More

    ಒಳಚರಂಡಿ ಸಂಸ್ಕರಣ ಘಟಕ ಶೀಘ್ರ ಉದ್ಘಾಟನೆ

    ಬೇಲೂರು: ಕಾಮಗಾರಿ ಹಂತದಲ್ಲಿರುವ ಒಳಚರಂಡಿ ಸಂಸ್ಕರಣ ಘಟಕವು ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

    ಪಟ್ಟಣದ 5ನೇ ವಾರ್ಡ್‌ನ ಹೊಳೆ ಬೀದಿಯಲ್ಲಿ ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿಯಿಂದ 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಭೇಟಿ ಮಾಡಿ ಪರಿಶೀಲಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಥಮವಾಗಿ ಒಳ ಚರಂಡಿ ಸಂಸ್ಕರಣ ಘಟಕ ಹೈಟೆಕ್ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ಜತೆಗೆ ಹಲವಾರು ವರ್ಷಗಳಿಂದ ಈ ಭಾಗದ ಜನರ ಸಮಸ್ಯೆ ಅರಿತು ಹೈಟೆಕ್ ಮಾದರಿಯಲ್ಲಿ ಸಂಸ್ಕರಣ ಘಟಕ ನಿರ್ಮಿಸಲಾಗುತ್ತಿದ್ದು, ಇದು ನಮ್ಮ ಪಟ್ಟಣಕ್ಕೆ ಇದು ಅತ್ಯಂತ ಉಪಯುಕ್ತವಾಗಿದೆ ಎಂದರು.

    ಕೊಳಚೆ ನಿರ್ಮಾಣ ಮಂಡಳಿಯಿಂದ ಈ ಘಟಕ ನಿರ್ಮಿಸುತ್ತಿದ್ದು, ಪಟ್ಟಣದ 23 ವಾರ್ಡ್‌ಗಳಿಂದ ಬರುವ ತ್ಯಾಜ್ಯದ ನೀರನ್ನು ಸಂಸ್ಕರಣೆ ಮಾಡಿದ ನಂತರ ಅದನ್ನು ಶುದ್ಧೀಕರಿಸಲಾಗುವುದು. ಈಗಾಗಲೇ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು.

    ಪುರಸಭೆ ಸದಸ್ಯ ಜಮಾಲ್ ಮಾತನಾಡಿ, ಪಟ್ಟಣದ 23 ವಾರ್ಡ್‌ಗಳ ತ್ಯಾಜ್ಯದ ನೀರು ಇಲ್ಲಿನ ಯುಜಿಡಿ ಪ್ಲಾಂಟ್‌ಗೆ ಶೇಖರಣೆಯಾಗುತ್ತಿತ್ತು. ಇದರಿಂದ ಸ್ಥಳಿಯರು ದುರ್ವಾಸನೆಯಿಂದ ಪರದಾಡುವಂತಾಗಿತ್ತು. ಆದರೆ ಜನರ ಸಮಸ್ಯೆಗೆ ಪರಿಹಾರ ನೀಡುವಂತೆ ಈಗಾಗಲೇ ಹೈಟೆಕ್ ಮಾದರಿಯಲ್ಲಿ ಒಂದು ವರ್ಷದಿಂದ ಸುಸಜ್ಜಿತವಾದ ಒಳಚರಂಡಿ ಸಂಸ್ಕರಣ ಘಟಕ ನಿರ್ಮಿಸಲಾಗುತ್ತಿದೆ ಎಂದರು.

    ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಯಾವುದೇ ಒಳಚರಂಡಿ ನೀರನ್ನು ಹೊಳೆಗೆ ಬಿಡುವಂತಿಲ್ಲ. ಇದನ್ನು ಅರಿತು ಒಳಚರಂಡಿ ಮಂಡಳಿಯಿಂದ ಸಂಸ್ಕರಣ ಘಟಕವನ್ನು ನಿರ್ಮಿಸಲಾಗುತ್ತದೆ ಎಂದರು.

    ಪುರಸಭೆ ಸದಸ್ಯರು, ಸಿಬ್ಬಂದಿ, ಸ್ಥಳೀಯ ನಿವಾಸಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts