More

    ಮತ್ತೆ ದಾಖಲೆ ನಿರ್ಮಿಸಿದ ಸೆನ್ಸೆಕ್ಸ್, ನಿಫ್ಟಿ

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ ಮತ್ತೆ ಸಾರ್ವಕಾಲಿಕ ಎತ್ತರಕ್ಕೆ ಏರಿ ದಾಖಲೆ ನಿರ್ಮಿಸಿದೆ. ಮಂಗಳವಾರದ ವಹಿವಾಟಿನ ಆರಂಭದ ವೇಳೆ ಬಿಎಸ್​ಇ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ದಾಖಲೆ ಮಟ್ಟ 44,161.16ಕ್ಕೆ ತಲುಪಿತ್ತು. ದಿನದ ಅಂತ್ಯಕ್ಕೆ 314.73 (ಶೇ.0.72) ಅಂಶ ಏರಿಕೆ ಕಂಡು 43.952.71ಕ್ಕೆ ವಹಿವಾಟು ಅಂತ್ಯಗೊಳಿಸಿದೆ.

    ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ ಇಂಟ್ರಾ ಡೇ ವಹಿವಾಟಿನಲ್ಲಿ ಸಾರ್ವಕಾಲಿಕ 12,934.05 ಅಂಶದೆತ್ತರ ಏರಿಕೆ ಆಗಿತ್ತು. ಬಳಿಕ ದಿನದ ಅಂತ್ಯಕ್ಕೆ 93.95 ಅಂಶ ಏರಿಕೆಯೊಂದಿಗೆ 12,874.20 ಅಂಶದಲ್ಲಿ ವಹಿವಾಟು ಮುಗಿಸಿದೆ.

    ಇದನ್ನೂ ಓದಿ:  ಜನೌಷಧ ಕೇಂದ್ರದಿಂದ ಜನಸಾಮಾನ್ಯರಿಗೆ ಲಾಭ, ಡಾ.ರಾಜೇಂದ್ರಕುಮಾರ್ ಅಭಿಮತ

    ಸೆನ್ಸೆಕ್ಸ್ ಪಟ್ಟಿಯಲ್ಲಿ ಟಾಟಾ ಸ್ಟೀಲ್ ಷೇರು ಮೌಲ್ಯ ಶೇ.6.24 ಹೆಚ್ಚಾಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎಲ್ ಆಂಡ್ ಟಿ, ಮಾರುತಿ, ಇಂಡಸ್​ಲ್ಯಾಂಡ್ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ಲಾಭ ಗಳಿಸಿವೆ. ಮತ್ತೊಂದೆಡೆ ಎನ್​ಟಿಪಿಸಿ, ಎಚ್​ಸಿಎಲ್ ಟೆಕ್, ಒಎನ್​ಜಿಸಿ, ಇನ್ಪೋಸಿಸ್, ಐಟಿಸಿ, ಪವರ್ ಗ್ರಿಡ್ ಹಾಗೂ ಹಿಂದುಸ್ಥಾನ್ ಅನಿಲ್ವೆರ್ ಷೇರುಗಳ ಮೌಲ್ಯ ಇಳಿಕೆ ಕಂಡಿವೆ. (ಏಜೆನ್ಸೀಸ್)

    ಮಾರುತಿ ಎರ್ಟಿಗಾ 5.5 ಲಕ್ಷ ಕಾರು ಸೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts