More

    ಸೋನಿಯಾ ಜಿ, ರಾಹುಲ್​ ಜೀ.. ನೀವು ಗುಪ್ಕರ್ ಗ್ಯಾಂಗ್​ ನ ಬೆನ್ನಿಗಿದ್ದೀರಾ? – ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಶ್ನೆ

    ನವದೆಹಲಿ: ಗುಪ್ಕರ್ ಮೈತ್ರಿಯ ನಾಯಕರು ದೇಶದ ಸಂವಿಧಾನ, ರಾಷ್ಟ್ರಹಿತವನ್ನು ಕಡೆಗಣಿಸಿ ವಿರೋಧಿಗಳ ಜತೆಗೆ ಕೈ ಜೋಡಿಸಿಕೊಂಡು ಸ್ವಾರ್ಥ ರಾಜಕಾರಣಕ್ಕೆ ಮುಂದಾಗಿರುವುದು ಸ್ಪಷ್ಟ. ಅವರ ಹೇಳಿಕೆಗಳೂ ಇದನ್ನೇ ಬಿಂಬಿಸುತ್ತಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನಾಯಕರು ಈ ಮೈತ್ರಿ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದು, ಅದನ್ನು ಬೆಂಬಲಿಸಿ ಕೆಲವು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಇದರ ಬೆನ್ನಿಗೆ, ಗುಪ್ಕರ್ ಘೋಷಣೆ ಕುರಿತ ನಿಲುವು ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ಹೈಕಮಾಂಡ್​ಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ನೇರವಾಗಿ ಸವಾಲೆಸೆದಿದ್ದಾರೆ.

    ಅಮಿತ್ ಷಾ ಅವರ ಸರಣಿ ಟ್ವೀಟ್ ನಲ್ಲಿರುವುದು ಇಷ್ಟು- ಗುಪ್ಕರ್ ಗ್ಯಾಂಗ್ ಜಾಗತಿಕ ಮಟ್ಟಕ್ಕೆ ವಿಸ್ತರಿಸಲ್ಪಡುತ್ತಿದೆ! ಜಮ್ಮು ಮತ್ತು ಕಾಶ್ಮೀರದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪವನ್ನು ಅವರು ಬಯಸುತ್ತಿದ್ದಾರೆ. ಈ ಗ್ಯಾಂಗ್ ಭಾರತದ ತಿರಂಗಾಕ್ಕೆ ಅವಮಾನವೆಸಗಿದೆ. ಗುಪ್ಕರ್ ಗ್ಯಾಂಗ್​ನ ಇಂತಹ ನಡೆಗಳನ್ನು ಸೋನಿಯಾ ಜಿ, ರಾಹುಲ್​ ಜಿ ಬೆಂಬಲಿಸುತ್ತಾರೆಯೇ? ಈ ಬಗ್ಗೆ ನಿಲುವೇನೆಂಬುದನ್ನು ಭಾರತೀಯರಿಗೆ ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಮತ್ತು ಗುಪ್ಕರ್ ಗ್ಯಾಂಗ್ ಜಮ್ಮು ಮತ್ತು ಕಾಶ್ಮೀರವನ್ನು ಪುನಃ ಭಯೋತ್ಪಾದನೆ ಮತ್ತು ಅಸ್ಥಿರತೆಯ ಕಾಲಕ್ಕೆ ಕೊಂಡೊಯ್ಯಲು ಬಯಸುತ್ತಿವೆ. ಅನುಚ್ಛೇದ 370ರ ಮೂಲಕ ದಲಿತರ, ಮಹಿಳೆಯರ, ಬುಡಕಟ್ಟು ಜನರ ಹಕ್ಕುಗಳನ್ನು ಕಿತ್ತೊಗೆಯಲು ಬಯಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಜನರಿಂದ ಎಲ್ಲೆಡೆ ತಿರಸ್ಕರಿಸಲ್ಪಡುತ್ತಿದ್ದಾರೆ. ಜಮ್ಮು – ಕಾಶ್ಮೀರ ಎಂದಿಗಿದ್ದರೂ ಅದು ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ನಮ್ಮ ದೇಶದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಅಪವಿತ್ರ ಗ್ಲೋಬಲ್ ಗಟಬಂಧನವನ್ನು ಭಾರತೀಯರು ಇನ್ನು ಸಹಿಸಿಕೊಂಡು ಇರಲಾರರು. ಗುಪ್ಕರ್ ಗ್ಯಾಂಗ್ ಒಂದೋ ರಾಷ್ಟ್ರದ ಜನತೆಯೊಂದಿಗೆ ಹೊಂದಿಕೊಂಡು ಹೋಗಬೇಕು. ಇಲ್ಲವೇ ಜನರೇ ಅದನ್ನು ಮುಳುಗಿಸಲಿದ್ದಾರೆ.

    ಇದನ್ನೂ ಓದಿ: ಈಗ ತಾನೇ ಬಿಜೆಪಿಗೆ ಎಂಟ್ರಿ ಕೊಟ್ಟಿದ್ದೇವೆ… ಅದೆಲ್ಲಾ ಎಲ್ಲಿ ನಮಗೆ ಹೇಳ್ತಾರೆ ! : ಸಹಕಾರಿ ಸಚಿವ ಸೋಮಶೇಖರ್

    ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್​ (ಪಿಎಜಿಡಿ)ಯಲ್ಲಿರುವ ಪಕ್ಷಗಳಿವು- ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಸಿಪಿಐ-ಎಂ, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್, ಅವಾಮಿ ನ್ಯಾಷನಲ್ ಕಾನ್ಫರೆನ್ಸ್. ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಡಿಸ್ಟ್ರಿಕ್ಟ್ ಡೆವಲಪ್​ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ಈ ಮೈತ್ರಿಯೊಂದಿಗೆ ಸೀಟು ಹಂಚಿಕೆ ನಡೆಸುವುದಾಗಿ ಘೋಷಿಸಿತ್ತು. ಪಿಎಜಿಡಿಗೆ ಫಾರೂಕ್ ಅಬ್ದುಲ್ಲಾ ಚೇರ್​ಮನ್​, ಮೆಹಬೂಬಾ ಮುಫ್ತಿ ಉಪಾಧ್ಯಕ್ಷೆ, ಸಿಪಿಐ ಎಂ ನಾಯಕ ಎಂ ವೈ ತಾರಿಗಾಮಿ ಕನ್ವೀನರ್​, ಸಾಜ್ಜದ್ ಗನಿ ಲೋನ್ ವಕ್ತಾರ. (ಏಜೆನ್ಸೀಸ್)

    ಭಾರತದ ತೀವ್ರ ವಿರೋಧದ ನಡುವೆ ಗಿಲ್ಗಿಟ್ -ಬಾಲ್ಟಿಸ್ತಾನ ದಲ್ಲಿ ಚುನಾವಣೆ ನಡೆಸಿದ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts