More

    ಸಿಬ್ಬಂದಿ ಕೊರತೆಯಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವಿಳಂಬ: ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಾಹಿತಿ

    ನವದೆಹಲಿ: ಸಿಬ್ಬಂದಿ ಕೊರತೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಾಟ ನಡೆಸುವ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನಾಗರೀಕ ವಿಮಾನಯಾನ ಸಚಿವಾಲಯ ತಿಳಿಸಿದೆ.

    ಪ್ರಮುಖವಾಗಿ ಗಲ್ಫ್​ ರಾಷ್ಟ್ರಗಳಿಗೆ ತೆರಳುವ ವಿಮಾನಗಳಿಗೆ ಇದು ಅನ್ವಯವಾಗಲಿದ್ದು, ಭಾರತದಿಂದ ಯುಎಇಗೆ ತೆರಳುವ ವಿಮಾನವನ್ನು ಆಗಸ್ಟ್​ 24 ರವರೆಗೆ ಸ್ಥಗಿತಗೊಳಿಸಲಾಗಿದ್ದು, ಭುವನೇಶ್ವರದಿಂದ ದುಬೈ ಹಾರಾಟವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದೆ.

    ಸದ್ಯ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ತಿಳಿಸಿದ್ದು, ಕಾರ್ಯಾಚರಣೆ ಪುನರಾರಂಭಿಸಿದ ಬಳಿಕ ಮರುಪಾವತಿ ಅಥವಾ ಇತರ ವಿಮಾನಗಳಲ್ಲಿ ವಸತಿ ಸೌಕರ್ಯದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದೆ.

    ಯುಎಇ ಖಾಯಂ ನಿವಾಸಿಗಳಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ನಿರ್ಗಮನದ 48 ಗಂಟೆಗಳ ಮೊದಲಿ ಆರ್​ಟಿಪಿಸಿಆರ್​ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಮತ್ತು ವಿಮಾನ ಹಾರಾಟಕ್ಕೆ ಕೆಲವು ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ಮತ್ತೊಂದು ಕ್ಷಿಪ್ರ-ಪಿಸಿಆರ್​​ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

    ಸದ್ಯ ಇಂಡಿಗೋ ವಿಮಾನದ ಪ್ರಯಾಣಿಕರಿಗೆ ಪಿಸಿಆರ್​ ಪರೀಕ್ಷೆ, ಪ್ರಯಾಣಿಕರನ್ನು ಸ್ವೀಕರಿಸುವ ಮೊದಲು ಪರೀಕ್ಷಾ ವರದಿಗಳನ್ನು ಪರಿಶೀಲಿಸಲು ವಿಮಾನ ನಿಲ್ದಾಣದಲ್ಲಿ ಚೆಕ್​​ ಇನ್​ ಸಿಬ್ಬಂದಿ ಕೊರತೆ ಇದೆ ಎಂದು ಸಂಸ್ಥೆ ಹೇಳಿಕೊಂಡಿದೆ. (ಏಜೆನ್ಸೀಸ್​)

    ಇಬ್ಬರು ಎಲ್​ಇಟಿ ಉಗ್ರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರಿಗೆ ಸಿಕ್ತು ಭಾರೀ ನಗದು ಬಹುಮಾನ!

    ಧೂಮ್​​ ಚಿತ್ರದ ಪ್ರೇರಣೆಯಿಂದ ಶಾಲೆಗೆ ಕನ್ನ: ಕಳ್ಳತನ ಬಳಿಕ ಬೋರ್ಡ್​​ ಮೇಲೆ ಬರೆದಿದ್ದು ನೋಡಿ ಶಿಕ್ಷಕರೇ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts