More

    ಸ್ವಯಂ ಲಾಕ್‌ಡೌನ್‌ನಿಂದ ಕರೊನಾ ಮುಕ್ತ

    ಚಿಕ್ಕೋಡಿ: ಸರ್ಕಾರದ ಮಾರ್ಗಸೂಚಿ ಪಾಲಿಸಿ, ಸ್ವಯಂ ಲಾಕ್‌ಡೌನ್ ಮಾಡಿಕೊಳ್ಳುವ ಮೂಲಕ ಕರೊನಾ ವೈರಸ್ ಹರಡದಂತೆ ನೋಡಿಕೊಂಡರೆ, ಚಿಕ್ಕೋಡಿ ಲೋಕಸಭೆ ಕ್ಷೇತ್ರ ಕರೊನಾ ಮುಕ್ತವಾಗಲಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ಸೋಮವಾರ ಪಟ್ಟಣದ ಹೊರ ವಲಯದಲ್ಲಿ ಸರ್ಕಾರದಿಂದ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಮಾತನಾಡಿದರು. ವೈರಸ್ ಹರಡಿದ ಮೇಲೆ ವ್ಯವಸ್ಥೆ ಇಲ್ಲ ಎನ್ನುವುದಕ್ಕಿಂತ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದರು. ತಹಸೀಲ್ದಾರ್ ಸುಭಾಷ ಸಂಪಗಾವಿ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ 42 ಹಾಸಿಗೆ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಜಗದೀಶ ಕವಟಗಿಮಠ, ವೈದ್ಯಾಧಿಕಾರಿ ಡಾ. ಸಂತೋಷ ಕೊಣ್ಣುರೆ, ಪುರಸಭೆ ಮುಖ್ಯಾಧಿಕಾರಿ ಡಾ. ಸುಂದರ ರೂಗೆ, ಬಿಇಒ ಬಿ.ಎ. ಮೇಕನಮರಡಿ, ಸಂಜಯ ಅರಗೆ, ಪ್ರವೀಣ ಕಾಂಬಳೆ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

    ತೆಲಸಂಗ ವರದಿ: ಕರೊನಾ ವೈರಸ್ ನಿಯಂತ್ರಿಸಲು ಮಂಗಳವಾರ ನಡೆಯುವ ತೆಲಸಂಗ ಗ್ರಾಮದ ವಾರದ ಸಂತೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಪಿಡಿಒ ಬೀರಪ್ಪ ಕಡಗಂಚಿ ತಿಳಿಸಿದ್ದಾರೆ.

    ಸೋಮವಾರ ಗ್ರಾಮದಲ್ಲಿ ಧ್ವನಿವರ್ಧಕ ಮುಖಾಂತರ ವಾರದ ಸಂತೆ ಬಂದ್ ಮಾಡಿರುವ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು. ಮಂಗಳವಾರ ದಿನವಿಡಿ ಕಿರಾಣಿ ಅಂಗಡಿ, ಚಹಾ ಅಂಗಡಿ, ಪಾನ್‌ಶಾಪ್ ತೆರೆಯುವಂತಿಲ್ಲ. ತರಕಾರಿ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ. ನಿಯಮ ಪಾಲಿಸದಿದ್ದರೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts