More

    43,000ದ ಗಡಿ ದಾಟಿತು ಸೆನ್ಸೆಕ್ಸ್, ನಿಫ್ಟಿ 12,600ಕ್ಕೆ ಏರಿಕೆ

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಮಂಗಳವಾರವೂ ಏರಿಕೆ ಮುಂದುವರಿಸಿವೆ. ಸೆನ್ಸೆಕ್ಸ್ 43,000 ದ ಗಡಿ ದಾಟಿದರೆ, ನಿಫ್ಟಿ 12,600ರ ಗಡಿ ದಾಟಿದೆ.

    ಕೋವಿಡ್​ 19 ವಾಕ್ಸಿನ್ ಟ್ರಯಲ್ಸ್ ಗೆ ಸಂಬಂಧಿಸಿದ ಸುದ್ದಿಯ ಕಾರಣಕ್ಕೆ ಜಾಗತಿಕ ಮಾರುಕಟ್ಟೆಯ ವಹಿವಾಟಿನಲ್ಲಿ ಏರಿಕೆ ಕಂಡುಬಂದಿದೆ. ಇದು ಭಾರತೀಯ ಷೇರುಪೇಟೆಯ ಮೇಲೂ ಪರಿಣಾಮ ಬೀರಿದೆ. ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 43,316.44 ಅಂಶ ಏರಿಕೆ ದಾಖಲಿಸಿದ್ದು, ದಿನದ ಅಂತ್ಯಕ್ಕೆ 680.22 ಅಂಶ (1.60%) ಏರಿಕೆಯೊಂದಿಗೆ 43,277.65 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ. ನಿಫ್ಟಿ ಕೂಡ ಇಂಟ್ರಾ ಡೇ ವಹಿವಾಟಿನಲ್ಲಿ 12,643.90 ಅಂಶದ ಗರಿಷ್ಠ ಮಟ್ಟ ತಲುಪಿ, ದಿನದ ಅಂತ್ಯಕ್ಕೆ 170.05 ಅಂಶ (1.36%) ಏರಿಕೆಯೊಂದಿಗೆ 12,631.10 ಅಂಶದಲ್ಲಿ ವಹಿವಾಟು ಮುಗಿಸಿದೆ.

    ಇದನ್ನೂ ಓದಿ: ಜಿಲ್ಲೆಯ ಸಹಕಾರ ಸಂಘಗಳಿಗೆ ಹೆಚ್ಚುವರಿ ಸಾಲ ನೀಡಲು 125 ಕೋಟಿ ಮೀಸಲು: ಡಿ.ಎಸ್.ಸುರೇಶ್

    ಸೆನ್ಸೆಕ್ಸ್ ಪಟ್ಟಿಯಲ್ಲಿ ಬಜಾಜ್ ಫೈನಾನ್ಸ್ ಟಾಪ್ ಗೇನರ್ ಆಗಿದ್ದು ಶೇಕಡ 9 ಲಾಭಾಂಶ ದಾಖಲಿಸಿದೆ. ಇಂಡಸ್ ಇಂಡ್​ ಬ್ಯಾಂಕ್​, ಎಲ್​ಆ್ಯಂಡ್ ಟಿ, ಬಜಾಜ್​ ಫಿನ್​ಸರ್ವ್​, ಎಚ್​ಡಿಎಫ್​ಸಿ, ಎಸ್​ಬಿಐ, ಐಸಿಐಸಿಐ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಒಎನ್​ಜಿಸಿ ಮತ್ತು ಆ್ಯಕ್ಸಿಸ್ ಬ್ಯಾಂಕ್​ ಗಳು ಕೂಡ ಲಾಭಾಂಶ ಗಳಿಸಿವೆ. ಇನ್ನೊಂದೆಡೆ ಟೆಕ್ ಮಹಿಂದ್ರಾ, ಎಚ್​ಸಿಎಲ್ ಟೆಕ್​, ಇನ್​ಫೋಸಿಸ್​, ನೆಸ್ಟ್ಲೆ ಇಂಡಿಯಾ, ಸನ್ ಫಾರ್ಮಾ, ಟಿಸಿಎಸ್ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಮಾರ್ಚ್ 31ರೊಳಗೆ ಎಲ್ಲ ಖಾತೆಗಳೂ ಆಧಾರ್​ ಜತೆ ಲಿಂಕ್​ ಆಗಿರಬೇಕು: ಬ್ಯಾಂಕುಗಳಿಗೆ ಕೇಂದ್ರ ವಿತ್ತ ಸಚಿವರ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts