More

    ಸೇವಾ ಮನೋಭಾವವೇ ಪರಿಣಾಮಕಾರಿ

    ಬೆಳಗಾವಿ: ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ಸೇವಾ ಮನೋಭಾವ, ಸಂತೋಷ ಹಾಗೂ ಮೌಲ್ಯಗಳೇ ಅತ್ಯಂತ ಪರಿಣಾಮಕಾರಿ ಎಂದು ಪುಣೆಯ ಡಾ.ಡಿ.ವೈ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಚಿಕ್ಕಮಕ್ಕಳ ತಜ್ಞ ಡಾ.ಪ್ರಮೋದ ಜೋಗ ಹೇಳಿದ್ದಾರೆ. ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಸೆಂಟರ್ ವತಿಯಿಂದ ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವೈದ್ಯಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ವೈದ್ಯರು ಆರೋಗ್ಯಯುತವಾಗಿರಲು ಸರಳ ಜೀವನ ವಿಧಾನ ಅನುಸರಿಸಬೇಕು. ಆರೋಗ್ಯಕರ ಆಹಾರ ಶೈಲಿ, ವ್ಯಾಯಾಮ, ಧನಾತ್ಮಕ ಆಲೋಚನೆಗಳಿಂದ ಸದಾ ಹಸನ್ಮುಖಿಯಾಗಿರಲು ಉತ್ತಮ ಕಾರ್ಯಚಟುವಟಿಕೆ ರೂಢಿಸಿಕೊಳ್ಳಬೇಕು ಎಂದರು.

    ಚಿಕಿತ್ಸೆಯಲ್ಲಿ ಸಮಯಪಾಲನೆ, ಆಪ್ತ ಸಮಾಲೋಚನೆ, ರೋಗಿಗಳಿಗೆ ಚಿಕಿತ್ಸೆ ಕುರಿತು ಸರಿಯಾದ ಮಾರ್ಗದರ್ಶನ ನೀಡಿ, ಪ್ರಯೋಜನಗಳ ವಿವರಣೆ ನೀಡಬೇಕು. ಅವರಿಗೆ ಧೈರ್ಯ ತುಂಬುವುದರಿಂದ ಚಿಕಿತ್ಸೆಯ ಮೇಲೆ ಧನಾತ್ಮಕ ಪರಿಣಾಮ ಬೀರಿ, ಕಾಯಿಲೆ ಗುಣಮುಖವಾಗಲು ಸಹಕಾರಿಯಾಗಲಿದೆ ಎಂದರು.

    ಕಾಹೆರ್ ಕುಲಪತಿ ಡಾ.ವಿವೇಕ ಸಾವೋಜಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಸ್. ಮಹಾಂತಶೆಟ್ಟಿ, ಕುಲಸಚಿವ ಡಾ. ವಿ.ಎ. ಕೋಠಿವಾಲೆ, ಡಾ. ವಿ.ಡಿ. ಪಾಟೀಲ, ಡಾ. ಆರ್.ಎಸ್. ಮುಧೋಳ, ಡಾ. ಎ.ಪಿ. ಹೊಗಾಡೆ, ರೇಖಾ ಮುಧೋಳ, ವಿದ್ಯಾರ್ಥಿ ಸಮಿತಿಯ ರೇವತಿ ಪಾಟೀಲ, ಸಾಕ್ಷಿ ಶಾಹ, ಪ್ರೇರಣಾ ತುಳಸೈನಿ, ರಿದ್ದಿ ಸುರಿ, ಸಂಜನಾ ಭಾಟಿಯಾ, ಆಶ್ನಾ ಸೇಠ್, ರವಿತಾ ಯಾದವ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts