More

    ಲೋಕಸ್ಪಂದನದಿಂದ ಪೊಲೀಸ್ ಇಲಾಖೆ ಜನಸ್ನೇಹಿ

    ಬೀರೂರು: ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸಲು ಗೃಹ ಇಲಾಖೆ ಲೋಕಸ್ಪಂದನಾ ಕಾರ್ಯಕ್ರಮ ಜಾರಿಗೊಳಿಸಿದ್ದು, ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೊರೆಯುವ ಸ್ಪಂದನೆ ಕುರಿತು ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಲೋಕಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಹ ಇಲಾಖೆ ಸಾರ್ವಜನಿಕರ ಹಿತದಷ್ಟಿಯಿಂದ ವಿನೂತನ ಯೋಜನೆ ಜಾರಿಗೊಳಿಸಿದೆ. ಸಾರ್ವಜನಿಕರು ದೂರು, ಅರ್ಜಿ ಸಲ್ಲಿಸಲು ಠಾಣೆಗೆ ಬಂದಾಗ ವಿಎಂಎಸ್‌ನಲ್ಲಿ (ವಿಸಿಟರ್ ಮ್ಯಾನೇಜ್‌ಮೆಂಟ್ ಸಿಸ್ಟಂ) ವಿವರ ದಾಖಲಿಸಿಕೊಂಡು, ವಿವರದ ಮುದ್ರಿತ ಚೀಟಿ ನೀಡಲಾಗುತ್ತದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಮೇಲಧಿಕಾರಿಗಳಿಗೆ ಕ್ಯೂಆರ್ ಕೋಡ್ ಮೂಲಕ ಸ್ಕಾೃನ್ ಮಾಡಿ ಮಾಹಿತಿ ತಿಳಿಸಬಹುದು ಎಂದರು.
    ಬೀರೂರು ಪೊಲೀಸ್ ವತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ಜನಸ್ಪಂದನಾ ಮೂಲಕ ಪರೋಕ್ಷವಾಗಿ ಸಾರ್ವಜನಿಕರು ಸ್ಥಳೀಯ ಪೊಲೀಸರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಸಾರ್ವಜನಿಕರು ನೀಡಿರುವ ದೂರುಗಳು, ಅರ್ಜಿಗಳನ್ನು ವಿಳಂಬ ಮಾಡುವುದು, ಹಣ ಕೇಳುವುದು, ನಿರ್ಲಕ್ಷೃ ತೋರುವುದು, ಒರಟಾಗಿ ವರ್ತಿಸುವುದು, ಹಿಂದಿರುಗಿ ಹೋಗುವಂತೆ ಸೂಚಿಸುವುದು ಮತ್ತು ಎ್ಐಆರ್ ದಾಖಲಿಸಲು ಹಿಂದೇಟು ಹಾಕುವುದರ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲು ಅನುಕೂಲವಾಗಲಿದೆ ಎಂದರು.
    ಪೊಲೀಸ್ ಉಪನಿರೀಕ್ಷಕ ಸಜಿತ್‌ಕುಮಾರ್, ಪೇದೆಗಳಾದ ಮಧು, ಕುಮಾರ್, ಚಂದ್ರಶೇಖರ್, ಓಂಕಾರಮೂರ್ತಿ, ಅಂಜನ್‌ಮೂರ್ತಿ, ಅಶೋಕ್, ಶಿವಕುಮಾರ್, ರಾಧಾ, ಪುಷ್ಪಾ, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಮಾನಿಕ್ ಬಾಷಾ, ಮುಖಂಡ ಸಂತೋಷ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts