More

    ಕರೊನಾ ತುರ್ತು ನಿಗಾ ಉಲ್ಬಣ, ಕೇಂದ್ರದಿಂದ ಆಕ್ಸಿಜನ್ ಅಲರ್ಟ್!

    ಬೆಂಗಳೂರು: ಕರೊನಾ ಕೈಮೀರಿರುವ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಗೆ ಸಿಲುಕಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ವೆಂಟಿಲೇಟರ್ ಹಾಗೂ ಆಕ್ಸಿಜನ್ ಸಿಲಿಂಡರ್ ಬಳಕೆಗೆ ಬೇಡಿಕೆ ವಿಪರೀತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಕ್ಸಿಜನ್ ಉತ್ಪಾದಕರ ಮೊರೆ ಹೋಗಿದೆ.

    ಕೇಂದ್ರ ಗೃಹ ಇಲಾಖೆಯು ಎಲ್ಲ ರಾಜ್ಯದ ಆರೋಗ್ಯ ಮತ್ತು ಕೈಗಾರಿಕೆ ಇಲಾಖೆಗೆ ಪತ್ರ ಬರೆದು ಕೈಗಾರಿಕೆ ಉದ್ದೇಶಕ್ಕೆ ಆಕ್ಸಿಜನ್ ಸಿಲಿಂಡರ್ ಉತ್ಪಾದಿಸುವ ಘಟಕಗಳ ಮಾಹಿತಿ ಕೇಳಿದೆ. ರಾಜ್ಯವು ಪೂರ್ವ ತಯಾರಿಯಾಗಿ ಈ ಮಾಹಿತಿ ಸಿದ್ಧಪಡಿಸಿಕೊಂಡಿದ್ದು, ಕೇಂದ್ರಕ್ಕೆ ಕಳಿಸಿದೆ. ಆಕ್ಸಿಜನ್ ಸಿಲಿಂಡರ್ ಉತ್ಪಾದಿಸುವ ಮತ್ತು ಉತ್ಪಾದನಾ ಸಾಮರ್ಥ್ಯದ ಮಾಹಿತಿ ಕೇಳಿದ್ದು, ಬಳಿಕ ಉತ್ಪಾದಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಕ್ಸಿಜನ್ ಸಿಲಿಂಡರ್ ಬಳಸಿಕೊಳ್ಳಲು ಕೇಂದ್ರ ಉದ್ದೇಶಿಸಿದೆ. ಈ ಸಂಬಂಧ ಇಷ್ಟರಲ್ಲೇ ಆದೇಶ ಕೂಡ ಹೊರಡಲಿದೆ.

    ರಾಜ್ಯದಲ್ಲಿ ಒಟ್ಟು 48 ಘಟಕಗಳಲ್ಲಿ ಆಕ್ಸಿಜನ್ ಸಿಲಿಂಡರ್ ಉತ್ಪಾದನೆಯಾಗುತ್ತಿದೆ. ಅಂದಾಜು 19 ಸಾವಿರ ಸಿಲಿಂಡರ್ ಉತ್ಪಾದನಾ ಸಾಮರ್ಥ್ಯವಿದ್ದು, ಆರೋಗ್ಯ ಉದ್ದೇಶಕ್ಕೆ ಮೊದಲ ಆದ್ಯತೆಯಾಗಿ ನೀಡುವಂತೆ ಈ ಉತ್ಪಾದಕರಿಗೆ ಸೂಚನೆ ನೀಡಲಾಗುತ್ತದೆ. ತಾವು ಹೇಳುವವರೆಗೂ ಕೈಗಾರಿಕೆಗಳ ಬಳಕೆಗೆ ಸಿಲಿಂಡರ್ ನೀಡದೆ ಆರೋಗ್ಯ ಬಳಕೆಗೆ ನೀಡುವಂತೆ ಆದೇಶಿಸ ಲಾಗುತ್ತಿದೆ. ಉತ್ಪಾದಕರ ನೆಟ್​ವರ್ಕ್ ಮ್ಯಾಪಿಂಗ್ ಮಾಡಿ, ಈ ಘಟಕಗಳ ಸಮೀಪದ ಆಸ್ಪತ್ರೆಗಳಿಗೆ ಅಲ್ಲಿಂದ ಸರಬರಾಜಾಗುವಂತೆ, ಉತ್ಪಾದನಾ ಸಾಮರ್ಥ್ಯ ಹೆಚ್ಚಿ ಸಲು ಅವಕಾಶವಿದ್ದರೆ ಉತ್ಪಾದನೆ ಹೆಚ್ಚಿಸುವಂತೆಯೂ ಸರ್ಕಾರದಿಂದ ಸೂಚನೆ ಇದೆ ಎನ್ನುತ್ತವೆ ಮೂಲಗಳು.

    ಕರೊನಾ ತುರ್ತು ನಿಗಾ ಉಲ್ಬಣ, ಕೇಂದ್ರದಿಂದ ಆಕ್ಸಿಜನ್ ಅಲರ್ಟ್!ಆರೋಗ್ಯ ಸೇವೆಗೆ ಮೊದಲ ಆದ್ಯತೆ: ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಫಾರ್ವಸ್ಯೂಟಿಕಲ್ಸ್ ಕಾರ್ಯದರ್ಶಿ, ಪ್ರಕರಣ ಹೆಚ್ಚಿರುವ ಮಹಾರಾಷ್ಟ್ರ ಮತ್ತು ಕರ್ನಾಟಕ ಮತ್ತಿತರ ರಾಜ್ಯಗಳ ಆಕ್ಸಿಜನ್ ಸೌಲಭ್ಯ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿದ್ದಾರೆ. ಪ್ರಸ್ತುತ ದೇಶದಲ್ಲಿ ಒಟ್ಟಾರೆ ಆರೋಗ್ಯ ಸೇವೆಗೆ ಪ್ರತಿದಿನ 4 ಸಾವಿರ ಮಿಲಿಯನ್ ಟನ್​ನಷ್ಟು ಆಕ್ಸಿಜನ್ ಸರಬರಾಜಾಗುತ್ತಿದೆ. ಹಾಗೆಯೇ 2020ರ ಸೆಪ್ಟೆಂಬರ್​ನಲ್ಲಿ ಪ್ರತಿದಿನ 6,400 ಮಿಲಿಯನ್ ಟನ್ ಆಕ್ಸಿಜನ್ ಒದಗಿಸಲಾಗುತ್ತಿತ್ತು. ಹೆಚ್ಚುವರಿಯಾಗಿ ಉಕ್ಕು ಘಟಕಗಳು ಪ್ರತಿದಿನ ಅಂದಾಜು 550 ಮಿಲಿಯನ್ ಟನ್ ಆಕ್ಸಿಜನ್ ಒದಗಿಸುತ್ತಿತ್ತು. ಇದೀಗ ಕೈಗಾರಿಕೆಗಳಿಗೆ ಬಳಕೆಯಾಗುವ ಸಿಲಿಂಡರ್​ಗಳನ್ನು ಗಣನೀಯವಾಗಿ ಆರೋಗ್ಯಸೇವೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

    ಜಿಲ್ಲಾಡಳಿತಗಳಿಗೆ ಸೂಚನೆ: ಆಕ್ಸಿಜನ್ ಸಿಲಿಂಡರ್ ಉತ್ಪಾದಕರಿಗೆ ಯಾವುದೇ ಅಡೆತಡೆ, ಸ್ಥಳೀಯ ಮಟ್ಟದಲ್ಲಿ ಹಸ್ತಕ್ಷೇಪ ಮಾಡದಂತೆ ಕೇಂದ್ರ ಸರ್ಕಾರ ಜಿಲ್ಲಾಡಳಿತಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಪರಿಸ್ಥಿತಿ ನಿಭಾಯಿಸಲು ಈ ಸಾಧನ ಅತ್ಯಗತ್ಯ. ಉತ್ಪಾದನಾ ಚಟುವಟಿಕೆಗೆ ಎಲ್ಲ ರೀತಿಯ ಸಹಕಾರ ನೀಡಲು ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

    ದೇಶದ ಸಾಮರ್ಥ್ಯವೇನು?: 5 ದೊಡ್ಡ ಮತ್ತು 600 ಸಣ್ಣ ಆಕ್ಸಿಜನ್ ಉತ್ಪಾದಕರು ದೇಶದಲ್ಲಿದ್ದಾರೆ. 400ಕ್ಕೂ ಮಿಕ್ಕಿ ಆಸ್ಪತ್ರೆಗಳು ಸ್ವತಃ ಆಕ್ಸಿಜನ್ ಉತ್ಪಾದಿಸುತ್ತಿವೆ ಮತ್ತು ಸುಮಾರು 1050 ಕ್ರಯೋಜಿನಿಕ್ ಟ್ಯಾಂಕರ್​ಗಳಿವೆ. 4.50 ಲಕ್ಷ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್​ಗಳು ಪೂರೈಕೆಗೆ ಲಭ್ಯವಿದೆ. 1.03 ಲಕ್ಷ ಹೊಸ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್​ಗೆ ಆದೇಶ ನೀಡಿದ್ದು, ಅದೀಗ ಹಂತಹಂತವಾಗಿ ಬಳಕೆಗೆ ಲಭ್ಯವಾಗುತ್ತಿದೆ.

    ಎಲ್ಲಿ ಎಷ್ಟು ಉತ್ಪಾದಕರು?: ಬೆಂಗಳೂರು ಗ್ರಾಮಾಂತರ 7, ಬಳ್ಳಾರಿ 7, ಬೆಳಗಾವಿ 2, ವಿಜಯಪುರ 1, ದಾವಣಗೆರೆ 3, ಧಾರವಾಡ 3, ಕಲಬುರಗಿ 4, ಕಾರವಾರ 1, ಕೊಪ್ಪಳ 4, ಮಂಗಳೂರು 3, ಮೈಸೂರು 6, ರಾಯಚೂರು 3, ಶಿವಮೊಗ್ಗ 1, ತುಮಕೂರು 2, ರಾಮನಗರ 1.

    ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಅಳೆಯಲಿದೆ ನೆಟ್​ವರ್ಕ್​ ಸರ್ವೇ ವಾಹನ; ತಂತ್ರಜ್ಞಾನ ಆಧಾರಿತ ಸರ್ವೇಗೆ ಎನ್‌ಎಚ್‌ಎಐ ಕ್ರಮ

    ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts