More

    ಮುನ್ನುಗ್ಗಿ ಸುಸ್ತಾದ ಗೂಳಿ ಕುಸಿಯತೊಡಗಿದೆ…

    ಮುಂಬಯಿ : ಷೇರುಪೇಟೆಯಲ್ಲಿ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​​ಎಸ್​ಇ ನಿಫ್ಟಿ ಸತತ ಐದು ದಿನಗಳ ಏರಿಕೆ ಸಾರ್ವಕಾಲಿಕ ಎತ್ತರ ದಾಖಲೆ ನಿರ್ಮಿಸಿದ ಬಳಿಕ ದಿಢೀರ್ ಕುಸಿತ ಕಾಣಲಾರಂಭಿಸಿದೆ. ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 144 ಅಂಶ ಇಳಿದರೆ, ನಿಫ್ಟಿ 50ಕ್ಕೂ ಹೆಚ್ಚು ಅಂಶ ಇಳಿಕೆ ದಾಖಲಿಸಿದೆ. ಎಚ್​ಡಿಎಫ್​​ಸಿ, ರಿಲಯನ್ಸ್ ಇಂಡಸ್ಟ್ರೀಸ್​ ಮತ್ತು ಐಸಿಐಸಿಐ ಬ್ಯಾಂಕ್​ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿವೆ.

    ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 143.62 ಅಂಶ ಇಳಿದು 45,959.88 ಅಂಶದಲ್ಲಿ ಕೊನೆಗೊಂಡಿದೆ. ನಿಫ್ಟಿ 13,478.30 ಅಂಶದಲ್ಲಿ ದಿನದ ವಹಿವಾಟು ಮುಕ್ತಾಯವಾಗಿದೆ. ಸೆನ್ಸೆಕ್ಸ್​ನಲ್ಲಿ ಅಲ್ಟ್ರಾಟೆಕ್​ ಸಿಮೆಂಟ್ ಷೇರು ಗರಿಷ್ಠ ಶೇಕಡ 3 ಕುಸಿದರೆ, ಎಂಆ್ಯಂಡ್ಎಂ, ಎಚ್​ಡಿಎಫ್​ಸಿ ಬ್ಯಾಂಕ್​, ಇಂಡಸ್​ಇಂಡ್​ ಬ್ಯಾಂಕ್​, ಏಕ್ಸಿಸ್ ಬ್ಯಾಂಕ್​, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಸಿಐಸಿಐ ಬ್ಯಾಂಕ್​ ಷೇರುಗಳು ನಷ್ಟ ಅನುಭವಿಸಿವೆ. ಇನ್ನೊಂದೆಡೆ, ನೆಸ್ಟ್ಲೆ ಇಂಡಿಯ, ಐಟಿಸಿ, ಎಚ್​ಯುಎಲ್​, ಕೊಟಾಕ್ ಬ್ಯಾಂಕಿನ ಷೇರುಗಳು ಲಾಭಗಳಿಸಿವೆ.

    ಇದನ್ನೂ ಓದಿ:  ಲಕ್ಷಾಂತರ ರೂ. ಖರ್ಚು ಮಾಡಿ ಮದ್ವೆಯಾದೆ- ಹೆಂಡ್ತಿ ಮುಟ್ಟಲು ಬಿಡುತ್ತಿಲ್ಲ: ದುಡ್ಡೂ ಇಲ್ಲ, ಪತ್ನಿಯೂ ಸಿಗದ ನನಗೇನು ಪರಿಹಾರ?

    ಜಾಗತಿಕವಾಗಿಯೂ ಷೇರುಪೇಟೆಯಲ್ಲಿ ಮಿಶ್ರವಹಿವಾಟು ನಡೆದಿದ್ದು, ಏಷ್ಯಾದಲ್ಲಿ ಹಾಂಕಾಂಗ್​, ಸಿಯೋಲ್, ಟೋಕಿಯೋಗಳಲ್ಲಿನ ಷೇರುಪೇಟೆ ನಷ್ಟ ಅನುಭವಿಸಿದರೆ, ಶಾಂಘೈ ಪೇಟೆ ಲಾಭದಲ್ಲಿ ವಹಿವಾಟು ಮುಗಿಸಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಬಂಗಾಳದಲ್ಲಿ ಟಿಎಂಸಿ ಬೆಂಬಲಿಗರಿಂದ ಕಲ್ಲು ತೂರಾಟ- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts