More

    ‘ಶೋಯೆಬ್ ಹೇಳಿದ್ದರಲ್ಲಿ ತಪ್ಪೇನಿದೆ, ಸಂಕಷ್ಟ ಕಾಲದಲ್ಲಿ ಕಪಿಲ್​ ದೇವ್​ರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ…ನನಗೇ ಅಚ್ಚರಿಯಾಗಿದೆ’

    ಕರಾಚಿ: ಕೋವಿಡ್​-19 ವಿರುದ್ಧ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಮುಚ್ಚಿದ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಬೇಕು ಎಂದು ಪಾಕ್​ ಮಾಜಿ ಬೌಲರ್​ ಶೋಯೆಬ್ ಅಖ್ತರ್​ ಒತ್ತಾಯಿಸಿದ್ದರು. ಅದಕ್ಕೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್​ ಅವರು ವಿರೋಧ ವ್ಯಕ್ತಪಡಿಸಿದ್ದರು.

    ಈಗ ಅದೇ ವಿಚಾರವನ್ನು ಶಾಹಿದ್​ ಅಫ್ರಿದಿ ಪ್ರಸ್ತಾಪಿಸಿದ್ದಾರೆ. ಶೋಯೆಬ್ ಅಕ್ತರ್ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಡೀ ಜಗತ್ತು ಕರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಸದ್ಯದ ಮಟ್ಟಿಗೆ ಮನುಷ್ಯರ ವೈರಿ ಆಗಿರುವ ಕರೊನಾ ವೈರಸ್​​ನ್ನು ಮಣಿಸಲು ನಾವೆಲ್ಲ ಒಗ್ಗಟ್ಟಾಗಬೇಕು. ಹೀಗಿರುವಾಗ ಶೋಯೆಬ್ ಅಖ್ತರ್​ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
    ಕಪಿಲ್ ದೇವ್​ ಯಾಕೆ ನೆಗೆಟಿವ್ ಕಾಮೆಂಟ್​ ನೀಡಿದರು ಗೊತ್ತಿಲ್ಲ. ಇಂಥ ಸಮಯದಲ್ಲಿ ಅದು ಸೂಕ್ತವಲ್ಲ. ಕಪಿಲ್ ದೇವ್​ ಅವರ ಪ್ರತಿಕ್ರಿಯೆ ನನಗಂತೂ ಅಚ್ಚರಿ ಮೂಡಿಸಿದೆ ಎಂದರು.

    ಶೋಯೆಬ್​ ಅಖ್ತರ್​ ಕ್ರಿಕೆಟ್​ ಆಡಿಸಬೇಕು ಎಂದು ಹೇಳಿದ್ದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬಹುದು ಎಂದು ಭಾವಿಸಿದ್ದೆ. ಆದರೆ ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಕಪಿಲ್ ದೇವ್​ ಹಾಗೆ ಮಾತಾಡಿದ್ದು ಸೂಕ್ತವಲ್ಲ ಎಂದು ಅಫ್ರಿದಿ ಹೇಳಿದ್ದಾರೆ.

    ಶಾಹಿದ್​ ಅಫ್ರಿದಿಯವರೂ ಕೂಡ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವವರಿಗೆ ತಮ್ಮ ಸಂಸ್ಥೆ ಮೂಲಕ ಸಹಾಯ ಮಾಡುತ್ತಿದ್ದಾರೆ. ಅವರಿಗೆ ಅಗತ್ಯ ರೇಷನ್​ಗಳನ್ನು ಒದಗಿಸುತ್ತಿದ್ದಾರೆ.

    ನಾನು ಹಲವು ಕಂಪನಿಗಳ ಪ್ರಮೋಶನ್​ಗಾಗಿ, ಜಾಹೀರಾತುಗಳಿಗಾಗಿ ಕೆಲಸ ಮಾಡಿದ್ದೇನೆ. ಹಾಗೆ, ಕೆಲವು ಕಂಪನಿಗಳಿಗಳೊಂದಿಗೆ ಕೆಲಸ ಮಾಡಲು ಸಹಿ ಹಾಕಿದ್ದು, ಅವರು ನನಗೆ ಹಣ ಕೊಡುವುದು ಬೇಡ. ಬದಲಿಗೆ ಅಕ್ಕಿ, ಬೇಳೆ, ಅಡುಗೆ ಸಾಮಗ್ರಿಗಳನ್ನು ನನ್ನ ಪ್ರತಿಷ್ಠಾನಕ್ಕೆ ನೀಡಿ. ಅದನ್ನು ಕಷ್ಟದಲ್ಲಿರುವವರಿಗೆ ನೀಡುತ್ತೇನೆ ಎಂದು ಅಫ್ರಿದಿ ಟ್ವೀಟ್​ ಮೂಲಕ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts