More

    259.58 ಅಂಕ ಇಳಿಕೆ ಕಂಡ ಸೆನ್ಸೆಕ್ಸ್​

    ಮುಂಬೈ: ಭಾರತದ ಷೇರು ಸೂಚ್ಯಂಕ ಶನಿವಾರ ಆರಂಭಿಕ ಲಾಭ ಗಳಿಸಿದರೂ, ದಿನದ ಕೊನೆಯಲ್ಲಿ ಇಳಿಕೆಯೊಂದಿಗೆ ಅಂತ್ಯ ಕಂಡವು.

    ಇದೇ ಮೊದಲ ಬಾರಿಗೆ ಶನಿವಾರ ವಿಶೇಷ ವಹಿವಾಟು ನಡೆಸಿದ ಷೇರುಪೇಟೆ, ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸೋಮವಾರ ರಜಾ ಘೋಷಣೆ ಮಾಡಿದೆ. ಸೆನ್ಸೆಕ್ಸ್​ 259.58 ಪಾಯಿಂಟ್​ ಕುಸಿದು 71,423.65ಕ್ಕೆ ಸ್ಥಿರವಾಯಿತು.

    ನಿಫ್ಟಿ 50.60 ಪಾಯಿಂಟ್​ ಇಳಿಕೆ ಕಂಡು 21,571.80ಕ್ಕೆ ತಲುಪಿತು. ಕೋಟಕ್​ ಬ್ಯಾಂಕ್​, ಪವರ್​ ಗ್ರಿಡ್​, ಐಸಿಐಸಿಐ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಪವರ್​ ಗ್ರಿಡ್​ ಲಾಭ ಗಳಿಸಿದವು. ಎಚ್​ಯುಎಲ್​, ಟಿಸಿಎಸ್​, ಇಂಡಸ್​ಇಂಡ್​ ಬ್ಯಾಂಕ್​, ಎಚ್​ಸಿಎಲ್​ ಟೆಕ್​ ನಷ್ಟ ಅನುಭವಿಸಿದವು. ರಿಲಯನ್ಸ್​ ಇಂಡಸ್ಟ್ರೀಸ್​ ಷೇರುಗಳು ಮೂರನೇ ತೆಮಾಸಿಕ ಗಳಿಕೆಯ ಪ್ರಕಟಣೆಯ ನಂತರ ಶೇ. 0.80 ಕಡಿಮೆಯಾಗಿ 2713.20 ರೂ.ಗೆ ಮುಕ್ತಾಯ ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts