಾಡಿದರು. ಹರಾಜು ಸ್ಥಳದಲ್ಲಿ ಹಾಜರಿದ್ದ ನಟ ಶಾರುಖ್​ ಖಾನ್​ರ ಪುತ್ರ ಆರ್ಯನ್​ ಕಡೆ ತಿರುಗಿ, ‘ವಿ ಗಾಟ್ ಶಾರುಖ್’​ ಎಂದು ಛೇಡಿಸಿದರು. ಈ ಪ್ರತಿಕ್ರಿಯೆಯ ವೀಡಿಯೋ ತುಣುಕನ್ನು ಐಪಿಎಲ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

    ಐದು ವಿದೇಶೀ ಆಟಗಾರರ ಖೋಟಾ ಹೊಂದಿದ್ದ ಪಂಜಾಬ್ ಕಿಂಗ್ಸ್, ಆಸ್ಟ್ರೇಲಿಯಾದ ಬೌಲರ್ಸ್​ ಝ್ಯೇ ರಿಚರ್ಡ್​ಸನ್ ಮತ್ತು ರೈಲಿ ಮೆರೆಡಿತ್​ರನ್ನು ಕೊಳ್ಳಲು ಭಾರೀ ಮೊತ್ತವನ್ನು ಖರ್ಚುಮಾಡಿದೆ. ರಿಚರ್ಡ್​ಸನ್​ಗೆ 14 ಕೋಟಿ ರೂ. ಮತ್ತು ಫಾಸ್ಟ್ ಬೌಲರ್ ಮೆರೆಡಿತ್​ರಿಗಾಗಿ 8 ಕೋಟಿ ರೂ. ಡೀಲ್ ಮಾಡಿದೆ. ಟ್ವೆಂಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಂ.1 ರಾಂಕ್ ಹೊಂದಿರುವ ಬ್ಯಾಟ್ಸ್​ಮನ್​ ಡೇವಿಡ್​ ಮಲನ್​ರನ್ನು 1.5 ಕೋಟಿ ರೂಪಾಯಿಗಳ ಮೂಲ ಬೆಲೆಗೆ ತನ್ನದಾಗಿಸಿಕೊಂಡಿದೆ. ಇನ್ನು ಆಸ್ಟ್ರೇಲಿಯನ್ ಆಲ್​ರೌಂಡರ್ ಮೊಯ್ಸಿಸ್ ಹೆನ್ರಿಖ್ಸ್​ಗಾಗಿ 4.2 ಕೋಟಿ ರೂಪಾಯಿ ಬಿಡ್ ಮಾಡಿ ಡೀಲ್ ಮಾಡಿದೆ.

    ಪಂಜಾಬ್​ ಕಿಂಗ್ಸ್​ ಕೊಂಡುಕೊಂಡ ಇತರ ಆಟಗಾರರೆಂದರೆ ವೆಸ್ಟ್ ಇಂಡೀಸ್ ಆಲ್​ರಂಡರ್ ಫೇಬಿಯನ್ ಅಲ್ಲೆನ್ ಮತ್ತು ಭಾರತದ ಜಲಜ್ ಸಕ್ಸೇನ, ಸೌರಭ್ ಕುಮಾರ್ ಮತ್ತು ಉತ್ಕರ್ಷ್ ಸಿಂಗ್.(ಏಜೆನ್ಸೀಸ್)

    ಯುವಿ​ ದಾಖಲೆ ಮುರಿದ ಕ್ರಿಸ್​ ಮೋರಿಸ್​! ದಾಖಲೆಯ ಮೌಲ್ಯಕ್ಕೆ ಬಿಡ್​ ಆದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ

    15ನೇ ವಯಸ್ಸಲ್ಲಿ ಸೀಟಿ ನುಂಗಿದ್ದಳು, 40ನೇ ವಯಸ್ಸಲ್ಲಿ ಹೊರ ಬಂತು- ವೈದ್ಯರೇ ಕಂಗಾಲು!

    ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts