More

    ಭಾರತದಲ್ಲಿ ಮಾರ್ಚ್​ನಿಂದ ಈ ಮೆಡಿಸಿನ್​ಗಳು ಸಿಗಲ್ಲ, ಸಿಕ್ಕರೂ ತೆರಬೇಕಾಗುತ್ತದೆ ಭಾರೀ ಬೆಲೆ: ಇದೆಲ್ಲ ಕೊರೊನಾ ಎಫೆಕ್ಟ್​

    ನವದೆಹಲಿ: ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾದ ಪರಿಣಾಮವನ್ನು ಭಾರತ ಎದುರಿಸುತ್ತಿದೆ. ಚೀನಾದಿಂದ ಭಾರತಕ್ಕೆ ಆಮದು ಸ್ಥಗಿತಗೊಂಡಿದ್ದು, ಎಲೆಕ್ಟ್ರಾನಿಕ್​, ಸ್ಮಾರ್ಟ್​ಫೋನ್​, ಮೆಡಿಕಲ್​ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೂ ಅದು ಹೊಡೆತ ನೀಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ತಿಂಗಳಲ್ಲಿ ಭಾರತದಲ್ಲಿ ಅನೇಕ ಔಷಧಗಳು ಲಭ್ಯವಾಗುವುದಿಲ್ಲ ಮತ್ತು ಅನೇಕ ಔಷಧಗಳ ಬೆಲೆ ಹೆಚ್ಚಲಿದೆ ಎಂದು ಹೇಳಲಾಗಿದೆ.

    ಚೀನಾದಿಂದ ಆಮದು ಸ್ಥಗಿತಗೊಂಡಿರುವ ಹಿನ್ನೆಲೆ ಫೆಡರೇಶನ್​ ಆಫ್​ ಇಂಡಿಯನ್​ ಚೇಂಬರ್ಸ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರಿ (ಎಫ್​ಐಸಿಸಿಐ) ಭಾರತದ ಅನೇಕ ಇಂಡಸ್ಟ್ರಿಗಳಿಂದ ವರದಿ ಸಂಗ್ರಹಿಸಿದೆ. ಯಾವ ಯಾವ ಸಾಮಾಗ್ರಿಗಳ ಕೊರತೆ ಉಂಟಾಗಿದೆ ಎನ್ನುವುದನ್ನು ಪಟ್ಟಿ ಮಾಡಿದೆ. ಈ ಪಟ್ಟಿಯ ಅನುಸಾರ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪ್ಯಾರಸಿಟಮಾಲ್​, ಐಬ್ರುಫಿನ್​ ನಂತಹ ಔಷಧಗಳಲ್ಲಿ ಕೊರತೆ ಉಂಟಾಗುತ್ತಿದೆ.

    ಚೀನಾದಿಂದ ಆಮದಾಗುವ ಈ ಔಷಧಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಕೊರತೆಯಾಗಿದ್ದು, ಈ ತಿಂಗಳ ಅಂತ್ಯಕ್ಕೆ ಅವುಗಳು ಸಂಪೂರ್ಣವಾಗಿ ಖಾಲಿಯಾಗಬಹುದು ಎನ್ನಲಾಗಿದೆ. ಮುಂದಿನ ತಿಂಗಳೊಳಗೆ ಚೀನಾ ಕೊರೊನಾ ಮುಕ್ತವಾಗಿ ಸಹಜ ಸ್ಥಿತಿಗೆ ಬಾರದಿದ್ದರೆ ಹಲವು ಔಷಧಗಳ ಕೊರತೆ ಉಂಟಾಗಲಿದ್ದು, ವ್ಯಾಪಾರ ಸ್ಥಗಿತವಾಗಬಹುದು ಎಂದು ಎಫ್​ಐಸಿಸಿಐ ತಿಳಿಸಿದೆ.

    ಆಮದು ಇಲ್ಲದ ಕಾರಣ ಔಷಧಗಳ ಬೆಲೆ ಏರಿಕೆ ಮಾಡಬೇಕಾಗಬಹುದು ಎಂದು ಸಹ ಹೇಳಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts