More

    ಸೇವೆ, ತ್ಯಾಗದ ಪ್ರತೀಕ ಧರ್ಮ

    ಶೃಂಗೇರಿ: ಧರ್ಮ ಎಂದರೆ ಕೇವಲ ಪೂಜೆ ಪುನಸ್ಕಾರವಲ್ಲ. ಧರ್ಮ ಎಂದರೆ ಸೇವೆ, ಸೇವೆ ತ್ಯಾಗದ ಪ್ರತೀಕ. ಮಾನವನು ಸಮಾಜದಲ್ಲಿ ತನ್ನ ಜೀವನವನ್ನು ಸಾರ್ಥಕಗೊಳಿಸಬೇಕಾದರೆ ಬಡವರ ಸೇವೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
    ಶೃಂಗೇರಿಯ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಅವರಣದಲ್ಲಿ ಶನಿವಾರ ಅಕ್ಷರಮಿತ್ರ ಬಳಗದ 15ನೇ ವರ್ಷದ ವಾರ್ಷಿಕೋತ್ಸವ, ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮತ್ತು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಚಿಕ್ಕವರಾಗಿದ್ದಾಗ ವಿಶ್ವಮಾನವರಾಗಿದ್ದೆವು. ಆದರೆ ಬೆಳೆಯುತ್ತಾ ಅಲ್ಪ ಮಾನವರಾಗುತ್ತಿದ್ದೇವೆ. ಜಾತಿ, ಧರ್ಮ ಎಂದು ಕಚ್ಚಾಡುತ್ತಿದ್ದೇವೆ. ಮಾನವನ ಜನ್ಮ ದೊಡ್ಡದು. ಈ ಜನ್ಮದಲ್ಲಿ ವಿಶಾಲ ಚಿಂತನೆ ಬೆಳೆಸಿಕೊಳ್ಳಬೇಕು. ಉತ್ತಮ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಸೇವೆ ಎಂಬುದು ಪ್ರಚಾರಕ್ಕೆ ಇರುವುದಲ್ಲ. ನಾನು ಎಂಬ ಅಹಂನಿಂದ ದೂರವಿದ್ದಾಗ ಮಾತ್ರ ಉತ್ತಮ ಕಾರ್ಯಮಾಡಲು ಸಾಧ್ಯ. ಯುವಪೀಳಿಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
    ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಸಾಮಾಜಿಕ ಚಿಂತನೆಗಳೊಂದಿಗೆ ಸಮಾಜ ಸೇವೆ ಮಾಡಬೇಕು. ದೇವರು ಸುಖ,ದು:ಖ ಎಲ್ಲವನ್ನೂ ನಮಗೆ ನೀಡಿದ್ದಾನೆ. ಹುಟ್ಟುವಾಗ ಬಡವನಾಗಿ ಹುಟ್ಟಿದ್ದರೂ ಹೃದಯ ಶ್ರೀಮಂತಿಕೆಯಿಂದ ಬದುಕ ಬಹುದು. ಮಾನವನು ಸಣ್ಣವನಿರುವಾಗಲೇ ತನ್ನ ವ್ಯಕ್ತಿತ್ವವನ್ನು ರೂಪಿಸಲು ವಿಪುಲ ಅವಕಾಶವಿರುತ್ತದೆ. ಅದನ್ನು ಆತ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಮಾಡುವ ಸೇವೆ ರಾಷ್ಟ್ರದ ಭವಿಷ್ಯತ್ತಿನ ಆಶಾದಾಯಕ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts