More

    ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಅಪರಾಧಿಗೆ 5 ವರ್ಷ ಜೈಲು

    ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ, 1.50 ಲಕ್ಷ ರೂ. ದಂಡ ವಿಧಿಸಿ ಎ್ಟಿಎಸ್‌ಸಿ-1ನೇ ನ್ಯಾಯಾಲಯ ತೀರ್ಪು ನೀಡಿದೆ.

    ಬೈಯಪ್ಪನಹಳ್ಳಿ ನಿವಾಸಿ ಎ. ಬಾಬು (35) ಅಪರಾಧಿ. ಪೋಕ್ಸೋ ಕಾಯ್ದೆಯಡಿ ದಂಡ ವಿಧಿಸಿ, ನ್ಯಾಯಾಧೀಶೆ ಕೆ.ಎನ್. ರೂಪಾ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಇದೇ ವೇಳೆ ಸಂತ್ರಸ್ತ ಬಾಲಕಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಡಿಎಲ್‌ಎಸ್‌ಎಗೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

    ಬಾಲಕಿ 3 ವರ್ಷ ವರ್ಷದವಳಿದ್ದಾಗ ತಂದೆ ಸಾವನ್ನಪ್ಪಿದ್ದರು. ತಾಯಿ, ಅಪರಾಧಿ ಬಾಬು ಜತೆಗೆ ನೆಲೆಸಿದ್ದರು. ತಾಯಿ, ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಅಪರಾಧಿ ಬಾಬು, ಸಂತ್ರಸ್ತೆ ಜತೆಗೆ ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಎಸಗುತ್ತಿದ್ದ. ಈ ನಡುವೆ ಬಾಲಕಿ ತಾಯಿ ಸಹ ಸಾವನ್ನಪ್ಪಿದ್ದರು.

    ಆನಂತರ ಮೃತಳ ಅಣ್ಣ ಮತ್ತು ಅತ್ತಿಗೆ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆ ಸಮಯದಲ್ಲಿ ಬಾಲಕಿಗೆ ಸ್ನಾನ ಮಾಡಿಸುವಾಗ ಗಾಯದ ಗುರುತು ಕಂಡು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಬೈಯಪ್ಪನಹಳ್ಳಿ ಠಾಣೆ ಅಂದಿನ ಇನ್‌ಸ್ಪೆಕ್ಟರ್ ವೆಂಕಟಾಚಲಪತಿ, ತನಿಖೆ ಕೈಗೊಂಡು ಬಾಬುನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಸಲಿಸಿದ ನ್ಯಾಯಾಲಯ, ಬಾಬು ಅಪರಾಧಿ ಎಂದು ೋಷಣೆ ಮಾಡಿ ಶಿಕ್ಷೆ ಪ್ರಕಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts