More

    ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ

    ಹಾವೇರಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ಮಂಗಳವಾರ ಮತದಾನ ನಡೆಯಿತು. ಸಾಮಾನ್ಯ ಮಹಿಳಾ ಸ್ಥಾನದಿಂದ 6, ಸಾಮಾನ್ಯ ಪುರುಷ ಸ್ಥಾನದಿಂದ 11 ಶಿಕ್ಷಕರು ಆಯ್ಕೆಯಾಗಿದ್ದಾರೆ.

    ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಚುನಾವಣೆಯಲ್ಲಿ ಸಾಮಾನ್ಯ ಪುರುಷರ 11 ಸದಸ್ಯ ಸ್ಥಾನಗಳಿಗೆ 22 ಹಾಗೂ 6 ಸಾಮಾನ್ಯ ಮಹಿಳಾ ಸದಸ್ಯ ಸ್ಥಾನಗಳಿಗೆ 12 ಜನ ಅಖಾಡಕ್ಕಿಳಿದಿದ್ದರು. ಬೆಳಗ್ಗೆ 7.30ರಿಂದ ಸಂಜೆ 4ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು 870 ಮತಗಳಲ್ಲಿ 830ಕ್ಕೂ ಅಧಿಕ ಶಿಕ್ಷಕರು ಹಕ್ಕು ಚಲಾಯಿಸಿದ್ದರು. ಸಂಜೆ 5ಗಂಟೆಯ ನಂತರ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡು ತಡರಾತ್ರಿಯವರೆಗೆ ನಡೆಯಿತು.

    ಸಾಮಾನ್ಯ ಮಹಿಳಾ ಸ್ಥಾನದಿಂದ ಎಸ್.ಕೆ. ಕೋರಿ (443 ಪಡೆದ ಮತಗಳು), ಪಿ.ಟಿ. ಕಾಮನಹಳ್ಳಿ(436), ಎ.ಎ. ಕಾಕೋಳ(411), ಎ.ಎಸ್. ಹೊನ್ನತ್ತಿ(396), ಎಫ್.ಎಂ. ಮಲ್ಲೂರ(388), ಎಚ್.ಸಿ. ಪೂಜಾರ(386) ಮತಗಳಿಸಿ ಆಯ್ಕೆಯಾದರು.

    ಸಾಮಾನ್ಯ ಪುರುಷ ಸ್ಥಾನದಿಂದ ಎ.ಎಚ್. ಹವಾಲ್ದಾರ(487), ಬಿ.ಎಂ. ಅರಳಿ(426), ಎ.ಪಿ. ಗಡ್ಡದ(402), ವಿ.ಆರ್. ಕಿತ್ತೂರಮಠ(401), ಇ.ಸಿ. ಅಗಸಿಬಾಗಿಲ(401), ಬಿ.ಎಸ್. ಹಳೇಮನಿ(400), ಎನ್.ಜಿ. ಅಂಗಡಿ(380), ಎಸ್.ಎಲ್. ಕಾಕೋಳ(378), ಆರ್.ಬಿ. ಕುಂದಗೋಳ(374), ಎಸ್.ಬಿ. ಮಠದ(373), ಎಚ್.ಎಂ. ಮಲ್ಲಾಡದ(368) ಮತಗಳಿಸಿ ಆಯ್ಕೆಯಾಗಿದ್ದಾರೆ ಎಂದು ಸಹ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಂಕರ ಸುತಾರ ತಿಳಿಸಿದ್ದಾರೆ.

    ರಾಣೆಬೆನ್ನೂರ ತಾಲೂಕು: ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಸ್ಥಾನದಿಂದ 6, ಸಾಮಾನ್ಯ ಪುರುಷ ಸ್ಥಾನದಿಂದ 13 ಶಿಕ್ಷಕರು ಆಯ್ಕೆಯಾಗಿದ್ದಾರೆ ಎಂದು ಸಹ ಚುನಾವಣಾಧಿಕಾರಿ ಶಿವಾನಂದ ಬಗಾದಿ ತಿಳಿಸಿದ್ದಾರೆ.

    ಸಾಮಾನ್ಯ ಪುರುಷರ 13 ಸದಸ್ಯ ಸ್ಥಾನಗಳಿಗೆ 26 ಹಾಗೂ 6 ಸಾಮಾನ್ಯ ಮಹಿಳಾ ಸದಸ್ಯ ಸ್ಥಾನಗಳಿಗೆ 12 ಶಿಕ್ಷಕರು ಸ್ಪರ್ಧಿಸಿದ್ದರು. ನಗರದ ತಾಲೂಕು ಗುರುಭವನದಲ್ಲಿ ಬೆಳಗ್ಗೆ 7.30ರಿಂದ ಸಂಜೆ 4ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

    ಆಯ್ಕೆಯಾದವರು: ಸಾಮಾನ್ಯ ಮಹಿಳಾ ಸ್ಥಾನದಿಂದ ಗೀತಾ ಅಜ್ಜವಡಿಮಠ, ಸಾವಕ್ಕ ಮಲ್ಲನಗೌಡರ, ಎಸ್.ಎಸ್. ಕಟಗಿ, ಲಲಿತಾ ಶಾಮನೂರ, ಸರೋಜಿನಿ ಭರಮಗೌಡರ, ವಿಮಲಾ ಶಿಡಗನಾಳ ಹಾಗೂ ಸಾಮಾನ್ಯ ಪುರುಷ ಸ್ಥಾನದಿಂದ ಕೆ.ವಿ. ಕಾಟಣ್ಣನವರ, ರವಿ ಗೋಣೆಪ್ಪನವರ, ಬಿ.ಪಿ. ಶಿಡೇನೂರ, ಸುರೇಶ ಕೋಟಿಹಾಳ, ಎಸ್.ಎಚ್. ಮೇಟಿ, ಎಸ್.ಕೆ. ಹೇಮಂತ, ಅಶೋಕ ಲೆಕ್ಕಪ್ಪಳವರ, ಎಚ್.ಎಂ. ಸುತಾರ, ಫಕೀರಪ್ಪ ಬೀರಜ್ಜನವರ, ಎನ್.ಎಂ. ಚವಡಣ್ಣನವರ, ಎನ್.ಎಚ್. ದೇವಾಂಗದ, ಜದಗೀಶ ಕೃಷ್ಣಪ್ಪನವರ, ಜಿ.ಎಲ್. ಪದಕಿ ಸೇರಿ 19 ಶಿಕ್ಷಕರು ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಹಿತರಕ್ಷಣಾ ವೇದಿಕೆಗೆ ಆಡಳಿತ ಚುಕ್ಕಾಣಿ: ಹಿರೇಕೆರೂರ: ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ 9 ಸದಸ್ಯ ಸ್ಥಾನಗಳಲ್ಲಿ ಹಿತರಕ್ಷಣಾ ವೇದಿಕೆಯ 5 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.

    ಹಿತರಕ್ಷಣಾ ವೇದಿಕೆ ಹಾಗೂ ಶಿಕ್ಷಕರ ಸ್ನೇಹಿ ಬಳಗದ ನಡುವೆ ಸ್ಪರ್ಧೆ ಏರ್ಪಟ್ಟಿತು. ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಜರುಗಿದ ಮತದಾನದಲ್ಲಿ ಒಟ್ಟು 425 ರಲ್ಲಿ 418 ಮತಗಳು ಚಲಾವಣೆಗೊಂಡವು. ಹಿತರಕ್ಷಣಾ ವೇದಿಕೆಯ ಕುಮಾರ ಪುಟ್ಟಪ್ಪಗೌಡ್ರ, ರಮೇಶ ಪೂಜಾರ, ಎಂ.ಎಂ. ಮಕರಿ, ಅನುರಾಧಾ ಬಿ., ಪ್ರೇಮಿಳಾ ಪಾಟೀಲ ಆಯ್ಕೆಯಾದರು. ಶಿಕ್ಷಕ ಸ್ನೇಹಿ ಬಳಗದಿಂದ ಬಿ.ಬಿ.ಕಣಸೋಗಿ, ಎಸ್.ಎಸ್. ಚಿನ್ನಿಕಟ್ಟಿ, ಪಿ.ಎಸ್. ಸಾಲಿ, ಶಶಿಕಲಾ ಅತ್ತಿಕಟ್ಟಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ನಿವೃತ್ತ ಮುಖ್ಯಶಿಕ್ಷಕ ಎಸ್.ಎಂ. ಕಾಟಾಪುರ ಕಾರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts