More

    ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 70ಕ್ಕೂ ಅಂಶ ಕುಸಿತ, ನಿಫ್ಟಿ 12,200ರ ಕೆಳಕ್ಕೆ…

    ಮುಂಬೈ: ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (ಬಾಂಬೆ ಸ್ಟಾಕ್ ಎಕ್ಸ್​ಚೇಂಜ್) ಶುಕ್ರವಾರ ಆರಂಭಿಕ ವಹಿವಾಟಿನ ವೇಳೆ 70ಕ್ಕೂ ಹೆಚ್ಚು ಅಂಶ ಕುಸಿತ ದಾಖಲಿಸಿದರೆ, ನಿಫ್ಟಿ (ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​) 12,200ರ ಕೆಳಕ್ಕೆ ಕುಸಿತ ಕಂಡು ವಹಿವಾಟು ಆರಂಭಿಸಿದೆ.

    ಕೇಂದ್ರ ಬಜೆಟ್ ಮತ್ತು ಜಾಗತಿಕ ವಿದ್ಯಮಾನಗಳ ಕಾರಣದಿಂದಾಗಿ ಷೇರುಪೇಟೆ ವಹಿವಾಟು ಎಚ್ಚರಿಕೆಯಿಂದ ಸಾಗಿದೆ. ಸೆನ್ಸೆಕ್ಸ್​ ಶುಕ್ರವಾರ ಬೆಳಗ್ಗೆ 71.95 ಅಂಶ ಅಥವಾ ಶೇಕಡ 0.17 ಕುಸಿತ ಕಂಡು 41,314.45ರಲ್ಲಿ ಮತ್ತು ನಿಫ್ಟಿ 17.85 ಅಂಶ ಅಥವಾ ಶೇಕಡ 0.15 ಅಂಶ ಕುಸಿತ ಕಂಡು 12,162.50 ಯಲ್ಲಿ ವಹಿವಾಟು ಶುರುಮಾಡಿಕೊಂಡಿವೆ.
    ಸೆನ್ಸೆಕ್ಸ್ ಪಟ್ಟಿಯಲ್ಲಿ ಆರಂಭಿಕ ವಹಿವಾಟಿನ ಟಾಪ್ ಲೂಸರ್ಸ್ ಆಗಿ ಪವರ್​ಗ್ರಿಡ್​, ಕೊಟಾಕ್ ಬ್ಯಾಂಕ್​, ಇನ್​ಫೋಸಿಸ್​, ಟಿಸಿಎಸ್​, ಟಾಟಾ ಸ್ಟೀಲ್​, ಭಾರ್ತಿ ಏರ್​ಟೆಲ್​ ಕಾಣಿಸಿಕೊಂಡಿವೆ. ಇದೇ ವೇಳೆ, ಏಷ್ಯನ್ ಪೇಂಟ್ಸ್​, ಟೈಟಾನ್​, ಬಜಾಜ್ ಆಟೋ, ಆರ್​ ಐಎಲ್​, ಸನ್ ಫಾರ್ಮಾ, ಎಲ್​ಆ್ಯಂಡ್​ಟಿ, ಐಸಿಐಸಿಐ ಬ್ಯಾಂಕ್​​ ಷೇರುಗಳು ಏರಿಕೆ ದಾಖಲಿಸಿವೆ.

    ಷೇರುಪೇಟೆ ವಿಶ್ಲೇಷಕರ ಪ್ರಕಾರ, ಬಜೆಟ್ ವಿಶ್​​ಲಿಸ್ಟ್​, ಆರ್ಥಿಕ ಬೆಳವಣಿಗೆ ಪುನಶ್ಚೇತನ ಕ್ರಮಗಳ ಕುರಿತ ನಿರೀಕ್ಷೆ ಸೇರಿ ಹಲವು ಕಾರಣಗಳಿಂದಾಗಿ ಷೇರುಪೇಟೆಯ ಈ ಕಾಷಿಯಸ್ ಟ್ರೆಂಡ್​ ಕೆಲಸ ಸಮಯ ಮುಂದುವರಿಯಲಿದೆ. ಜಪಾನ್, ಹಾಂಕಾಂಗ್​ನಲ್ಲಿ ಮಾರುಕಟ್ಟೆ ವಹಿವಾಟು ತಣ್ಣಗೆ ಮುಂದುವರಿದರೆ, ಚೀನಾ, ತೈವಾನ್​, ಸೌತ್​ಕೊರಿಯಾದಲ್ಲಿ ಶುಕ್ರವಾರ ರಜೆಯ ಕಾರಣ ಮಾರುಕಟ್ಟೆ ವಹಿವಾಟು ನಡೆದಿಲ್ಲ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts