More

    ವಿರಾಜಪೇಟೆ ಕ್ಷೇತ್ರದ ಅದೃಷ್ಟಶಾಲಿಗಳ ಆಯ್ಕೆ

    ಸಿದ್ದಾಪುರ: ಮಾಲ್ದಾರೆಯ ಸಹಕಾರ ಕೃಷಿ ಪತ್ತಿನ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ವಿರಾಜಪೇಟೆ ಕ್ಷೇತ್ರದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

    • ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರಮಟ್ಟದ ಯೋಗಪಟು, ಲೇಖಕಿ ಹಾಗೂ ಶಿಕ್ಷಕಿ ಪಿ.ಎಚ್.ಅಲಿಮ, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಸಂಜೀವಿನಿ ಒಕ್ಕೂಟದ ಎಲ್ಸಿಆರ್ ಪಿ.ಪುಷ್ಪಾ, ಮಾಲ್ದಾರೆ ಪ್ರೌಢಶಾಲಾ ಮುಖ್ಯಶಿಕ್ಷಕಿ ಈಶ್ವರಿ, ಆದಿವಾಸಿ ಮಹಿಳಾ ಮುಖಂಡರಾದ ಮುತ್ತಮ್ಮ ಅವರು ಸ್ಪರ್ಧಾರ್ಥಿಗಳು ಭರ್ತಿ ಮಾಡಿದ್ದ ಉತ್ತರದ ಚೀಟಿಗಳಲ್ಲಿ ಎತ್ತುವ ಮೂಲಕ ಐವರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು.
    • ಬಲ್ಲಮಾವಟಿ ಗ್ರಾಮದ ರೇಖಾ ಪ್ರಕಾಶ್, ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ವಸತಿಗೃಹ ನಿವಾಸಿ ಜ್ಯೋತಿ, ಬೇಗೂರು ಗ್ರಾಮದ ಎ.ಕೆ.ರಮ್ಯಾ, ಕಾನೂರು ಗ್ರಾಮದ ಬಿ.ಇ.ಪಕೀಲ, ಕುಂದ ಗ್ರಾಮದ ಟಿ.ಎಂ.ರಾಧಾ ಅದೃಷ್ಟಶಾಲಿಗಳಾಗಿ ಆಯ್ಕೆಯಾದರು.
    • ಮುಖ್ಯ ಅತಿಥಿ ಪಿ.ಎಚ್.ಅಲಿಮ ಮಾತನಾಡಿ, ಪ್ರಪಂಚದ ಪ್ರಚಲಿತ ಸುದ್ದಿ ಮತ್ತು ಘಟನೆಗಳ ಜ್ಞಾನವನ್ನು ಒದಗಿಸುವ ಪತ್ರಿಕೆಗಳನ್ನು ಓದುವುದು ನಿಜವಾಗಿಯೂ ಉತ್ತಮ ಅಭ್ಯಾಸ. ಪತ್ರಿಕೆಗಳು ಜಗತ್ತು, ದೇಶ, ಪಟ್ಟಣ ಮತ್ತು ಹತ್ತಿರದ ಪ್ರದೇಶಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಸಾಕಷ್ಟು ಮಾಹಿತಿ ಒದಗಿಸುತ್ತವೆ ಎಂದರು.
    • ‘ಲಲಿತಾ’ ಪುರವಣಿ ಮೂಲಕ ಸೌಂದರ್ಯ ಸೇರಿದಂತೆ ಬಹಳಷ್ಟು ವಿಷಯಗಳ ಬಗ್ಗೆ ಮಾಹಿತಿ ಕೊಡುವ ವಿಜಯವಾಣಿ ಪತ್ರಿಕೆ ಮಹಿಳೆಯರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಆಯೋಜಿಸಿದೆ. ಈ ಮೂಲಕ ಮಹಿಳೆಯರು ನಿತ್ಯವೂ ಪತ್ರಿಕೆ ಓದಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲ ಕಲ್ಪಿಸಿದೆ ಎಂದು ಅಭಿಪ್ರಾಯಪಟ್ಟರು.
    • ಮಾಲ್ದಾರೆ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಈಶ್ವರಿ ಮಾತನಾಡಿ, ಸ್ಪರ್ಧೆಗಳು ಮತ್ತು ರಸಪ್ರಶ್ನೆ ಕಾರ್ಯಕ್ರಮಗಳ ತಯಾರಿಕೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆಗಳು ಮಾಹಿತಿಯ ನಿಧಿಯಾಗಿವೆ. ಸುತ್ತಮುತ್ತ ಪ್ರಸ್ತುತ ಏನು ನಡೆಯುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಯಾವ ವಸ್ತುವಿಷಯಗಳು ಪ್ರಚಲಿತದಲ್ಲಿವೆ ಎಂಬುದರ ಕುರಿತು ಅನನ್ಯ ಕಲ್ಪನೆಗಳನ್ನು ಪಡೆಯಬಹುದು ಎಂದು ತಿಳಿಸಿದರು.
    • ಸಂಜೀವಿನಿ ಒಕ್ಕೂಟದ ಎಲ್ಸಿಆರ್ ಪಿ.ಪುಷ್ಪಾ ಮಾತನಾಡಿ, ಮಕ್ಕಳು ಮತ್ತು ಮನೆಯ ಕೆಲಸವೆಂದು ಮಹಿಳೆಯರು ಅಡುಗೆ ಮನೆಯಲ್ಲಿಯೇ ಕಳೆದುಹೋಗಬಾರದು. ಬಿಡುವಿನ ಸಮಯದಲ್ಲಿ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅದಕ್ಕಾಗಿ ವಿಜಯವಾಣಿ ಆಯೋಜಿಸಿದ್ದ ಸ್ಪರ್ಧೆ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.
    • ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯೋಗ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಪಿ.ಎಚ್.ಅಲಿಮ ಅವರನ್ನು ಸನ್ಮಾನಿಸಲಾಯಿತು.
    • ಜನಪರ ಸಂಘಟನೆಯ ಅಧ್ಯಕ್ಷ ಭಾವ ಮಾಲ್ದಾರೆ, ಅಂಗನವಾಡಿ ಶಿಕ್ಷಕರ ತಾಲೂಕು ಕಾರ್ಯದರ್ಶಿ ಲೀಲಾವತಿ, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸುಜಿತಾ ಹಾಗೂ ತಂಡದ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಣಿ, ಹೇಮಾವತಿ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts