More

    ಸ್ವಯಂ ಸಾಕ್ಷಾತ್ಕಾರವೇ ಯೋಗದ ಗುರಿ

    ನರೇಗಲ್ಲ: ಯೋಗ ಎಂಬುದು ಸಂಸ್ಕೃತ ಭಾಷೆಯ ಯುಜ್ ಎಂಬ ಪದದಿಂದ ಬಂದಿದೆ. ಯೋಗವೆಂದರೆ ಜೋಡಿಸು, ಸೇರಿಸು, ಕೂಡಿಸು ಎಂಬ ಆರ್ಥ ಬರುತ್ತದೆ.

    ಯೋಗವೆಂದರೆ ಸಮಾದಿ, ಉಪಾಯ, ಸಾಧನ ಎಂಬ ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜತೆ ಮನಸು, ಬುದ್ದಿ , ಭಾವನೆ, ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ ಎಂದು ಮುಖ್ಯ ಶಿಕ್ಷಕ ಬಸವರಾಜ ಕುರಿ ಹೇಳಿದರು.


    ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
    ಯೋಗದ ಗುರಿ ಸ್ವಯಂ ಸಾಕ್ಷಾತ್ಕಾರವಾಗಿದೆ. ಜೀವನ, ಆರೋಗ್ಯ ಮತ್ತು ಸಾಮರಸ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯವನ್ನು ಅನುಭವಿಸುವುದು ಯೋಗಾಭ್ಯಾಸದ ಉದ್ದೇಶವಾಗಿದೆ.

    ಮಕ್ಕಳು ಬಾಲ್ಯದಿಂದಲೇ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದರು.
    ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಜೀವನಬಿ ಲಕ್ಷ್ಮೇಶ್ವರ, ಎನ್.ಎಲ್. ಚಹ್ವಾಣ, ಡಿ.ವಿ. ಕಳ್ಳಿ, ಎಸ್.ಎಚ್. ಹಾದಿಮನಿ, ಎಂ.ಎಸ್. ಮಾಳಶೆಟ್ಟಿ, ಜೆ.ಎ. ಪಾಟೀಲ, ಎಂ.ಪಿ. ಅಣಗೌಡರ, ಎಸ್.ಐ. ಜಗಾಪೂರ ಇತರರಿದ್ದರು.


    ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
    ಪಟ್ಟಣದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿಶ್ವ ಯೋಗ ದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ಎಸ್.ವಿ. ಹಿರೇಮಠ, ವಿ.ಪಿ. ಗ್ರಾಮಪೂರೋಹಿತ, ಎಸ್.ಕೆ. ಕುಲಕರ್ಣಿ, ಎಂ.ವಿ. ಕಡೆತೋಟದ, ವಿ.ಎಸ್. ಜಾಧವ, ಎಸ್.ಎಚ್. ಮಾನ್ವಿ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ಜೆ . ವಿ. ಕೆರಿಯವರ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts