More

    ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಸಿಎಂ ಉದ್ಧವ್​ ಠಾಕ್ರೆಯವರಿಂದ ಭರ್ಜರಿ ಕೊಡುಗೆ; ನಾವೆಂದೂ ಹಿಂದುತ್ವ ಬಿಡೋಲ್ಲವೆಂದ ಶಿವಸೇನಾ ಚೀಫ್​

    ಅಯೋಧ್ಯಾ: ನಾವು ಬಿಜೆಪಿಯಿಂದ ದೂರವಾಗಿದ್ದೇವೆ ಹೊರತು ಹಿಂದುತ್ವವನ್ನು ಬಿಟ್ಟುಕೊಟ್ಟಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹೇಳಿದರು.

    ಅಯೋಧ್ಯೆಗೆ ಭೇಟಿ ನೀಡಿದ ಅವರು ಮಾತನಾಡಿ, ಬಿಜೆಪಿ ಎಂದರೆ ಹಿಂದುತ್ವ ಎಂದರ್ಥವಲ್ಲ. ಹಿಂದುತ್ವವೇ ಬೇರೆ, ಬಿಜೆಪಿಯೇ ಬೇರೆ ಎಂದರು.

    ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಟ್ರಸ್ಟ್​ನಿಂದ 1 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ ಅವರು, ನಾನಿಲ್ಲಿ ಶ್ರೀರಾಮನ ಆಶೀರ್ವಾದ ಪಡೆಯಲು ಬಂದಿದ್ದೇನೆ. ಇಂದು ನನ್ನ ಜತೆಗೆ ಭಗವಾ ಕುಟುಂಬದ ಹಲವು ಸದಸ್ಯರು ಬಂದಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಇದು ನನ್ನ ಮೂರನೇ ಭೇಟಿ ಎಂದು ತಿಳಿಸಿದರು.

    2019ರ ನವೆಂಬರ್​ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಕಳೆದುಕೊಂಡ ಶಿವಸೇನೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​-ಎನ್​ಸಿಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದೆ. ಮಹಾ ಅಘಾಡಿ ಸರ್ಕಾರದ ಮುಖ್ಯಮಂತ್ರಿಯಾಗಿ ನವೆಂಬರ್​ 28ರಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಉದ್ಧವ್​ ಠಾಕ್ರೆಯವರು ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ.

    ಉದ್ಧವ್​ ಠಾಕ್ರೆಯವರು ಹಿಂದುತ್ವ ಅಜೆಂಡಾ ಇಟ್ಟುಕೊಂಡು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದ ಶಿವಸೇನಾ ನಾಯಕ ಸಂಜಯ್ ರಾವತ್ ಅವರು, ಶಿವಸೇನೆಗೆ ಹಿಂದುತ್ವದ ವಿಚಾರದಲ್ಲಿ ಗಿಮಿಕ್​ಗಳನ್ನು ಮಾಡುವ ಯಾವುದೇ ಅಗತ್ಯವೂ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts